ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಕಾಫಿಗೆ ವಿಷ ಬೆರೆಸಿದ ಪತ್ನಿ
ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತಿ ಕುಡಿಯುವ ಕಾಫಿಗೆ ವಿಷ ಬೆರೆಸಿದ ಮಹಿಳೆ
ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿಯೊಬ್ಬಳು ಪತಿ ಕುಡಿಯುವ ಕಾಫಿಯಲ್ಲಿ ವಿಷ ಬೆರೆಸಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ.

ಮುಜಾಫರ್ನಗರ: ಪರ ಪುರುಷರ ಜತೆ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿಯೊಬ್ಬಳು ಪತಿ ಕುಡಿಯುವ ಕಾಫಿಯಲ್ಲಿ ವಿಷ ಬೆರೆಸಿರುವ ಘಟನೆ ಆಗ್ರಾದ ಮುಜಾಫರ್ನಗರದಲ್ಲಿ ನಡೆದಿದೆ. ಗುರುವಾರ ಇಬ್ಬರ ಮಧ್ಯೆ ಕಲಹ ನಡೆದಿದೆ. ಆಗ ಪತ್ನಿ ಪತಿಯ ಕಾಫಿಯಲ್ಲಿ ವಿಷ ಬೆರೆಸಿ ಕುಡಿಯಲು ಕೊಟ್ಟಿದ್ದಾಳೆ. ಆತನ ಆರೋಗ್ಯ ತಕ್ಷಣವೇ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇವರಿಬ್ಬರು 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ಖಾಟೌಲಿಯ ನಿವಾಸಿ ಅನುಜ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಟೌಲಿ ಪೊಲೀಸ್ ಠಾಣೆಯಲ್ಲಿ ಅನುಜ್ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.