Back To Top

 ಬೆಂಗಳೂರಿನ ಕಿಲಾಡಿ ಜೋಡಿಗಳಿಂದ ಮಹಾ ಮೋಸ:ಬರೋಬ್ಬರಿ 53 ಜನರಿಗೆ ಕೋಟಿ, ಕೋಟಿ ಪಂಗನಾಮ

ಬೆಂಗಳೂರಿನ ಕಿಲಾಡಿ ಜೋಡಿಗಳಿಂದ ಮಹಾ ಮೋಸ:ಬರೋಬ್ಬರಿ 53 ಜನರಿಗೆ ಕೋಟಿ, ಕೋಟಿ ಪಂಗನಾಮ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ಜನ ಹಣ ಕಳೆದುಕೊಳ್ಳುವ ಅಪರಾಧಗಳಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನುವುದು ವಿಷಾದನೀಯ. ಕುದುರೆ ರೈಡಿಂಗ್ ಜಾಕಿಗಳನ್ನೇ ಟಾರ್ಗೆಟ್ ಮಾಡಿ ಪಂಗನಾಮ ಹಾಕುತ್ತಿದ್ದ ಕಿಲಾಡಿ ಜೋಡಿ ಬೆಂಗಳೂರು ಪೊಲೀಸರ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದು ಸೌತ್ ಈಸ್ಟ್ ಸೈಬರ್ ಕ್ರೈಂ ಪೊಲೀಸರು ಮೋಸದ ಜಾಲದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಅಂತೆಯೇ ಮಹಾ ವಂಚಕನ ಹೆಸರು ಸಕ್ಲೇನ್ ಸುಲ್ತಾನ್, ಆತನ ಹೆಂಡತಿ ಹೆಸರು ನಿಖಾತ್ ಸುಲ್ತಾನ. ಬೆಂಗಳೂರಿನ ತಿಲಕ್ ನಗರದಲ್ಲಿ ವಾಸಿಸುತ್ತಿದ್ದರು. ಈ ಖತರ್ನಾಕ್‌ ದಂಪತಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವೀಸಾ ಮಾಡಿಕೊಡ್ತೀವಿ ಅಂತ ಜಾಹೀರಾತು ಕೊಡುತ್ತಿದ್ದರು. ಕುದುರೆ ಓಡಿಸುವ ಜಾಕಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ವಂಚನೆ ಜಾಲಕ್ಕೆ ಬೀಳಿಸುತ್ತಿದ್ದರು.
ಈ ದಂಪತಿ ಸುಮಾರು 53 ಜನರಿಗೆ 2 ಕೋಟಿಗೂ ಅಧಿಕ ಹಣವನ್ನ ಮೋಸ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 2 ಬೈಕ್, 2 ಕಾರು 66 ಲಕ್ಷ ರೂಪಾಯಿ ನಗದು ಸೇರಿ 80 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಸುಲ್ತಾನ್ ಇಂಟರ್ ನ್ಯಾಷನಲ್‌ ಪೇಜ್‌ನಲ್ಲಿ ಜಾಹೀರಾತು ಕೊಡುತ್ತಿದ್ದರು. ಇವರ ಜಾಹೀರಾತು ನೋಡಿ ಕಾಲ್ ಮಾಡೋರಿಗೆ ಬಣ್ಣದ ಮಾತುಗಳನ್ನಾಗಿ ಬಲೆಗೆ ಬೀಳಿಸಿಕೊಳ್ತುತ್ತಿದ್ದರು ಎಂದು ತಿಳಿದು ಬಂದಿದೆ.
ಪತ್ನಿ ನಿಖಾತ್ ಸುಲ್ತಾನ್ ಮೊದಲು ಮಾತನಾಡುತ್ತಾ ಇದ್ದಳು. ವಿದೇಶದಲ್ಲಿ ಹಲವು ಟರ್ಫ್ ಕ್ಲಬ್‌ಗಳಲ್ಲಿ ನಮಗೆ ಸಂಪರ್ಕವಿದೆ. ಅಲ್ಲಿ ಕೆಲಸ ಕೊಡಿಸ್ತೀವಿ. ಲಕ್ಷ, ಲಕ್ಷ ಸಂಬಳ ಸಿಗುತ್ತೆ ಅಂತ ಕಿಲಾಡಿ ಜೋಡಿ ನಂಬಿಸುತ್ತಿತ್ತು. ನಿಖಾತ್ ಸುಲ್ತಾನ್‌ಗೆ ಪತಿ ಸಕ್ಲೇನ್ ಸುಲ್ತಾನ್ ಸಾಥ್ ನೀಡುತ್ತಿದ್ದ.
ಮೊದಲು ಇಬ್ಬರಿಗೆ ಕೆಲಸ ಕೊಡಿಸಿ ನಂಬಿಕೆ ಗಳಿಸಿಕೊಂಡಿದ್ದ ಈ ಕಿಲಾಡಿ ಜೋಡಿ ಒಬ್ಬೊಬ್ಬರಿಂದ 8 ಲಕ್ಷ ಹಣ ಪಡೆದುಕೊಳ್ತಿದ್ದರು.
ಆರೋಪಿಗಳು ಯಾವುದೋ ಇಬ್ಬರಿಗೆ ಕೆಲಸ ಕೊಡಿಸಿದ ಬಗ್ಗೆ ಜಾಹೀರಾತು ತೋರಿಸಿ ಬಣ್ಣ ಬಣ್ಣದ ಮಾತನಾಡಿ ಬರೋಬ್ಬರಿ 51 ಜನರಿಗೆ ವಂಚನೆ ಮಾಡಿದ್ದಾರೆ.
ಒಟ್ಟು 2 ಕೋಟಿ 64 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಕಿಲಾಡಿ ಜೋಡಿ, ಕಳೆದ ಒಂದೂವರೆ ವರ್ಷಗಳಿಂದ ಸಖತ್ ಎಂಜಾಯ್ ಮಾಡುತ್ತಿದ್ದರು. ಆರೋಪಿಗಳು ಸಿಂಗಾಪುರ, ಶ್ರೀಲಂಕಾ ಸೇರಿ ಹಲವಾರು ಕಡೆ ಜಾಲಿ ಟ್ರಿಪ್ ಕೂಡ ಮಾಡಿದ್ದರು. ಈ ಕಿಲಾಡಿ ಜೋಡಿ ಮೇಲೆ ದೂರು ದಾಖಲಾಗಿದ್ದು ವಾರದೊಳಗೆ ಪತ್ತೆ ಮಾಡಿ ಬಂಧಿಸಿದ್ದಾರೆ.

Prev Post

ಕ್ಯಾಶ್ ಆಂಡ್ ಡೆಲಿವರಿಯಲ್ಲಿ ಮನೆಗೆ ಬಂದು ಬಿತ್ತು 100 ಪಿಜ್ಜಾ!!!!? ಹಣ ಕೊಟ್ಟು…

Next Post

ಬಿಗ್ಬಾಸ್ ಧನರಾಜ್ ಮನೆಗೆ ರನ್ನರ್ ಅಪ್ ತ್ರಿವಿಕ್ರಮ್ ಭೇಟಿ: ಪುಲ್ ಖುಷಿಯಿಂದ ಪೋಸ್ಟ್…

post-bars

Leave a Comment

Related post