Back To Top

 ನ್ಯಾಯಾಧೀಶರ ನಿವಾಸದಲ್ಲಿ ಚಿನ್ನಾಭರಣ ಕಳವು
April 5, 2025

ನ್ಯಾಯಾಧೀಶರ ನಿವಾಸದಲ್ಲಿ ಚಿನ್ನಾಭರಣ ಕಳವು

ಬೀದರ್: ನ್ಯಾಯಾಧೀಶರ ನಿವಾಸದಲ್ಲಿ 7,61,800 ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೀದರ್ ನ ಜನವಾಡ ರಸ್ತೆಯಲ್ಲಿರುವ ನ್ಯಾಯಾಧೀಶರ ವಸತಿಗೃಹದಲ್ಲಿ ಕಳ್ಳರು ಕೃತ್ಯವೆಸಗಿದ್ದಾರೆ. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಡಿ. ಶೇಜ್ ಚೌಟಾಯಿ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಬೀದರ್ ನ್ಯೂಟೌನ್ ಪೊಲೀಸ್ ಠಾಣೆಗೆ ನ್ಯಾಯಾಧೀಶರು ದೂರು ನೀಡಿದ್ದಾರೆ. ರಂಜಾನ್ ಹಬ್ಬದ ನಿಮಿತ್ತ ಕುಟುಂಬದವರೆಲ್ಲ ಕೊಪ್ಪಳಕ್ಕೆ ತೆರಳಿದ್ದ ವೇಳೆಯಲ್ಲಿ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ.
ಏಪ್ರಿಲ್ 1ರಂದು ರಾತ್ರಿ 1.40 ರಿಂದ 2.30ರ ನಡುವೆ ಚಿನ್ನಾಭರಣ ಕಳವು ಮಾಡಲಾಗಿದೆ. ಬೀದರ್ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

Prev Post

ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಪಶ್ಚಾತಾಪ ಪಟ್ಟು ಮತ್ತೆ ಮನೆಗೆ ಪತ್ನಿಯ ಕರೆ ತಂದ…

Next Post

ಕಿಪ್ಪಿ ಕೀರ್ತಿ ಜಗತ್ತಿನ ಸುಂದರಿ, ನಾನೇ ಮುಂದೆ ನಿಂತು ಮದುವೆ ಮಾಡಿಸುವೆ ಎಂದ…

post-bars

Leave a Comment

Related post