Back To Top

 ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ಸಿಲುಕಿ ಒಂದು ವರ್ಷದ ಮಗು ಸಾವು
March 14, 2025

ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ಸಿಲುಕಿ ಒಂದು ವರ್ಷದ ಮಗು ಸಾವು

ಹೈದರಾಬಾದ್: ಸಂತೋಷ್ ನಗರ ಕಾಲೋನಿಯಲ್ಲಿ (Child Death) ಆಘಾತಕಾರಿ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ಒಂದರ ಲಿಫ್ಟ್‌ನಲ್ಲಿ ಸಿಲುಕಿ ಸುರೇಂದರ್ ಎಂಬ ಒಂದು ವರ್ಷದ ಮಗು ಸಾವನ್ನಪ್ಪಿದೆ.

ಈ ದುರ್ಘಟನೆ ಆಸಿಫ್‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುಸ್ತಫಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಮಗು ಸುರೇಂದರ್ ತಂದೆ ಕುತುಬ್ ಶಾಹಿ ಮಸೀದಿ ಬಳಿ ಇರುವ ಹಾಸ್ಟೆಲ್‌ನಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು.
ಲಿಫ್ಟ್‌ನಲ್ಲಿ ಸಿಲುಕಿಕೊಂಡು ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಅದಾಗಲೇ ಮಗು ಮೃತಪಟ್ಟಿತ್ತು. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

Prev Post

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

Next Post

ಜೈಲಿನಲ್ಲಿ ಹಿಂಸೆ: ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ರನ್ಯಾ ರಾವ್

post-bars

Leave a Comment

Related post