ಕಾಡು ಮೊಲ ಹಿಡಿದು ಮೆರವಣಿಗೆ: ಶಾಸಕ ಬಸನಗೌಡ ತುರವಿಹಾಳ ಪುತ್ರನ ವಿಕೃತಿ
ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಕಾಡು ಮೊಲಗಳನ್ನು ಹಿಡಿದು ಬೇಟೆಯಾಡಿದ್ದಲ್ಲದೇ ಮಾರಕಾಸ್ತ್ರ ಹಿಡಿದು ಬೀದಿಯಲ್ಲಿ ವಾದ್ಯಗಳ ಸಮೇತ ಮೆರವಣಿಗೆ ಮಾಡಿರುವ ಘಟನೆ ರಾಕ್ಷಸೀಯ ಘಟನೆ ಮಸ್ಕಿಯಲ್ಲಿ ನಡೆದಿದೆ.

ರಾಯಚೂರು : ಶಾಸಕ ಬಸನಗೌಡ ತುರವಿಹಾಳ ಅವರ ಪುತ್ರ ಮತ್ತು ಸೋದರ ಕಾಡು ಮೊಲಗಳನ್ನು ಹಿಡಿದು ಬೇಟೆಯಾಡಿದ್ದಲ್ಲದೇ ಮಾರಕಾಸ್ತ್ರ ಹಿಡಿದು ಬೀದಿಯಲ್ಲಿ ವಾದ್ಯಗಳ ಸಮೇತ ಮೆರವಣಿಗೆ ಮಾಡಿರುವ ಘಟನೆ ರಾಕ್ಷಸೀಯ ಘಟನೆ ಮಸ್ಕಿಯಲ್ಲಿ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಮೊಲ ಬೇಟೆ ಆಡಿದ್ದ ತುರ್ವೀಹಾಳ್ ಅವರ ಸೋದರ ಮತ್ತು ಪುತ್ರ ಈ ಕೃತ್ಯವನ್ನೆಸಗಿದ್ದಾರೆ. ಅವರ ಸುತ್ತಲಿರುವ ಜನ ಸಿಳ್ಳು ಕೇಕೆ ಹಾಕುತ್ತಾ ಶಾಸರಕ ಪುತ್ರ ಮತ್ತು ಸೋದರನ ಕೃತ್ಯಕ್ಕೆ ಪ್ರಚಂಡ ಜಯಕಾರ ಕೂಗಿದ್ದಾರೆ.
ಮಹಾನ್ ಸಾಧನೆ ಗೈದವರಂತೆ ವಾದ್ಯಗಳ ಸಮೇತ ರಕ್ತಸಿಕ್ತ ಮೊಲಗಳ ಜೊತೆ ಮೆರವಣಿಗೆ ಮಾಡಿಸಿಕೊಂಡಿರುವ ಶಾಸಕರ ಕುಟುಂಬಸ್ಥರ ವರ್ತನೆಗೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ: