Back To Top

 ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ: ಬೆಂಗಳೂರಿಗರಿಗೆ ತಲೆಬಿಸಿ

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಸಕ್ಕೂ ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ. ಇದು ತೆರಿಗೆ ಅಲ್ಲ. ಕೇವಲ ಸರ್ವೀಸ್ ಚಾರ್ಜ್ ಆಗಿರುತ್ತದೆ. ಪ್ರಾಪರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದರು.

ಬೆಂಗಳೂರು: ಆಗಾಗ ರಾಜಧಾನಿ ಜನರಿಗೆ ಬಿಗ್ ಶಾಕ್ ಆಗುತ್ತಲೇ ಇರುತ್ತದೆ. ಈಗ ಮತ್ತೊಂದು ವಿಚಾರವಾಗಿ ಬೆಂಗಳೂರಲ್ಲಿ ಕಸಕ್ಕೂ ಸೇವಾ ಶುಲ್ಕ ಪಾವತಿಸಬೇಕಾಗಿದೆ. ಇದು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ ಎಂಬುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

www

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕಸಕ್ಕೂ ಸೇವಾ ಶುಲ್ಕ ನಿಗದಿ ಪಡಿಸಲಾಗಿದೆ. ಇದು ತೆರಿಗೆ ಅಲ್ಲ. ಕೇವಲ ಸರ್ವೀಸ್ ಚಾರ್ಜ್ ಆಗಿರುತ್ತದೆ. ಪ್ರಾಪರ್ಟಿ ಟ್ಯಾಕ್ಸ್ ಜೊತೆಗೆ ವರ್ಷಕ್ಕೆ ಎರಡು ಬಾರಿ ಹಣ ಕಟ್ಟಬಹುದು ಎಂದರು.
ವಿದ್ಯುತ್ ಬಿಲ್ ರೀತಿಯಲ್ಲೇ ಬೆಂಗಳೂರಲ್ಲಿ ಪ್ರತಿ ಮನೆ ಮನೆಗೆ ಹೋಗಿ ಸಂಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಸರ್ವೀಸ್ ಚಾರ್ಜ್ ರೀತಿಯಲ್ಲಿ ಬಿಬಿಎಂಪಿ ತೆರಿಗೆಯಲ್ಲೇ ಆಡ್ ಮಾಡಲಾಗುತ್ತದೆ ಎಂದು ಹೇಳಿದರು.
ಬೆಂಗಳೂರಲ್ಲಿ ಒಂದು ದಿನ ಕಸ ವಿಲೇವಾರಿ ಸ್ಥಗಿತಗೊಂಡಿತ್ತು. ಅದು ಸರಿಯಾಗಿದ್ದು, ರಾತ್ರಿಯಿಡಿ ಆನ್ ಲೋಡ್ ಮಾಡಲಾಗುತ್ತಿದೆ. ಮನವೊಲಿಕೆ ಯಶಸ್ವಿಯಾಗಿದ್ದು, ರಾತ್ರಿ ವೇಳೆ ಕಸ ವಿಲೇವಾರಿ ಆಗಲಿದೆ ಎಂಬುದಾಗಿ ತಿಳಿಸಿದರು.

Prev Post

ಎಚ್ಡಿಕೆ ಬಿಡದಿ ತೋಟದ ಮನೆಗೆ ಏಕಾಏಕಿ ಜೆಸಿಬಿ ದಾಳಿ

Next Post

ತಲೆಗೇರಿದ ಹೋಳಿ: ನೇಪಾಳಿ ಯುವಕರಿಂದ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ

post-bars

Leave a Comment

Related post