Back To Top

 ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಾದ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನ.
March 8, 2025

ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಾದ ದಿನ, ಅಂತಾರಾಷ್ಟ್ರೀಯ ಮಹಿಳಾ ದಿನ.


ಈ ವಿಶೇಷ ದಿನದಂದು ಲಿಂಗ ಸಮಾನತೆ ಹಾಗೂ ಜಗತ್ತಿನಾದ್ಯಂತ ಮಹಿಳೆಯರ ಕೊಡುಗೆಗಳನ್ನು ಗೌರವಿಸಲಾಗುತ್ತದೆ.
ಹೌದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆ ಮಾಡಿದ ಮಹಿಳೆಯರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತದೆ. ಹಾಗಾದ್ರೆ ಮಹಿಳಾ ದಿನಾಚರಣೆ ಆರಂಭವಾದದ್ದು ಯಾವಾಗ? ಈ ದಿನದ ಇತಿಹಾಸ ಹಾಗೂ ಮಹತ್ವವೇನು? ಎನ್ನುವ ಮಾಹಿತಿ ಇಲ್ಲಿದೆ.
ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ಮನೆಯ ಬೆಳಗುವ ದೀಪ. ನಾಲ್ಕು ಗೋಡೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಕೈಯಾಡಿಸದ ಕ್ಷೇತ್ರವಿಲ್ಲ. ಎಲ್ಲಾ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ನಿಂತಿದ್ದಾಳೆ. ತನ್ನದೇ ಛಾಪು ಮೂಡಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಭೀತು ಪಡಿಸಿದ್ದಾಳೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸುವ ಮತ್ತು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಇತಿಹಾಸ
ಅಂತಾರಾಷ್ಟ್ರೀಯ ಮಹಿಳಾ ದಿನವು 20ನೇ ಶತಮಾನದ ಆರಂಭದಲ್ಲಿ ಶುರುವಾಯಿತು.
ಉತ್ತರ ಅಮೆರಿಕಾ ಮತ್ತು ಯುರೋಪಿನಲ್ಲಿ ಕಾರ್ಮಿಕ ಚಳುವಳಿಗಳಿಂದ ಈ ದಿನದ ಆಚರಣೆಯೂ ಹುಟ್ಟಿಕೊಂಡಿತು. ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಫೆಬ್ರವರಿ 28, 1909ರಂದು ಯುನೈಟೆಡ್ ಸ್ಟೇಟ್ ನಲ್ಲಿ ಆಚರಿಸಲಾಯಿತು. ನ್ಯೂಯಾಕ್ ನಲ್ಲಿ 1908ರ ಗಾರ್ಮೆಂಟ್ ಕಾರ್ಮಿಕರ ಮುಷ್ಕರವನ್ನು ಸ್ಮರಣಾರ್ಥವಾಗಿ ಸಮಾಜವಾದಿ ಪಕ್ಷ ಆಫ್ ಅಮೇರಿಕಾ ಆಯೋಜಿಸಿತು.
ನ್ಯೂಯಾರ್ಕ್‌ನಲ್ಲಿ ಸಮಾಜವಾದಿ ಮಹಿಳೆಯರು ಮತ್ತು ಜವಳಿ ಮಹಿಳಾ ಕಾರ್ಮಿಕರು ಕಡಿಮೆ ಗಂಟೆಗಳ ಕೆಲಸ, ಹೆಚ್ಚಿನ ವೇತನ ಮತ್ತು ಮತದಾನದ ಅವಕಾಶಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಹೀಗೆ ಮಹಿಳಾ ದಿನಾಚರಣೆ ಆರಂಭವಾಯಿತಂತೆ.
ಹೌದು, ಯುರೋಪಿಯನ್ ಕಾರ್ಯಕರ್ತರು ಮಹಿಳೆಯರಿಗೆ ಪ್ರತ್ಯೇಕ ದಿನವನ್ನು ನಿಗದಿ ಮಾಡಬೇಕೆಂದು ಅಭಿಯಾನ ಪ್ರಾರಂಭಿಸಿದರು. ಸಮಾನ ವೇತನ ಮತ್ತು ಕೆಲಸದ ಹಕ್ಕುಗಳಿಗಾಗಿ ಮತದಾನ ಮತ್ತು ಮುನ್ನಡೆಸುವ ಹಕ್ಕನ್ನು ಒತ್ತಾಯಿಸಿದರು. ಈ ವೇಳೆ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಈ ರ್ಯಾಲಿಗಳಲ್ಲಿ ಭಾಗವಹಿಸಿದ್ದರು.
1910ರಲ್ಲಿ ಕೋಪನ್ ಹೇಗನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಪ್ರಸ್ತಾಪಿಸಿದ್ದು, ಈ ಕಲ್ಪನೆಯನ್ನು ಅನುಮೋದಿಸಲಾಯಿತು.
ಮಹಿಳೆಯರ ಜೀವನವನ್ನು ಸುಧಾರಿಸಲು ಹಾಗೂ ತ್ವರಿತ ಪ್ರಗತಿಗೆ ಕರೆ ನೀಡುತ್ತದೆ. ಜನರು, ಸರ್ಕಾರಗಳು ಮತ್ತು ಸಂಸ್ಥೆಗಳು ಮಹಿಳೆಯರ ಉನ್ನತಿಗೆ, ಸಮಾನ ಅವಕಾಶಗಳನ್ನು ಒದಗಿಸಲು ಮತ್ತು ತಾರತಮ್ಯವನ್ನು ತೊಡೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವುದಾಗಿದೆ. ಅಲ್ಲದೆ, ಈ ದಿನವು ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ಹೀಗಾಗಿ ಮಹಿಳಾ ದಿನದಂದು ಸರ್ಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮ, ಅಭಿಯಾನಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯಗಳು.

Prev Post

ಅಮರ ಪ್ರೇಮಕ್ಕೆ ಹೆಸರು ಸೂರಿ ಲವ್ಸ್ ಸಂಧ್ಯಾ

Next Post

ಸಿದ್ದರಾಮಯ್ಯ ಬಜೆಟ್; ಹಾಡಿ ಹೊಗಳಿದ ಬಿಜೆಪಿ ಶಾಸಕರು

post-bars

Leave a Comment

Related post