Back To Top

 ಲವ್ ಕೇಸಿಗೆ ಮಗಳ ಆತ್ಮಹತ್ಯೆ: ಮನನೊಂದ ತಾಯಿ ಆತ್ಮಹತ್ಯೆ

ಲವ್ ಕೇಸಿಗೆ ಮಗಳ ಆತ್ಮಹತ್ಯೆ: ಮನನೊಂದ ತಾಯಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿ ಹರಿಕೃಷ್ಣ ವಿಜಯಲಕ್ಷ್ಮಿ ಆವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ.
ಇದರಿಂದ ಮನನೊಂದು ಮಂಡ್ಯದಲ್ಲಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಳು.

ಮಂಡ್ಯ : ಪ್ರಿಯಕರ ಕೈ ಕೊಟ್ಟಿದ್ದರಿಂದ ಮಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪುತ್ರಿಯ ಆತ್ಮಹತ್ಯೆಯಿಂದ ನೊಂದು ತಾಯಿ ಸಹ ನೇಣಿಗೆ ಶರಣಾಗಿರುವ ದಾರುಣ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಮನೆಯಲ್ಲಿ ತಾಯಿ ಲಕ್ಷ್ಮಿ (50) ನೇಣಿಗೆ ಶರಣಾಗಿದ್ದಾರೆ. 25 ದಿನಗಳ ಹಿಂದೆ ಲಕ್ಷ್ಮಿ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಫೆಬ್ರವರಿ 21ರಂದು ರೈಲಿಗೆ ತಲೆಕೊಟ್ಟು ಪುತ್ರಿ ವಿಜಯಲಕ್ಷ್ಮಿ (21) ಆತ್ಮಹತ್ಯೆಗೆ ಶರಣಾಗಿದ್ದಳು. ಪಕ್ಕದ ಮಾರಸಿಂಗನಹಳ್ಳಿ ನಿವಾಸಿ ಹರಿಕೃಷ್ಣ ಮೋಸ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಒಂದೂವರೆ ವರ್ಷದಿಂದ ವಿಜಯಲಕ್ಷ್ಮಿ ಮತ್ತು ಹರಿಕೃಷ್ಣ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ಬೇರೆ ಹುಡುಗಿಯರ ಜೊತೆ ಹರಿಕೃಷ್ಣ ಸಂಪರ್ಕದಲ್ಲಿ ಇದ್ದ ಈ ಬಗ್ಗೆ ಪ್ರಶ್ನಿಸಿ ಯುವತಿ ವಿಜಯಲಕ್ಷ್ಮಿ ಮದುವೆಗೆ ಪಟ್ಟು ಹಿಡಿದಿದ್ದಾಳೆ. ಮದುವೆಗೆ ನಿರಾಕರಿಸಿ ಹರಿಕೃಷ್ಣ ವಿಜಯಲಕ್ಷ್ಮಿ ಆವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ.
ಇದರಿಂದ ಮನನೊಂದು ಮಂಡ್ಯದಲ್ಲಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಳು. ಕುರಿತು ವಿಜಯಲಕ್ಷ್ಮಿ ತಂದೆ ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ. ನ್ಯಾಯ ಕೇಳಲು ಹೋದವರ ವಿರುದ್ಧವೆ ಪೊಲೀಸರು FIR ದಾಖಲಿಸಿದ್ದರು.
ಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂದು ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷೀ ಶಿವ ಸಾಗಿಸಲು ಬಿಡದೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಗ್ರಾಮಂತರ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಅವ್ರು ಹಾಕಿದ್ದಾರೆ.ಆರೋಪಿ ಹರಿಕೃಷ್ಣ ಮತ್ತು ಕುಟುಂಬದವರನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ:

https://infomindz.in/nadi-thiradali-shampoosoap-marata-niseda-punya-ksethra-swachathe-kapadalu-aranya-sachivara-suhane/
Prev Post

ಮಹಿಳೆಗೆ ಕಾರು ಡಿಕ್ಕಿ; ಗುದ್ದಿದ ರಭಸಕ್ಕೆ ಕಾಂಪೌಂಡ್ ಮೇಲೆ ನೇತಾಡಿದ ಮಹಿಳೆ

Next Post

ಮೆಟ್ರೋ ಗೆ ಕುಸಿದ ಆದಾಯ: ಜಾಹೀರಾತು ಮೊರೆ ಹೋದ BMRCL

post-bars

Leave a Comment

Related post