Back To Top

 ಅನಟೋಮಿಕಲ್ ಬಾಡಿ ಸೂಟ್ ಧರಿಸಿ, ದೇಹದ ಅಂಗಗಳ ಬಗ್ಗೆ ಪಾಠ ಮಾಡಿದ ಶಿಕ್ಷಕಿ

ಅನಟೋಮಿಕಲ್ ಬಾಡಿ ಸೂಟ್ ಧರಿಸಿ, ದೇಹದ ಅಂಗಗಳ ಬಗ್ಗೆ ಪಾಠ ಮಾಡಿದ ಶಿಕ್ಷಕಿ

ಸ್ಪೇನ್: ಮಕ್ಕಳಿಗೆ ಪಠ್ಯಗಳನ್ನು ಭೋದಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ ಸ್ಪೇನ್‌ನಲ್ಲಿ ಮೂರನೇ ತರಗತಿಯ ಮಕ್ಕಳಿಗೆ ಪಾಠ ಬೋಧಿಸುವ ಶಿಕ್ಷಕಿ ವೆರೋನಿಕಾ ಡ್ಯೂಕ್ ಮಕ್ಕಳಿಗೆ ಮಾನವ ದೇಹದ ಅಂಗಗಳ ಬಗ್ಗೆ ವಿಭಿನ್ನವಾಗಿ ಅರ್ಥ ಮಾಡಿಸಿದ್ದಾರೆ.

ತಾವೇ ಸ್ವತಃ ಈ ವಿಶೇಷ ಬಾಡಿಸೂಟ್ ಧರಿಸಿ ಮಕ್ಕಳಿಗೆ ಅರ್ಥವಾಗುವಂತೆ ಭೋದಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾದರು ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈಗಿನ ಕಾಲದ ಮಕ್ಕಳಿಗೆ ಪಠ್ಯ (lesson) ವನ್ನು ಬೋಧಿಸುವುದು ಕಷ್ಟದ ಕೆಲಸ. ಈ ಮಕ್ಕಳು ಹೇಳಿದ ಮಾತನ್ನು ಕೇಳುವುದನ್ನೇ ಹೇಳಿದ ವಿಷಯವನ್ನೇ ಮತ್ತೆ ಮತ್ತೆ ಹೇಳಿದರೂ ಕೂಡ ಮರೆತು ಬಿಡುತ್ತಾರೆ. ಅದಲ್ಲದೇ ಹೆಚ್ಚಿನ ಶಿಕ್ಷಕರು (teachers) ಮಕ್ಕಳಿಗೆ ಪಠ್ಯಗಳನ್ನು ಹೇಳಿಕೊಡುವಾಗ ಕೆಲವು ಟ್ರಿಕ್ಸ್ ಉಪಯೋಗಿಸುತ್ತಾರೆ. ಆದರೆ, ದೇಹದ ಅಂಗಾಂಗಗಳ ಬಗ್ಗೆ ವಿವರಿಸುವ ಸಲುವಾಗಿ ಸ್ಪೇನ್‌ (Spain) ನ ಮೂರನೇ ತರಗತಿಯ ಶಿಕ್ಷಕಿ ವೆರೋನಿಕಾ ಡ್ಯೂಕ್ (Verónica Duque) ಒಂದು ಹೆಜ್ಜೆ ಮುಂದೆ ಹೋಗಿದ್ದು, ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ಸ್ಪ್ಯಾನಿಷ್ ಶಾಲಾ ಶಿಕ್ಷಕಿಯೊಬ್ಬರು ಜೀವಶಾಸ್ತ್ರ ತರಗತಿಗೆ ತೆರಳುವ ಮುನ್ನ ಮಾನವನ ಆಂತರಿಕ ಅಂಗಗಳನ್ನು ಮುದ್ರಿಸಿದ ಬಾಡಿ ಸೂಟ್ (Anatomical Body suit) ಧರಿಸಿ ಮಕ್ಕಳಿಗೆ ಈ ಬಗ್ಗೆ ಅರ್ಥವಾಗುವಂತೆ ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ:

https://infomindz.in/kippi-keerthige-madve-fix-aithu/
Prev Post

ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ

Next Post

ಪತ್ನಿಗೆ ಅಕ್ರಮ ಸಂಬಂಧ ಶಂಕೆ: ಸುತ್ತಿಗೆಯಿಂದ ಹೊಡೆದು ಪತ್ನಿ ಹತ್ಯೆ

post-bars

Leave a Comment

Related post