ಕ್ಯಾಶ್ ಆಂಡ್ ಡೆಲಿವರಿಯಲ್ಲಿ ಮನೆಗೆ ಬಂದು ಬಿತ್ತು 100 ಪಿಜ್ಜಾ!!!!? ಹಣ ಕೊಟ್ಟು ಕೊಟ್ಟು ಸುಸ್ತಾದ ಹುಡುಗ, ಯಾವ ತರದ ಲವ್ ರಿವೇಂಜ್ ಗುರು ಇದು
ಅವನನ್ನ, ಅವಳನ್ನ ಸುಮ್ಮನೇ ಬಿಡಬಾರದು ಎಂಬ ಜಿದ್ದಿಗೆ ಬೀಳುತ್ತಾರೆ. ಒಮ್ಮೆ ಈ ಜಿದ್ದು ದೊಡ್ಡ ಮಟ್ಟಕ್ಕೆ ಹೋದರೆ ಅನೇಕ ಅಪಾಯಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಆದ್ರೆ ಅಸಲಿಗೆ ರಿವೇಂಜ್ ಎನ್ನುವುದು ಆ ರೀತಿ ಇರಲೇಬಾರದು. ಆದರೆ ಇದರ ನಡುವೆ ಸಿಹಿಯಾದ ಒಂದು ಸೇಡನ್ನು ತೀರಿಸಿಕೊಂಡಿದ್ದಾಳೆ ಒಬ್ಬ ಯುವತಿ.
ಈಗಾಗಲೇ ವ್ಯಾಲೆಂಟೈನ್ಸ್ ಡೇನ ಹಾವಳಿ ಒಂದು ವಾರದಿಂದ ನಡೆಯುತ್ತಲೇ ಇದೆ. ಹಗ್ ಡೇ, ಟೆಡ್ಡಿ ಡೇ, ಕಿಸ್ ಡೇ, ಅಂತೆಲ್ಲಾ ಈಗ ಫೆಬ್ರುವರಿ 14ಕ್ಕೆ ವ್ಯಾಲೆಂಟೈನ್ಸ್ ಡೇ ಬಂದಿದೆ. ಈ ವ್ಯಾಲೆಂಟೈನ್ಸ್ ಡೇ ದಿನದಂತೆ ತನ್ನ ಮಾಜಿ ಪ್ರಿಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಖತ್ ಐಡಿಯಾ ಮಾಡಿದ್ದಾಳೆ. ಗುರುಗ್ರಾಂನ ಸೆಕ್ಟರ್ 23ರಲ್ಲಿ ನಡೆದ ಘಟನೆಯಿದು.
ಮಾಜಿ ಪ್ರಿಯತಮನ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವತಿ ಆತನ ಮನೆಯ ವಿಳಾಸಕ್ಕೆ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ. ಕ್ಯಾಶ್ ಆಂಡ್ ಡೆಲಿವರಿಯಲ್ಲಿ ಸುಮಾರು 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ.
ಹುಡುಗನ ಪ್ಲಾಟ್ ಗೆ ಒಂದಾದರ ಮೇಲೆ ಒಂದರಂತೆ ಪಿಜ್ಜಾಗಳು ಬಂದು ಬೀಳಲು ಆರಂಭಿಸಿವೆ. ಯುವಕನ ಮುಂದೆ 100 ಪಿಜ್ಜಾಗಳನ್ನು ತಂದಿಟ್ಟ ಡೆಲಿವರಿ ಬಾಯ್ ಗಳು ಹಣ ನೀಡುವಂತೆ ಕೇಳಿದ್ದಾರೆ. 100 ಪಿಜ್ಜಾಗಳನ್ನು ಖರೀದಿಸಲಾರದೆ ಯುವಕ ವಿಲವಿಲ ಒದ್ದಾಡಿದ್ದಾನೆ. ನಾನು ಪಿಜ್ಜಾಗಳನ್ನು ಆರ್ಡರ್ ಮಾಡಿಲ್ಲ, ದಯವಿಟ್ಟು ಇವುಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಎಂದು ಗೋಗರೆದಿದ್ದಾನೆ. ಒಂದು ಕಡೆ ಯುವಕ ಹಣ ನೀಡಲಾಗದೇ ಒದ್ದಾಡುತ್ತಿದ್ದರೆ. ಇನ್ನೊಂದು ಕಡೆ ಆತನ ಮಾಜಿ ಪ್ರೇಯಿಸಿ ಈ ಕಿತಾಪತಿ ಮಾಡಿ ಒಳಗೊಳಗೆ ಸಂತೋಷಪಟ್ಟು ವಿಭಿನ್ನ ರೀತಿಯಲ್ಲಿ ಸೇಡು ತೀರಿಸಿಕೊಳ್ಳುವ ಮೂಲಕ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದಾಳೆ.