Back To Top

 ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ..!ಜಿಯೋ ಹಾಟ್ಸ್ ಸ್ಟಾರ್ ನಿಂದ ಅಭಿಮಾನಿಗಳಿಗೆ ಬರೆ
February 18, 2025

ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ..!ಜಿಯೋ ಹಾಟ್ಸ್ ಸ್ಟಾರ್ ನಿಂದ ಅಭಿಮಾನಿಗಳಿಗೆ ಬರೆ

ಐಪಿಎಲ್: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಶುರುವಾಗಲಿದೆ. ಇನ್ನು ತಿಂಗಳು ಮಾತ್ರ ಬಾಕಿ ಇದೆ. ಕಳೆದ ಸೀಸನ್ ಐಪಿಎಲ್ ಆಟವನ್ನು ಜನ ಮೊಬೈಲಿ ನಲ್ಲೇ ನೋಡುತ್ತಾ ಕಾಲ ಕಳೆದರು. ಅದು ಸಂಪೂರ್ಣ ಫ್ರೀ ಆಗಿತ್ತು. ಆದರೀಗ ಅಭಿಮಾನಿಗಳ ಜೇಬಿಗೆ ಕತ್ತರಿ ಬಿದ್ದಿದೆ.
ಜಿಯೋ ಮತ್ತು ಹಾಟ್‌ ಸ್ಟಾರ್ ಈಗ ಒಂದೇ ಎರಡೂ ಫ್ಲಾಟ್‌ ಫಾರ್ಮ್‌ಗಳು ವಿಲೀನ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ.
ಇದು ಈಗ ಜಿಯೋ ಹಾಟ್‌ಸ್ಟಾರ್ ಆಗಿ ಮಾರ್ಪಟ್ಟಿವೆ. ಇಂದಿನಿಂದಲೇ ಈ ಸೇವೆ ಆರಂಭವಾಗಿದ್ದು, 50 ಕೋಟಿಗೂ ಹೆಚ್ಚು ಬಳಕೆದಾರರು ಇದ್ದಾರೆ. ಹಾಗಾಗಿ ಇನ್ಮುಂದೆ ಐಪಿಎಲ್ ಫ್ರೀ ಆಗಿ ನೋಡಲು ಆಗುವುದಿಲ್ಲ. ಇದು ಈಗ ಫ್ಯಾನ್ಸ್ ಗೆ ಶಾಕ್ ನೀಡಿದೆ.
ಈ ಹಿಂದೆ ಜಿಯೋ ಸಿನೆಮಾದಲ್ಲಿ ಉಚಿತವಾಗಿ ಐಪಿಎಲ್ ಬರುತ್ತಿತ್ತು. ಇನ್ಮುಂದೆ ಈ ಮೆಗಾ ಲೀಗ್ ನೋಡಲು ದುಡ್ಡು ನೀಡಬೇಕು. ಬಳಕೆದಾರ ಅನುಕೂಲತೆಗೆ ತಕ್ಕಂತೆ ರಿಚಾರ್ಜ್‌ ಮಾಡಿಸಿಕೊಳ್ಳಬಹುದು. ಈ ಯೋಜನೆ 149 ರೂಪಾಯಿಯಿಂದ ಶುರುವಾಗುತ್ತದೆ ಎಂದು ತಿಳಿದು ಬಂದಿದೆ.
ಜಾಹಿರಾತಿನ ಕಿರಿಕಿರಿ ಇಲ್ಲದೆ ಐಪಿಎಲ್‌ ನೋಡಲು 499 ರೂ. ಪ್ಲಾನ್ ರೀಚಾರ್ಜ್ ಮಾಡಿಸಬೇಕು. ಇದು ಅಭಿಮಾನಿಗಳಿಗೆ ಆಘಾತ ತಂದಿದೆ. ರಿಲಯನ್ಸ್‌ ಹಾಗೂ ಡಿಸ್ನಿ ದೇಶದಲ್ಲಿ 100ಕ್ಕೂ ಹೆಚ್ಚು ಡಿಜಿಟಲ್‌ ಫ್ಲಾಟ್‌ ಫಾರ್ಮ್‌ಗಳನ್ನು ನಿರ್ವಹಿಸುತ್ತವೆ. ಜಿಯೋ ಹಾಟ್ ಸ್ಟಾರ್‌ ವೇದಿಕೆಯಲ್ಲಿ ಐಪಿಎಲ್ ನೋಡಬಹುದು.
ಜೀಯೋ ಇತ್ತೀಚೆಗೆ ಎಲ್ಲಾ ಸೇವೆಗಳಿಗೂ ಬೆಲೆ ಏರಿಕೆ ಮಾಡಿದ್ದು ದುಬಾರಿ ದುನಿಯಾದ ಎಂಟಟೈನ್ಮೆಂಟ್ ಪ್ಲಾಟ್ ಫಾರ್ಮ್ ಆಗಿದೆ.

Prev Post

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಒಟಿಟಿಗೆ ಲಗ್ಗೆ

Next Post

ರೈಲು ಹಳಿ ಕಬ್ಬಿಣ ಕದ್ದ ಬಾಲಕರು: ಗದರಿಸಿ ಏಟು ನೀಡಿದ ಸಿಬ್ಬಂದಿ ವಿರುದ್ದ…

post-bars

Leave a Comment

Related post