Back To Top

 ಮಟನ್ ಕರಿ ಮಾಡಿಕೊಡದ ಪತ್ನಿಯನ್ನು ಮಸಣ ಸೇರಿಸಿದ ಪತಿ
March 18, 2025

ಮಟನ್ ಕರಿ ಮಾಡಿಕೊಡದ ಪತ್ನಿಯನ್ನು ಮಸಣ ಸೇರಿಸಿದ ಪತಿ

ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಪತಿ ಮತ್ತು ಪತ್ನಿಯ ನಡುವೆ ಮಾಂಸದ ಅಡುಗೆ ವಿಚಾರಕ್ಕೆ ಜಗಳ ನಡೆದಿದೆ.

ತೆಲಂಗಾಣ: ಮೆಹಬೂಬಾಬಾದ್‌ನಲ್ಲಿ ವಿಚಿತ್ರ ದುರಂತ ಸಂಭವಿಸಿದೆ. ಮಟನ್ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮೃತಳನ್ನು 35 ವರ್ಷದ ಮಲೋತ್ ಕಲಾವತಿ ಎಂದು ಗುರುತಿಸಲಾಗಿದೆ.
ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಪತಿ ಮತ್ತು ಪತ್ನಿಯ ನಡುವೆ ಮಾಂಸದ ಅಡುಗೆ ವಿಚಾರಕ್ಕೆ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿ ಪತಿ, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಲಾವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಲಾವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

kgkgkgkkgkgk
Prev Post

ಬಿಜೆಪಿ ಮುಖಂಡರಿಗೆ ಪಿಎಸ್‌ಐ ಹಲ್ಲೆ: ಗೂಂಡಾಗಿರಿಗೆ ಕಾರ್ಯಕರ್ತರ ಆಕ್ರೋಶ

Next Post

ಎಚ್ಡಿಕೆ ಬಿಡದಿ ತೋಟದ ಮನೆಗೆ ಏಕಾಏಕಿ ಜೆಸಿಬಿ ದಾಳಿ

post-bars

Leave a Comment

Related post