Back To Top

 ಸಾವಿನ ನಂತರ ಉಳಿಯುವುದು ನಮ್ಮ ಸಾಧನೆ ಮತ್ತು ಹೆಸರು ಮಾತ್ರ.ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಜೀವನ ನಮಗೆ ಆದರ್ಶ
April 8, 2025

ಸಾವಿನ ನಂತರ ಉಳಿಯುವುದು ನಮ್ಮ ಸಾಧನೆ ಮತ್ತು ಹೆಸರು ಮಾತ್ರ.ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಜೀವನ ನಮಗೆ ಆದರ್ಶ

ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊನೆಗೂ ಸಾವೆ ಗೆದ್ದಿತು. 50 ವರ್ಷ ವಯಸ್ಸಿನ ಮೈಕಲ್ ಜಾಕ್ಸನ್ ಶವವಾಗಿ ಮಲಗಿದ.
ಮೈಕಲ್ ಜಾಕ್ಸನ್ 150 ವರ್ಷ ಬದುಕಲು ಮಾಡಿಕೊಂಡಿದ್ದ ತಯಾರಿ ಹೇಗಿತ್ತು ಗೊತ್ತೆ? ಅಚ್ಚರಿ ಆದರೂ ಸತ್ಯ

ನವದೆಹಲಿ: ನಿಮಗೆ ವಿಶ್ವ ವಿಖ್ಯಾತ ನೃತ್ಯ ಪಟು ಮೈಕಲ್ ಜಾಕ್ಸನ್ ಗೊತ್ತಲ್ಲ. ಆತ 150 ವರ್ಷ ಬದುಕುತ್ತೇನೆ ಎಂದು ಸಾವಿಗೆ ಚಾಲೆಂಜ್ ಮಾಡಿದ್ದ, ಆದರೆ ಕೊನೆಗೂ ಸಾವೆ ಗೆದ್ದಿತು. 50 ವರ್ಷ ವಯಸ್ಸಿನ ಮೈಕಲ್ ಜಾಕ್ಸನ್ ಶವವಾಗಿ ಮಲಗಿದ.
ಮೈಕಲ್ ಜಾಕ್ಸನ್ 150 ವರ್ಷ ಬದುಕಲು ಮಾಡಿಕೊಂಡಿದ್ದ ತಯಾರಿ ಹೇಗಿತ್ತು ಗೊತ್ತೆ? ಅಚ್ಚರಿ ಆದರೂ ಸತ್ಯ ̤
ಕ್ಯಾಲಿಫೋರ್ನಿಯಾ ಲಾಸ್ ಏಂಜೆಲ್ಸ್ ನಗರದ 12 ಜನ ವಿಶ್ವ ಪ್ರಸಿದ್ಧ ವೈದ್ಯರನ್ನು ಕೆಲಸಕ್ಕೆ ನೇಮಿಸಿದ್ದ, ಪ್ರತಿ ದಿನ ಅವರು ಮೈಕಲ್ ಜಾಕ್ಸನ್ ಪರೀಕ್ಷೆ ಮಾಡುತಿದ್ದರು ̤

38a9d7b0 1943 4364 b346 0f1037231ea5

ಮೈಕಲ್ ಜಾಕ್ಸನ್ ಊಟ ಪ್ರತಿ ದಿನ ಯ ಲ್ಯಾಬೋರೇಟರಿಯಲ್ಲಿ ತಪಾಸಣೆ ಆದ ನಂತರ ಸೇವಿಸುತ್ತಿದ್ದ. 15 ಜನರನ್ನು ತನ್ನ ವ್ಯಾಯಾಮ ಮತ್ತು ಇತರ ದಿನನಿತ್ಯದ ಕೆಲಸಕ್ಕೆ ನೇಮಿಸಿದ್ದ. ಮಲಗುವ ಹಾಸಿಗೆಯಲ್ಲಿ ತಂತ್ರಜ್ಞಾನದ ಮೂಲಕ ಆಮ್ಲಜನಕ ನಿಯಂತ್ರಣದ ವ್ಯವಸ್ಥೆ ಮಾಡಿಕೊಂಡಿದ್ದ. ತನ್ನ ಆರೋಗ್ಯದಲ್ಲಿ ಏರುಪೇರು ಆದಾಗ ಯಾವುದೇ ತೊಂದರೆ ಆಗಬಾರದು ಎಂದು ದೇಹದ ಅಂಗಾಂಗ ದಾನ ಮಾಡುವವರನ್ನು ಅತೀ ಹೆಚ್ಚು ಬೆಲೆಗೆ ಖರೀದಿ ಮಾಡಿದ್ದ
ಕಾರಣ ಇಷ್ಟೇ 150 ವರ್ಷ ಬದುಕುವ ಕನಸು ಈ ಎಲ್ಲಾ ತಯಾರಿಗೆ ಕಾರಣವಾಗಿತ್ತು.
ಕಾಲದ ತೀರ್ಮಾನದ ಮುಂದೆ ಮೈಕಲ್ 150 ವರ್ಷ ಬದುಕುವ ಕನಸ್ಸು ಕಮರಿತ್ತು. 25 ಜೂನ್ 2009 ರಂದು ಮೈಕಲ್ ಜಾಕ್ಸನ್ ಎನ್ನುವ ದೈತ್ಯ ಪ್ರತಿಭೆ ತನ್ನ 50 ವಯಸ್ಸಿ ನಲ್ಲಿ ಇಹಲೋಕ ತ್ಯಜಿಸಿದ 150 ವರ್ಷ ಬದುಕಲೇ ಬೇಕು ಎಂದು 25 ವರ್ಷಗ ಳ ತಯಾರಿ ಮಣ್ಣು ಪಾಲಾಗಿತ್ತು,12 ಜನ ವಿಶ್ವ ಪ್ರಸಿದ್ಧ ವೈದ್ಯರು ಮತ್ತು ಲಾಸ್ ಏಂಜೆಲ್ಸ್ ಕ್ಯಾಲಿಫೋರ್ನಿಯಾ ವೈದ್ಯರು ಕೈಚೆಲ್ಲಿ ಕುಳಿತಿದ್ದರು, ಆಕ್ಸಿಜನ್ ಹಾಸಿಗೆ ಕೆಲಸಕ್ಕೆ ಬರಲಿಲ್ಲ, ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಆದ ಊಟ ಹಳಸಿತ್ತು, ಅಂಗಾಂಗ ದಾನ ಮಾಡುವವರು,15 ಜನ ಅಂಗ ರಕ್ಷಕರು ಮೈಕಲ್ ಹೆಣದ ಮುಂದೆ ಬದುಕಿ ರೋಧಿಸುತ್ತಿದ್ದರು.
ಮೈಕಲ್ ಜಾಕ್ಸನ್ ಸಾಕಷ್ಟು ಬಡವರಿಗೆ ಸಹಾಯಹಸ್ತ ಚಾಚಿದ್ದ. ಆದರೂ ವಿಧಿಯಾಟದ ಮುಂದೆ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಸತ್ಯ ಕಥೆಯ ಸಾರಾಂಶ ಇಷ್ಟೇ ಹಣ, ಆಸ್ತಿ, ಅಂತಸ್ತು, ಅಹಂಕಾರ, ಯಾವುದೂ ಶಾಶ್ವತವಲ್ಲ, ಮೈಕಲ್ ಸತ್ತಾಗ 2.5 ಮಿಲಿಯನ್ ಜನ live ನಲ್ಲಿ ಶವ ಸಂಸ್ಕಾರ ಮಾಡುವುದನ್ನು ನೋಡಿದರು ಕಾರಣ ಆತನ ಸಾಧನೆ. ಆದರೆ ಸಾವು ಎನ್ನುವುದು ನಿಶ್ಚಿತ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಬದುಕಿದ್ದಾಗ ಹಸಿದವರಿಗೆ ಅನ್ನ ಹಾಕು, ನಿರ್ಗತಿಕರಿಗೆ ಕೈ ಹಿಡಿ, ನೊಂದವರ ಧ್ವನಿಯಾಗು, ಸ್ವಂತ ಶಕ್ತಿ ಮೇಲೆ ಸಾಧನೆ ಮಾಡಿ ಜಗತ್ತೇ ತಿರುಗಿ ನೋಡುವಂತೆ ಮಾಡು.
ಅದೇ ನಮ್ಮ ಸಾವಿನ ನಂತರ ಉಳಿಯುವುದು ನಮ್ಮ ಸಾಧನೆ ಮತ್ತು ಹೆಸರು ಮಾತ್ರ.

ಇದನ್ನು ಓದಿ:

https://infomindz.in/reels-crezy-rasthe-madya-dance/
Prev Post

ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ನಾಪತ್ತೆ

Next Post

ಹೆಚ್ಚಾದ ಐಪಿಎಲ್ ಬೆಟ್ಟಿಂಗ್ : ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳಿಗೆ ಸೈಬರ್ ಕ್ರೈಂ…

post-bars

Leave a Comment

Related post