Back To Top

 ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ

ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ

ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ನೇಪಾಳಿ ಮೂಲದ ಯುವಕರು ಕನ್ನಡಿಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ.

ಬೆಂಗಳೂರು: ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದ ನೇಪಾಳಿ ಮೂಲದ ಯುವಕರು ಕನ್ನಡಿಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆದಿದೆ.

holi q

ಮಾರ್ಚ್ 14ರಂದು ಲಾಲ್ ಬಾಗ್ ಬಳಿ ಅಮರ್ ವ್ಯಾಪಾರ ನಡೆಸುತ್ತಿದ್ದ. ಈ ವೇಳೆ ಹೋಳಿ ಸಂಭ್ರಮಾಚರಣೆ ಎಂದು ಕಂಠಪೂರ್ತಿ ಕುಡಿದು, ಕುಣಿದು ಕುಪ್ಪಳಿಸುತ್ತಿದ್ದ ನೇಪಾಳಿ ಮೂಲದ ಯುವಕರ ಗುಂಪು ಅನಗತ್ಯವಾಗಿ ಕ್ಯಾತೆ ತೆಗೆದು ಗಲಾಟೆ ಶುರು ಮಾಡಿದೆ. ಯುವಕರ ವರ್ತನೆ ಪ್ರಶ್ನಿಸಿದ್ದಕ್ಕೆ ಕನ್ನಡಿಗ ಅಮರ್ ಮೇಲೆ ನೇಪಾಳಿ ಯುವಕರ ಗುಂಪು ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದೆ.
ರಕ್ತದ ಮಡುವಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ಖಂಡಿಸಿ ಸ್ಥಳೀಯ ಕನ್ನಡಿಗರು ಸಿದ್ದಾಪುರ ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕನ್ನಡಿಗ ಅಮರ್ ಗೆ ನ್ಯಾಯಕೊಡಿಸಿಬೇಕು. ನೇಪಾಳಿ ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Prev Post

ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

Next Post

ಹೋಳಿ ಹಬ್ಬ: ನಟಿಯೊಂದಿಗೆ ಸಹನಟ ಅನುಚಿತ ವರ್ತನೆ ಆರೋಪ

post-bars

Leave a Comment

Related post