ಮಾ.19ರಿಂದ ಜಾರಿಗೆ ಬರ್ತಿದೆ ಯೂಟ್ಯೂಬ್ ಹೊಸ ನಿಯಮ, 9 ಲಕ್ಷ ವಿಡಿಯೋ ಡಿಲೀಟ್!!
ಯೂಟ್ಯೂಬ್ ಈಗ ತನ್ನ ವೇದಿಕೆಯಲ್ಲಿ AI ಆಧಾರಿತ ವ್ಯವಸ್ಥೆಯನ್ನು ಬಳಸುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದರ ಜೊತೆಗೆ, ಯೂಟ್ಯೂಬ್ ಸುಮಾರು 4.8 ಮಿಲಿಯನ್ ಚಾನೆಲ್ಗಳನ್ನು ಸಹ ತೆಗೆದುಹಾಕಿದೆ ಎಂದು ಮಾಹಿತಿ ನೀಡಿದ್ದಾರೆ.
ನವದೆಹಲಿ: ವೀಡಿಯೊ ಶೇರಿಂಗ್ ಪ್ಲಾಟ್ಫಾರ್ಮ್ ನಲ್ಲಿ ವಿಶ್ವದಲ್ಲಿ ಅತಿದೊಡ್ಡ ಶೇರಿಂಗ್ ಪ್ಲಾಟ್ಫಾರ್ಮ್ ಯೂಟ್ಯೂಬ್ ಕೂಡ ಒಂದು. ಅದ್ರಲ್ಲಿ ದಿನಕ್ಕೆ ಲಕ್ಷಾಂತರ ವಿಡಿಯೋ ಅಪ್ಲೋಡ್ ಆಗ್ತಿರುತ್ತವೆ. ಯುಟ್ಯೂಬ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ವಿಡಿಯೋ ಮೂಲಕ ಸಾವಿರಾರು ರೂಪಾಯಿ ಗಳಿಸುವವರ ಸಂಖ್ಯೆ ಕೂಡ ಏರಿಕೆ ಆಗ್ತಾನೆ ಇದೆ. ಯೂಟ್ಯೂಬ್ ಈಗ ಆದಾಯದ ಮೂಲವಾಗಿದೆ. ನೀವೂ ಯುಟ್ಯೂಬರ್ ಆಗಿದ್ದು, ಕಂಟೇಟ್ ಪೋಸ್ಟ್ ಮಾಡ್ತೀರಿ ಎಂದಾದ್ರೆ ಯೂಟ್ಯೂಬ್ ಹೊಸ ನಿಯಮವನ್ನು ತಪ್ಪದೆ ತಿಳಿದುಕೊಳ್ಳಿ.
ಭಾರತ ಮತ್ತು ಇತರ ದೇಶಗಳಲ್ಲಿ ಯೂಟ್ಯೂಬ್ ಮತ್ತು ಇತರ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಆನ್ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಬಗ್ಗೆ ಜಾಹೀರಾತುಗಳು ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ಯೂಟ್ಯೂಬ್ ಈಗ ತನ್ನ ಪ್ಲಾಟ್ಫಾರ್ಮ್ನ ನಿಯಮಗಳನ್ನು ಮೊದಲಿಗಿಂತ ಹೆಚ್ಚು ಕಠಿಣಗೊಳಿಸಿದೆ. ಈ ಹೊಸ ನಿಯಮಗಳು ಮಾರ್ಚ್ 19 ರಿಂದ ಜಾರಿಗೆ ಬರಲಿವೆ.

ಜೂಜಾಟಕ್ಕೆ ಸಂಬಂಧಿಸಿದ ವಿಷ್ಯವನ್ನು ಕಂಟ್ರೋಲ್ ಗೆ ತರುವುದು ಯೂಟ್ಯೂಬ್ ಮುಖ್ಯ ಉದ್ದೇಶವಾಗಿದೆ. ಹೊಸ ನಿಯಮದ ಪ್ರಕಾರ, ಪ್ರಮಾಣೀಕರಿಸದ ಜೂಜಿನ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಯೂಟ್ಯೂಬರ್ ಪ್ರಚಾರ ಮಾಡುವಂತಿಲ್ಲ. ಒಂದ್ವೇಳೆ ಪ್ರಚಾರ ಮಾಡಿದ್ರೆ ಖಾತೆ ಬಂದ್ ಆಗಲಿದೆ. ಅಷ್ಟೇ ಅಲ್ಲ, ನೀವು ಗೂಗಲ್ ಒಪ್ಪಿಗೆ ನೀಡದ ಯಾವುದೇ ಜೂಜಿನ ಸೇವೆಗಳು, ಅಪ್ಲಿಕೇಷನ್ ಗಳ ಫೋಟೋ, ಲೋಗೋವನ್ನು ಕೂಡ ಯೂಟ್ಯೂಬ್ ವಿಡಿಯೋದಲ್ಲಿ ತೋರಿಸಬಾರದು.
ಯೂಟ್ಯೂಬರ್ ನಿಯಮ ಮೀರಿದ್ರೆ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.
ಜೂಜಾಟದ ಸೈಟ್ಗಳು ಅಥವಾ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವ ವೀಡಿಯೊಗಳ ಮೇಲೆ ಈಗ ಯೂಟ್ಯೂಬ್ ವಯಸ್ಸಿನ ನಿರ್ಬಂಧಗಳನ್ನು ವಿಧಿಸುತ್ತದೆ. ಈ ವಿಡಿಯೋಗಳನ್ನು ಸೈನ್ ಔಟ್ ಮಾಡಿದ ಬಳಕೆದಾರರಿಗೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ತೋರಿಸಲಾಗುವುದಿಲ್ಲ.
ಹೊಸ ನಿಯಮಗಳು ಜಾರಿಗೆ ಬಂದ ನಂತರ, ಯಾವುದೇ ಯೂಟ್ಯೂಬರ್ ಇಂಥಹ ಯಾವುದೇ ಸೈಟ್ ಅಥವಾ ಅಪ್ಲಿಕೇಶನ್ನಿಂದ ಖಾತರಿಯ ಆದಾಯವನ್ನು ಕ್ಲೈಮ್ ಮಾಡುವಂತಿಲ್ಲ. ಅಂತವರ ಖಾತೆಯನ್ನೂ ಯೂಟ್ಯೂಬ್ ಡಿಲೀಟ್ ಮಾಡಲಿದೆ. ನಿಯಮಗಳನ್ನು ಉಲ್ಲಂಘಿಸುವ ವೀಡಿಯೊಗಳ ವಿರುದ್ಧ ಯೂಟ್ಯೂಬ್ ಕಠಿಣ ಕ್ರಮ ಕೈಗೊಳ್ಳುತ್ತಿದೆ.
9 ಲಕ್ಷ ವಿಡಿಯೋ ಡಿಲೀಟ್ :
ಇತ್ತೀಚೆಗೆ ಯೂಟ್ಯೂಬ್ ತನ್ನ ನೀತಿಗೆ ವಿರುದ್ಧವಾಗಿ ಮಾಡಿದ 9 ಲಕ್ಷಕ್ಕೂ ಹೆಚ್ಚು ವೀಡಿಯೊಗಳನ್ನು ಡಿಲೀಟ್ ಮಾಡಿದೆ. ಡಿಲೀಟ್ ಮಾಡಲಾದ ವೀಡಿಯೊಗಳಲ್ಲಿ, ಗರಿಷ್ಠ ಸಂಖ್ಯೆಯ ವೀಡಿಯೊ ಭಾರತೀಯ ರಚನೆಕಾರರದ್ದಾಗಿದೆ. ಭಾರತೀಯ ಸೃಷ್ಟಿಕರ್ತರಿಂದ 3 ಮಿಲಿಯನ್ಗಿಂತಲೂ ಹೆಚ್ಚು ವೀಡಿಯೊಗಳನ್ನು ಡಿಲಿಟ್ ಮಾಡಲಾಗಿದೆ. ನೀತಿಯನ್ನು ಉಲ್ಲಂಘಿಸದಂತೆ ಖಚಿತಪಡಿಸಿಕೊಳ್ಳಲು, ಯೂಟ್ಯೂಬ್ ಈಗ ತನ್ನ ವೇದಿಕೆಯಲ್ಲಿ AI ಆಧಾರಿತ ವ್ಯವಸ್ಥೆಯನ್ನು ಬಳಸುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದರ ಜೊತೆಗೆ, ಯೂಟ್ಯೂಬ್ ಸುಮಾರು 4.8 ಮಿಲಿಯನ್ ಚಾನೆಲ್ಗಳನ್ನು ಸಹ ತೆಗೆದುಹಾಕಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: