Back To Top

 ತಿರುಪತಿಗೆ ಮುಡಿ ಸಮರ್ಪಣೆ ಮಾಡಿದ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ

ತಿರುಪತಿಗೆ ಮುಡಿ ಸಮರ್ಪಣೆ ಮಾಡಿದ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ

hhhhf

ಆಂಧ್ರ ಪ್ರದೇಶ: ಉಪ ಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ (Anna Lezhneva) ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಪುತ್ರ ಮಾರ್ಕ್ ಶಂಕರ್ (Mark Shankar) ಸಿಂಗಾಪುರದಲ್ಲಿ ಅಗ್ನಿ ಅವಘಡದಿಂದ ಪಾರಾಗಿದ್ದ.
ಎಂಟು ವರ್ಷ ವಯಸ್ಸಿನ ಮಾರ್ಕ್ ಶಂಕರ್ಗೆ ಸುಟ್ಟ ಗಾಯಗಳಾಗಿದ್ದವು. ಆತ ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆತನನ್ನು ಭಾರತಕ್ಕೆ ವಾಪಸ್ ಕರೆದುಕೊಂಡು ಬರಲಾಗಿದೆ. ಈ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಪತ್ನಿ (Pawan Kalyan Wife) ಅನ್ನಾ ಲೆಜ್ನೆವಾ ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

Prev Post

ವಿಶ್ವವಿಖ್ಯಾತ ಬೆಂಗಳೂರಿನ ಪ್ರಸಿದ್ಧ ದ್ರೌಪದಿ ದೇವಿ ಕರಗ ಶಕ್ತ್ಯೋತ್ಸವ ಸಂಪನ್ನ

Next Post

ಆಸ್ತಿ ವಿವಾದ: ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಲೆ

post-bars

Leave a Comment

Related post