Back To Top

 ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ
March 28, 2025

ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

ಮುಂಬೈ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಪ್ರಕರಣದಲ್ಲಿ, ವಿಮಾನ ಪ್ರಯಾಣಿಕರ ಮಾಹಿತಿಯನ್ನು ಮುಂಬೈ ಪೊಲೀಸರು ಪರಿಶೀಲಿಸುತ್ತಿದ್ದಾರೆ.

hhhff

ಮುಂಬೈ: ಮುಂಬೈ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಪ್ರಕರಣದಲ್ಲಿ, ವಿಮಾನ ಪ್ರಯಾಣಿಕರ ಮಾಹಿತಿಯನ್ನು ಮುಂಬೈ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಗು ಜನಿಸಿದ ತಕ್ಷಣವೇ ಕೊಲೆ ಮಾಡಿರಬಹುದು ಎಂಬ ತೀರ್ಮಾನಕ್ಕೆ ತನಿಖಾ ತಂಡ ಬಂದಿದೆ. ನಿನ್ನೆ ರಾತ್ರಿ 10.30ರ ಸುಮಾರಿಗೆ ವಿಮಾನ ನಿಲ್ದಾಣದ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಂದ ಸಿಬ್ಬಂದಿಗೆ ಮೃತದೇಹ ಪತ್ತೆಯಾಗಿದೆ. ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ಮಗುವಿನ ಮೃತದೇಹವನ್ನು ಎಸೆಯಾಗಿತ್ತು.
ವಿಮಾನ ನಿಲ್ದಾಣದ ಭದ್ರತಾ ವಿಭಾಗವು ತಕ್ಷಣವೇ ಸಹಾರ್ ರಸ್ತೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಿತ್ತು. ಅವರು ಸ್ಥಳಕ್ಕೆ ಬಂದು ಮಗುವನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಮಗು ಆ ವೇಳೆಗಾಗಲೇ ಸಾವು ಕಂಡಿತ್ತು ಎನ್ನಲಾಗಿದೆ. ಹುಟ್ಟಿ ಹೆಚ್ಚು ದಿನವಾಗಿರುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:

https://infomindz.in/mahile-preethiyinda-purashanondige-laingika-sambanda-hondidare-atyacharavalla/
Prev Post

ಅರ್ಜೆಂಟ್‌ನಲ್ಲಿ ಗಾಡಿ ಓಡಿಸಿ ವೃದ್ಧ ದಂಪತಿಗೆ ಡಿಕ್ಕಿ

Next Post

ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಆರಂಭ: ಅಮಿತ್‌ ಶಾ

post-bars

Leave a Comment

Related post