Back To Top

 ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಮತ್ತೊಂದು ಸಂಕಷ್ಟ: ಸ್ನೇಹಮಯಿ ಕೃಷ್ಣ ತಕರಾರು
March 11, 2025

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಮತ್ತೊಂದು ಸಂಕಷ್ಟ: ಸ್ನೇಹಮಯಿ ಕೃಷ್ಣ ತಕರಾರು

ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ತನಿಖೆ‌ ನಡೆಸಿ ಕೋರ್ಟ್ಗೆ ವರದಿ ಸಲ್ಲಿಸಿದ್ದ ಲೋಕಾಯುಕ್ತ ವರದಿಗೆ ದೂರುದಾರ ಸ್ನೇಹಮಯಿ‌ಕೃಷ್ಣ  ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. 39 ಪುಟಗಳ ತಕರಾರು ಅರ್ಜಿಯಲ್ಲಿ ಸಂಪೂರ್ಣ ಮಾಹಿತಿ ನೀಡಿರುವ ಸ್ನೇಹಮಯಿ‌ಕೃಷ್ಣ, ಅದರಲ್ಲಿನ ಅಂಶಗಳನ್ನು ಪರಿಗಣಿಸಿ, ಸೂಕ್ತ ಆದೇಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ತನಿಖಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ನನ್ನ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದ ಬಿ ಅಂತಿಮ ವರದಿಯಾಗಿರುವುದಿಲ್ಲ. ಆದರೂ ಬಿ ಅಂತಿಮ ವರದಿ ಸಲ್ಲಿಸಿದ್ದರು ಕೂಡ ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ವಿಚಾರಣೆ ಮಾಡಬಹುದು ಎಂಬಂತೆ ಸರ್ವೋಚ್ಚ ನ್ಯಾಯಾಲಯವು ಇಂಡಿಯಾ ಕಾರೆಟ್ ಪ್ರೈ.ಲಿ. ವಿರುದ್ಧ ಕರ್ನಾಟಕ ರಾಜ್ಯ ಎಂಬ ಪ್ರಕರಣದ ತೀರ್ಪಿನಲ್ಲಿ ಹೇಳಿರುತ್ತದೆ.
ಸದರಿ ತೀರ್ಪಿನ ಪ್ರತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿನ ಅಂಶಗಳನ್ನು ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ತನಿಖಾಧಿಕಾರಿಯು 1 ರಿಂದ 4ನೇ ಆರೋಪಿಗಳ ವಿಚಾರದಲ್ಲಿ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಬೇಕಾಗಿಯೂ ಲಭ್ಯವಿರುವ ಮತ್ತು ಮುಂದೆ ಲಭ್ಯವಾಗುವ ಸಾಕ್ಷ್ಯಾಧಾರಗಳ ಮೂಲಕ 1 ರಿಂದ 4ನೇ ಆರೋಪಿಗಳ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಬೇಕಾದ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲು ಅನುಮತಿ ನೀಡಬೇಕಾಗಿಯೂ, ನ್ಯಾಯಾಲಯಕ್ಕೆ ಸೂಕ್ತ ಮತ್ತು ನ್ಯಾಯ ಸಮ್ಮತ ಎಂದು ಕಂಡು ಬರುವ ಇತರೆ ಸೂಕ್ತ ಆದೇಶವನ್ನು ಮಾಡಬೇಕಾಗಿಯೂ ನ್ಯಾಯಾಲಯವನ್ನು ಕಳಕಳಿಯಿಂದ ಮನವಿ ಮಾಡಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಕೆ ಬಳಿಕ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದು, ಮೈಸೂರು ಲೋಕಾಯುಕ್ತ ಪೊಲೀಸರು ನಿರೀಕ್ಷೆಯಂತೆ ಬಿ ವರದಿ ಸಲ್ಲಿಸಿದ್ದಾರೆ. ಇದು ಮುಂಚಿತವಾಗಿ ಹೀಗೆ ಆಗುತ್ತೆ ಅಂತಾ ಗೊತ್ತಾಗಿತ್ತು. ಇದೀಗ ತಕರಾರು ಅರ್ಜಿಯನ್ನ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದರು.
ತಕರಾರು ಅರ್ಜಿಯಲ್ಲಿಯೇ ಆರೋಪ ಸಾಬೀತಾಗುವಂತಹ ಎಲ್ಲಾ ಅಂಶಗಳು ಇವೆ. ನನ್ನ ಪರವಾಗಿ ನಾನೇ ವಾದ ಮಂಡನೆ ಮಾಡಲಿದ್ದೇನೆ. ಕಾನೂನು ಅರಿವು ಇರುವವರು ತಾವಾಗಿಯೇ ವಾದಿಸಬಹುದು. ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ಭರವಸೆ ಇದೆ. ಸದ್ಯಕ್ಕೆ ಬೆದರಿಕೆ, ಆಮಿಷಗಳು ಬರುವುದು ನಿಂತಿದೆ. ಮೊದಲು ನಾನು ಒಂದು ದೂರು ನೀಡಿದ್ದೆ, ಆ ದೂರಿನ ಬಳಿಕ ನಿಂತಿದೆ ಎಂದು ಸ್ನೇಹಮಯಿಕೃಷ್ಣ ಹೇಳಿದ್ದಾರೆ.

Prev Post

ಏರ್ಪೋಟಿನಲ್ಲಿ ವ್ಹೀಲ್ ಚೇರ್ ಕೊಡಲು ನಿರಾಕರಣೆ : ಅಶಕ್ತ ವೃದ್ದೆ ಬಿದ್ದು ಐಸಿಯೂ…

Next Post

ಬಾಲಕಿಗೆ ಬಲವಂತದ ಬಾಲ್ಯವಿವಾಹ: ದೂರು ದಾಖಲು

post-bars

Leave a Comment

Related post