ವ್ಯಾಪಕ ಹಕ್ಕಿ ಜ್ವರ ಹಿನ್ನೆಲೆ: ಮೊಟ್ಟೆ ಈಗ ದುಬಾರಿ
ಹೆಚ್ಚಾದ ಹಕ್ಕಿ ಜ್ವರದಿಂದ ಬಳಲುತ್ತಿವೆ ಕೋಳಿಗಳು. ತತ್ತಿ ಬೆಲೆ ಗಗನಕ್ಕೇರಿ ಆಮ್ಲೇಟ್ ಪ್ರೀಯರು ಕಂಗಾಲು. ಮೊಟ್ಟೆ ಪೂರೈಕೆಗೂ ಕುತ್ತು.
ದಿನಸಿ ಸಾಮಾನಿನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಜನ ಸಾಮಾನ್ಯರ ಬದುಕು ಬವಣೆಯಾಗಿದೆ. ಬಡವರ ಬಾಡೂಟವಾಗಿದ್ದ ಕಡಿಮೆ ಬೆಲೆಗೆ ಸಿಗುವ ಪ್ರೋಟಿನ್ ಆದ ಮೊಟ್ಟೆ ಇದೀಗ ದುಬಾರಿ ಪದಾರ್ಥಗಳ ವರ್ಗಕ್ಕೆ ಸೇರಿದೆ. ಅಮೆರಿಕಾದ ಕೋಳಿಗಳಲ್ಲಿ HPAI ಜ್ವರ ಕಾಣಿಸಿಕೊಂಡಿದೆ. ಈ ಹಕ್ಕಿ ಜ್ವರದ ಪರಿಣಾಮ ಲಕ್ಷಾಂತರ ಕೋಳಿಗಳು ಸಾವನ್ನಪ್ಪುತ್ತಿವೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಕೋಳಿಗಳನ್ನು ಕೊಲ್ಲಲಾಗಿದೆ. ಇದರಿಂದ ಮೊಟ್ಟೆ ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮೊಟ್ಟೆಗಳು ಮಾರುಕಟ್ಟೆಯಲ್ಲಿ ಸಿಗೋದೇ ಕಷ್ಟವಾಗಿದೆ.
ಸಿಕ್ಕಾಪಟ್ಟೆ ಬೆಲೆ ಏರಿಕೆ
2025 ಜನವರಿಯಲ್ಲಿ ಮೊಟ್ಟೆಯಲ್ಲಿ ಶೇಕಡಾ 65 ರಷ್ಟು ಏರಿಕೆ ಕಂಡಿದೆ. ಸೀಮಿತ ಪೂರೈಕೆಯಿಂದ ಒಂದು ಡಜನ್ ಮೊಟ್ಟೆಗೆ 860 ರೂಪಾಯಿ ಆಗಿದೆ. ಮೊಟ್ಟೆ ಬೆಲೆ ಕೈಗೆಟುಕದ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಬಜೆಟ್ ಮೇಲೆ ಹೊರೆಯಾಗಿದೆ.
2015ರಲ್ಲೂ ಹಕ್ಕಿಜ್ವರ ವಿಪರೀತವಾಗಿ ಕಾಣಿಸಿಕೊಂಡಿತ್ತು. ಅಂದಿನಿಂದ ಅಮೆರಿಕದಲ್ಲಿ ಮೊಟ್ಟೆ ದರ ಏರಿಕೆಯಾಗುತ್ತಿದೆ. 2025 ಜನವರಿಯಲ್ಲಿ ಗ್ರೇಡ್ ಎ ಗೆ ಸೇರಿದ ಒಂದು ಡಜನ್ ಮೊಟ್ಟೆ ಬೆಲೆಯ ಕನಿಷ್ಠ ದರ 429 ರೂಪಾಯಿ. ಇದೇ ಮೊಟ್ಟೆ 2023ರಲ್ಲಿ 176.47 ರೂಪಾಯಿಗೆ ಸಿಗುತ್ತಿತ್ತು. ತಜ್ಞರ ಪ್ರಕಾರ, ಅಮೆರಿಕದಲ್ಲಿ ಮೊಟ್ಟೆ ಬೆಲೆಯಲ್ಲಿ ಇಳಿಕೆಯಾಗಲು ಇನ್ನೂ ಹಲವು ತಿಂಗಳುಗಳು ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ವಿದೇಶ ಮಾತ್ರವಲ್ಲದೇ ಭಾರತದಾದ್ಯಂತ ಅದರಲ್ಲೂ ರಾಜ್ಯಕ್ಕೂ ಇದರ ಬಿಸಿ ತಟ್ಟಿದ್ದು ಮೊಟ್ಟೆ ಪ್ರೀಯರು ಖರೀದಿಗೆ ಹಿಂದೆ ಮುಂದೆ ನೋಡುತ್ತಾರೆ.