Back To Top

 ಮೆಟ್ರೋ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಜೋಡಿಗಳು: ವಿಡಿಯೋ ವೈರಲ್
April 11, 2025

ಮೆಟ್ರೋ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಜೋಡಿಗಳು: ವಿಡಿಯೋ ವೈರಲ್

ಮೆಟ್ರೋ ನಿಲ್ದಾಣದಲ್ಲಿ (Bengaluru Metro) ಯುವಕ ಯುವತಿಯರಿಬ್ಬರು ಸಾರ್ವಜನಿಕವಾಗಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಮೆಟ್ರೋ ಹತ್ತಲು ಸಾಲಿನಲ್ಲಿ ನಿಂತಿರುವ ಜೋಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಇವರಿಬ್ಬರ ಈ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ (Bengaluru Metro) ಯುವಕ ಯುವತಿಯರಿಬ್ಬರು ಸಾರ್ವಜನಿಕವಾಗಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಮೆಟ್ರೋ ಹತ್ತಲು ಸಾಲಿನಲ್ಲಿ ನಿಂತಿರುವ ಜೋಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಇವರಿಬ್ಬರ ಈ ವರ್ತನೆಗೆ ಸಹ ಪ್ರಯಾಣಿಕರು ಕಿಡಿಕಾರಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಫ್ಲ್ಯಾಟ್ ಫಾರ್ಮ್ -3ಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ. ಮೆಟ್ರೋ ಏರಲು ಪ್ರಯಾಣಿಕರು ಸಾಲಾಗಿ ನಿಂತಿದ್ದಾರೆ. ಅದೇ ಸಾಲಿನ ಎದುರಿನಲ್ಲಿರುವ ಈ ಜೋಡಿ (Viral Video) ಸಾರ್ವಜನಿಕವಾಗಿಯೇ ಪಕ್ಕದಲ್ಲಿ ಮಹಿಳೆಯರು,ಹಿರಿಯರಿದ್ರೂ ರೋಮ್ಯಾನ್ಸ್ ಮಾಡಿದೆ.
ಸದ್ಯ ವೈರಲ್‌ ಆದ ವಿಡಿಯೋಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ.‌ ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದು ಕೆಲವರು ಹೇಳಿದ್ದಾರೆ. ಸದ್ಯ ವೈರಲ್‌ ಆದ ವಿಡಿಯೋ 1 ನಿಮಿಷ 30 ಸೆಕಂಡ್ ಇದ್ದು, ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆಯು ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತದೆ. ಸದ್ಯ ಈ ಜೋಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ.

Prev Post

ಮದುವೆಗೆ ಧರ್ಮ ಅಡ್ಡಿ: ಪ್ರೇಯಸಿ ದುಪಟ್ಟಾದಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

Next Post

ಚೀನಾ- ಅಮೆರಿಕ ನಡುವಿನ ಪ್ರತಿಸುಂಕದ ವ್ಯಾಪಾರ ಬಿಕ್ಕಟ್ಟು: ಚಿನ್ನದ ಬೆಲೆ ಏರಿಕೆ

post-bars

Leave a Comment

Related post