Back To Top

 1950ರ ಬೆಂಗಳೂರು ಫೋಟೋ ವೈರಲ್: ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ ಓಲ್ಡ್ ಎಂ.ಜಿ. ರೋಡ್

1950ರ ಬೆಂಗಳೂರು ಫೋಟೋ ವೈರಲ್: ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ ಓಲ್ಡ್ ಎಂ.ಜಿ. ರೋಡ್

ಇಂಡಿಯನ್ ಹಿಸ್ಟರಿ ಪಿಕ್ಸ್‌ ಅನ್ನೋವರು ಈ ಫೋಟೋ ಶೇರ್ ಮಾಡಿದ್ದಾರೆ.

ಬೆಂಗಳೂರು: 1950ರ ಕಾಲದ ಬೆಂಗಳೂರಿನ ಎಂ.ಜಿ. ರೋಡ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇಂಡಿಯನ್ ಹಿಸ್ಟರಿ ಪಿಕ್ಸ್‌ ಅನ್ನೋವರು ಈ ಫೋಟೋ ಶೇರ್ ಮಾಡಿದ್ದಾರೆ. ಮಾರ್ಚ್ 15ಕ್ಕೆ ಪೋಸ್ಟ್ ಮಾಡಿರೋ ಈ ಫೋಟೋ ಸಾವಿರಾರು ಜನ ನೋಡಿದ್ದಾರೆ.
ಹಳೆ ಕಾಲದ ಕಾರುಗಳು, ಸೈಕಲ್ ರಿಕ್ಷಾಗಳು ಇರೋ ಆ ಫೋಟೋ ನೋಡಿದ್ರೆ, ಬೆಂಗಳೂರು ಎಷ್ಟು ಬದಲಾಗಿದೆ ಅಂತಾ ಅರ್ಥ ಆಗುತ್ತದೆ.
ಹಳೆ ಬೆಂಗಳೂರು ನೋಡಿದವರು ಸೂಪರ್ ಆಗಿದೆ ಅಂತಾ ಹೇಳಿದ್ರೆ, ಇನ್ನು ಕೆಲವರು ಹಳೆ ಕಾಲಾನೇ ಸೂಪರ್ ಆಗಿತ್ತಾ ಅಂತಾ ಡಿಸ್ಕಸ್ ಮಾಡ್ತಿದ್ದಾರೆ. ಬೆಂಗಳೂರಿನ ಚೇಂಜ್ ಬಗ್ಗೆ ಈ ಫೋಟೋ ಚರ್ಚೆ ಹುಟ್ಟುಹಾಕಿದೆ.

hff

ಒಬ್ಬರು “ಬೆಂಗಳೂರು ಆಗ ಸ್ವರ್ಗದಂತಿತ್ತು” ಅಂತಾ ಕಾಮೆಂಟ್ ಮಾಡಿದ್ದಾರೆ. ಆದ್ರೆ ಎಲ್ಲರೂ ಇದನ್ನ ಒಪ್ಪೋಕೆ ರೆಡಿ ಇರ್ಲಿಲ್ಲ. ಇನ್ನೊಬ್ಬರು “ಈಗಿನ ಕಾಲ ಹಳೆ ಕಾಲಕ್ಕಿಂತ ಬೆಸ್ಟ್. ಆಗ 75% ಜನ ಬಡತನದಲ್ಲಿ ಇದ್ರು, ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ” ಅಂತಾ ಹೇಳಿದ್ದಾರೆ. ಎಂ.ಜಿ. ರೋಡ್‌ನಲ್ಲಿ ಮೆಟ್ರೋ ಆಗಿರೋದ್ರಿಂದ ಅದರ ಬ್ಯೂಟಿ ಹೋಯ್ತು ಅಂತಾ ಕೆಲವರು ಹೇಳ್ತಿದ್ದಾರೆ. “ಸರ್ಕಾರ ಅದರ ಮಧ್ಯದಲ್ಲಿ ಮೆಟ್ರೋ ಕಟ್ಟಿ ಅದರ ಬ್ಯೂಟಿ ಹಾಳು ಮಾಡ್ತು” ಅಂತಾ ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹೀಗೇ 1994ರ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಫೋಟೋ ಕೂಡಾ ವೈರಲ್ ಆಗಿತ್ತು. ಈಗ ತುಂಬಾ ಬದಲಾಗಿದೆ. ಅಭಿವೃದ್ಧಿ ಕಾಮಗಾರಿಗಳು, ತಮಟೆ ಶಬ್ದ, ಜನರ ಓಡಾಟ, ವಾಹನಗಳ ಓಡಾಟ ಶಬ್ದ ಕಿರಿಕಿರಿ 365 ದಿನ 24 ಗಂಟೆ ಬೆಂಗಳೂರು ಸದ್ದು ಮಾಡುತ್ತಲೇ ಇರುತ್ತದೆ. ಜನ ಓಡಾಡುತ್ತಲೇ ಇದ್ದಾರೆ. ದಿನದಿಂದ ದಿನಕ್ಕೆ ವಿವಿಧ ರಾಜ್ಯದ ಜನರು ರಾಜಧಾನಿಯಲ್ಲಿ ತುಂಬಿಕೊಳ್ಳುತ್ತಿದ್ದಾರೆ. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಅಂದಿನ ಬೆಂಗಳೂರು ಎಷ್ಟು ಚೆಂದ ಇತ್ತು ಎನ್ನಿಸುತ್ತದೆ.

ಇದನ್ನು ಓದಿ:

https://infomindz.in/neeru-hidiyuvaga-current-shock-hinde-savu-nagaravasigala-highdrama/
Prev Post

ಫ್ರೀಯಾಗಿ ಐಪಿಎಲ್ ಮ್ಯಾಚ್ ತೋರಿಸಲ್ಲ ಎಂದ ಜಿಯೋ

Next Post

HKU1 ವೈರಸ್ ಪತ್ತೆ: ಕೊರೋನಾದಂತೆ ಸೋಂಕು ಹರಡುವ ಭೀತಿ

post-bars

Leave a Comment

Related post