Back To Top

 ಗಮನ ಸೆಳೆದ ‘ಹುಡುಗಾ ಬೇಕಾ’ QR ಕೋಡ್‘Rent a BOYFRIEND’ ಅಸಲಿ ಸತ್ಯ ಏನು?
February 16, 2025

ಗಮನ ಸೆಳೆದ ‘ಹುಡುಗಾ ಬೇಕಾ’ QR ಕೋಡ್‘Rent a BOYFRIEND’ ಅಸಲಿ ಸತ್ಯ ಏನು?

‘Rent a BOYFRIEND’ ಹೆಸರಲ್ಲಿ ಕ್ಯೂ-ಆರ್ ಕೋಡ್ ಸೃಷ್ಟಿಸಿ ಸಂಗಾತಿ ಇಲ್ಲದವರ ಎದೆಬಡಿತ ಹೆಚ್ಚಿಸಿದ್ದಾರೆ. ಯಾರೂ ಬಾಯ್ ಫ್ರೆಂಡ್ ಇಲ್ವಾ? ಹಾಗಿದ್ದರೆ ಯಾಕೆ ಚಿಂತೆ ಮಾಡ್ತೀರಿ. ಇಲ್ಲಿರುವ QR ಕೋಡ್ಗೆ ಸ್ಕ್ಯಾನ್ ಮಾಡಿ ಕೇವಲ 389 ರೂಪಾಯಿ ಪೇ ಮಾಡಿ. ಒಂದು ದಿನ ಸೆಲೆಬ್ರೇಟ್ ಮಾಡೋಕೆ ಹುಡುಗ ಸಿಗ್ತಾನೆ ಎಂದು ಪೋಸ್ಟರ್ ಹೇಳ್ತಿದೆ.
ಈ QR ಕೋಡ್ ಸ್ಕ್ಯಾನ್ ಮಾಡಿದ್ರೆ ಗೆಳೆಯ ಸಿಗಲ್ಲ. ಇದೊಂದು ಮಾರ್ಕೆಟಿಂಗ್ ತಂತ್ರಗಾರಿಕೆ. ಪ್ರೇಮಿಗಳ ದಿನವನ್ನು ಬಂಡವಾಳವನ್ನಾಗಿಸಿಕೊಂಡ ಕಿಡಿಗೇಡಿಗಳು ಈ ರೀತಿಯ ಪೋಸ್ಟರ್ ಅಂಟಿಸುತ್ತಿದ್ದಾರೆ. ಒಂದು ವೇಳೆ QR ಕೋಡ್ ಸ್ಕ್ಯಾನ್ ಮಾಡಿದ್ರೆ, ಹೆಣ್ಮಕ್ಕಳಿಗೆ ಬೇಕಾಗಿರುವ ಬ್ಯೂಟಿ ಪ್ರಾಡೆಕ್ಟ್ಗಳ ಕುರಿತ ಮಾಹಿತಿ ಸಿಗಲಿದೆ. ಇಷ್ಟವಾದರೆ ಖರೀದಿ ಮಾಡಬಹುದಾಗಿದೆ.
ಇನ್ನು ಈ ಪೋಸ್ಟರ್ ಜಯನಗರ, ಬನಶಂಕರಿ ಏರಿಯಾದ ಗೋಡೆಗಳ ಮೇಲೆ ವಿಚಿತ್ರ ಪೋಸ್ಟರ್ ಅಂಟಿಸಿದ್ದಾರೆ. ಇದನ್ನು ಗಮನಿಸಿರುವ ಸಾರ್ವಜನಿಕರು ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Prev Post

ಟಿಕೆಟ್ ದರ ಏರಿಸಿ ಖಾಲಿಯಾದ ನಮ್ಮ ಮೆಟ್ರೋ:10 ರೂಪಾಯಿ ಇಳಿಕೆ ಮಾಡಿರುವ BMRCL

Next Post

ಒಂದೇ ಕುಟುಂಬದ ಸಾವು, ಶವ ಪತ್ತೆ: ಡೆತ್ ನೋಟ್ ಪತ್ತೆ

post-bars

Leave a Comment

Related post