Back To Top

 ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲೀಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ.
February 19, 2025

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲೀಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ.

ಮಹಾಕುಂಭಮೇಳ: ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲೀಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಬಾಲಿವುಡ್ ಸಿನಿಮಾ ಬಳಿಕ ಇದೀಗ ಮತ್ತೊಂದು ದೊಡ್ಡ ಆಫರ್ ಬಂದಿದೆ.
ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿ ತನ್ನ ಪ್ರಚಾರದ ರಾಯಭಾರಿಯಾಗಿ ನೇಮಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಬಾಬಿ ಚೆಮ್ಮನೂರು, ಇವತ್ತು ಮೊನಾಲಿಸಾ ಕೇರಳದ ಕಲ್ಲಿಕೋಟೆಗೆ ಬರಲಿದ್ದಾರೆ. ಅಲ್ಲಿ ಅವರನ್ನು ಕಂಪನಿಯ ಪ್ರಚಾರದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿ 15 ಲಕ್ಷ ರೂಪಾಯಿ ಸಂಬಳ ನೀಡಲಾಗುವುದು ಎಂದು ತಿಳಿಸಿದೆ.
16 ವರ್ಷದ ಹುಡುಗಿ ಮಧ್ಯ ಪ್ರದೇಶದ ಖಾರ್ಗೊನ್ ಜಿಲ್ಲೆಯ ಈ ಹುಡುಗಿ ಕುಂಭಮೇಳದಲ್ಲಿ ಕಂಡು ಸೋಷಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳ ತಲೆ ಬರಹದಲ್ಲಿ ಸುದ್ದಿಯಾಗಿ ಮಿಂಚಿದ್ದರು. ಈಗ ಹಿಂದಿಯ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಂದ ವರದಿಯ ಪ್ರಕಾರ, ದಿ ಡೈರಿ ಆಫ್ ಮನಿಪುರ ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮೊನಾಲಿಸಾ ಭೋಂಸ್ಲೆ 8 ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಇವಳ ಅದೃಷ್ಟವೋ? ಜೇನುಗಣ್ಣಿನ ಆಕರ್ಷಣೆಯೋ? ಈಕೆಯ ಪ್ರತೀ ವಿಡಿಯೋ ಮಿಲಿಯನ್ ವೀವ್ಸ್ ಪಡೆಯುತ್ತಿವೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾರೆ. ಸೋಷಿಯಲ್ ಬ್ಲೇಡ್ ಅನ್ನೋ ವೆಬ್ಸೈಟ್ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ 10 ಲಕ್ಷ ರೂಪಾಯಿ ದಾಟಲಿದೆ ಎಂದು ಅಂದಾಜಿಸಿದೆ.

Prev Post

ಕಿಲಾಳಿಗೆ ಸೀಮಂತವಾಯ್ತು ಇನ್ನು ಬಾಣಂತಿ ಆರೈಕೆ

Next Post

ಕೊಲೆಸ್ಟ್ರಾಲ್ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳು ಇವೆ?

post-bars

Leave a Comment

Related post