Back To Top

 ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ: ಅಪ್ರಾಪ್ತ ಸೇರಿ ಐವರ ಬಂಧನ
April 12, 2025

ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ: ಅಪ್ರಾಪ್ತ ಸೇರಿ ಐವರ ಬಂಧನ

ಇತ್ತೀಚೆಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ (Muslim Girl) ಮೇಲೆ ನೈತಿಕ ಪೊಲೀಸ್‌ಗಿರಿ ಎಸಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು.

1200 675 18845114 thumbnail 16x9 sanjuuu

ಬೆಂಗಳೂರು: ಇತ್ತೀಚೆಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ (Muslim Girl) ಮೇಲೆ ನೈತಿಕ ಪೊಲೀಸ್‌ಗಿರಿ ಎಸಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಮಾತನಾಡುತ್ತ ಕುಳಿತಿದ್ದ ಯುವತಿಯನ್ನ ನಿಂದಿಸಿ ಹಲ್ಲೆಗೆ ಯತ್ನಿಸಿದ್ದ ಅಪ್ರಾಪ್ತ ಯುವಕ ಸೇರಿ ಐವರನ್ನ ಚಂದ್ರಾಲೇಔಟ್ ಪೊಲೀಸರು (Chandra Layout Police) ಬಂಧಿಸಿದ್ದಾರೆ.
ಮಹೀಮ್, ಅಫ್ರೀದಿ, ವಾಸೀಮ್, ಅಂಜುಮ್ ಬಂಧಿತರು. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್‌ನಲ್ಲಿ ಯುವತಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಯಾಕೆ ಕೂತಿದ್ಯಾ? ನಿನಗೆ ಮಾನ ಮರ್ಯಾದೆ ಇಲ್ವಾ? ನಿಮ್ಮ ಮನೆಯವರ ಫೋನ್ ನಂಬರ್ ಕೊಡು ಎಂದು ಕ್ಯಾತೆ ತೆಗೆದಿದ್ದರು.
ಆ ಸಂದರ್ಭದಲ್ಲಿ ಯುವತಿ, ನನ್ನ ಕ್ಲಾಸ್‌ಮೇಟ್ ಜೊತೆ ನಾನು ಮಾತನಾಡುತ್ತಿದ್ದೇನೆ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಪ್ರತ್ಯುತ್ತರ ನೀಡಿದ್ದಳು.
ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಆರೋಪಿಗಳು ಯುವಕ ಹಾಗೂ ಯುವತಿಯು ಬೈಕ್‌ನಲ್ಲಿ ಕೂತು ಮಾತನಾಡುತ್ತಿದ್ದ ವೀಡಿಯೋ ವೈರಲ್ ಮಾಡಿದ್ದರು.
ಸದ್ಯ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Prev Post

ಕುಡಿಯುವ ನೀರು ಕೂಡ ಅಪಾಯಕಾರಿ: ಪರೀಕ್ಷೆಗೊಳಪಡಿಸದಿದ್ದರೆ ಮನುಷ್ಯನ ಜೀವಕ್ಕೆ ಕಂಟಕ

Next Post

ಮುಂಬೈ ದಾಳಿ ಸಂಚುಕೋರ ಕೆನಡಾ ಪ್ರಜೆ ತಹವ್ವುರ್‌ ಹುಸೇನ್‌ ರಾಣ ಭಾರತದ ಕೈಯಲ್ಲಿ

post-bars

Leave a Comment

Related post