ಫ್ರೆಂಚ್ ಮಹಿಳೆಗೆ ಮೋಕ್ಷ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ
ಮಾರ್ಗದರ್ಶಕನ ಸೋಗಿನಲ್ಲಿ ವ್ಯಕ್ತಿಯೊಬ್ಬ ಫ್ರೆಂಚ್ ಮಹಿಳೆಗೆ ಮೋಕ್ಷ ಕೊಡಿಸುತ್ತೇನೆಂದು ನಂಬಿಸಿ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಬೆಟ್ಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಚೆನ್ನೈ: ಮಾರ್ಗದರ್ಶಕನ ಸೋಗಿನಲ್ಲಿ ವ್ಯಕ್ತಿಯೊಬ್ಬ ಫ್ರೆಂಚ್ ಮಹಿಳೆಗೆ ಮೋಕ್ಷ ಕೊಡಿಸುತ್ತೇನೆಂದು ನಂಬಿಸಿ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಬೆಟ್ಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಫ್ರಾನ್ಸ್ನ 46 ವರ್ಷದ ಮಹಿಳೆ ಈ ವರ್ಷ ಜನವರಿಯಲ್ಲಿ ತಿರುವಣ್ಣಾಮಲೈಗೆ ಆಗಮಿಸಿ ಖಾಸಗಿ ಆಶ್ರಮದಲ್ಲಿ ವಾಸವಾಗಿದ್ದರು.

ಕಳೆದ ವರ್ಷ ಭೂಕುಸಿತದ ಹಿನ್ನೆಲೆ ದೀಪಮಲೈ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೂ ಮಹಿಳೆ ಮಾರ್ಗದರ್ಶಕರ ಗುಂಪಿನೊಂದಿಗೆ 2,668 ಅಡಿ ಎತ್ತರದ ಬೆಟ್ಟವನ್ನು ಹತ್ತಿದ್ದಾರೆ. ಅಲ್ಲಿ ಅವರು ಧ್ಯಾನ ಮಾಡಲು ಗುಹೆಯನ್ನು ಪ್ರವೇಶಿಸುತ್ತಿದ್ದಾಗ ವೆಂಕಟೇಶನ್ ಎಂಬ ಪ್ರವಾಸಿ ಮಾರ್ಗದರ್ಶಿ ಫ್ರೆಂಚ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬೆಟ್ಟದಿಂದ ಇಳಿದು ತಿರುವಣ್ಣಾಮಲೈ ಪಶ್ಚಿಮ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿ ವೆಂಕಟೇಶನನ್ನು ಬಂಧಿಸಿದ್ದಾರೆ. ಸಂತ್ರಸ್ತೆಗೆ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ತಿರುವಣ್ಣಾಮಲೈ, ಅಣ್ಣಾಮಲೈಯರ್ ದೇವಸ್ಥಾನ ಮತ್ತು ರಮಣ ಮಹರ್ಷಿ ಆಶ್ರಮ ಸೇರಿದಂತೆ 14 ಪವಿತ್ರ ಸ್ಥಳಗಳಿಗೆ ನೆಲೆಯಾಗಿದೆ. ಆಧ್ಯಾತ್ಮಿಕ ಜ್ಞಾನವನ್ನು ಬಯಸುವ ವಿದೇಶಿ ಪ್ರಜೆಗಳಿಗೆ ಇದು ಬಹಳ ಹಿಂದಿನಿಂದಲೂ ಜನಪ್ರಿಯ ತಾಣವಾಗಿದೆ. ಅನೇಕ ವಿದೇಶಿಗರು ಈ ಜಿಲ್ಲೆಯಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದಾರೆ. ಆದರೆ ಇದೀಗ ನಡೆದಿರುವ ಶಾಕಿಂಗ್ ಘಟನೆ ಆತಂಕಕ್ಕೆ ಕಾರಣವಾಗಿದೆ.
ಇದನ್ನು ಓದಿ: