Back To Top

 ರೈತ ಬೆಳೆದ 4,000 ಗಂಧದ ಮರಗಳಲ್ಲಿ 2,000 ಮರಗಳು ಕಳ್ಳರ ಪಾಲು
April 15, 2025

ರೈತ ಬೆಳೆದ 4,000 ಗಂಧದ ಮರಗಳಲ್ಲಿ 2,000 ಮರಗಳು ಕಳ್ಳರ ಪಾಲು

ಮಾಗಡಿಯ (Magadi) ರೈತರೊಬ್ಬರು (Farmer) ಬೆಳೆದಿದ್ದ 4,000 ಗಂಧದ ಮರಗಳಲ್ಲಿ (Sandalwood) ಸುಮಾರು 2000 ಮರಗಳು ಕಳ್ಳರ ಪಾಲಾಗಿವೆ.

ರಾಮನಗರ: ಮಾಗಡಿಯ (Magadi) ರೈತರೊಬ್ಬರು (Farmer) ಬೆಳೆದಿದ್ದ 4,000 ಗಂಧದ ಮರಗಳಲ್ಲಿ (Sandalwood) ಸುಮಾರು 2000 ಮರಗಳು ಕಳ್ಳರ ಪಾಲಾಗಿವೆ.
ಮಾಗಡಿ ತಾಲೂಕಿನ ಅತ್ತಿಂಗೆರೆ ಗ್ರಾಮದ ಸೋಮಕ್ಕನಮಠದ ಬಳಿಯ 12 ಎಕರೆ ಜಮೀನಿನಲ್ಲಿ ಪಂಚಲಿಂಗಯ್ಯ ಹಾಗೂ ಸಹೋದರ ಮಹಾಲಿಂಗಯ್ಯ ಎಂಬವರು ಮೈಸೂರು ಸ್ಯಾಂಡಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಳೆದ 10 ವರ್ಷದಿಂದ ಶ್ರೀಗಂಧ ಬೆಳೆದಿದ್ದರು. ಸುಮಾರು 4 ಸಾವಿರಕ್ಕೂ ಅಧಿಕ ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು.
ಇತ್ತೀಚಿಗೆ ಕಳ್ಳರು ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಶ್ರೀಗಂಧದ ಮರಗಳನ್ನ ಕಡಿದು ಹೊತ್ತೊಯ್ದಿದ್ದಾರೆ. ಸುಮಾರು 2 ಸಾವಿರ ಶ್ರೀಗಂಧದ ಮರಗಳನ್ನ ಕಳ್ಳತನ ಮಾಡಲಾಗಿದೆ. ಇದರಿಂದ ಕೋಟ್ಯಂತರ ರೂ. ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ ರೈತ, ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಹಾವಳಿ ತಪ್ಪಿಸುವಂತೆ ಮನವಿ ಮಾಡಲಾಗಿದೆ.

Prev Post

ತಂದೆಯ ಸ್ನೇಹಿತ ಎಂದು ಕರೆ ಮಾಡಿದ ಸೈಬರ್‌ ವಂಚಕನಿಗೆ ಪಾಠ ಕಲಿಸಿದ ಯುವತಿ

Next Post

ಪತ್ನಿಯ ಕಾಟಕ್ಕೆ ಬೇಸತ್ತು, ಪೆಟ್ರೋಲ್ ಸುರವಿಕೊಂಡು ವ್ಯಕ್ತಿ ಆತ್ಮಹತ್ಯೆ ಯತ್ನ

post-bars

Leave a Comment

Related post