ನಿಮ್ಮ ಪ್ರೀತಿ ಕಣ್ಮುಂದೆ ಇರಲು ಟೆಡ್ಡಿಬೇರ್ ಉಡುಗೊರೆ
ರೋಸ್ ಡೇ, ಪ್ರಪೊಸ್ ಡೇ, ಚಾಕಲೇಟ್ ಡೇ ನಂತರ ಫೆಬ್ರವರಿ 10ಕ್ಕೆ ಆಚರಿಸುವುದೇ ಟೆಡ್ಡಿ ಡೇ.
ಪ್ರೀತಿ ಪಾತ್ರರ ಮೇಲೆ ಇರೋ ಪ್ರೀತಿ ಅಷ್ಟೇ ಪ್ರೀತಿ ಅವರು ಕೊಡೋ ವಸ್ತುಗಳ ಮೇಲೆ ಇರುತ್ತದೆ. ಮುಖ್ಯವಾಗಿ ಟೆಡ್ಡಿಬೇರ್ ನಿಂತ ಬೊಂಬೆಗಳು ಪ್ರೀತಿಯ ಸೇತುವೆಗಳನ್ನು ಇನ್ನಷ್ಟು ಸಬಲಗೊಳಿಸುತ್ತದೆ.
ಮುದ್ದಾದ ಟೆಡ್ಡಿ ಗಿಫ್ಟ್ ನೀಡುವುದರಿಂದ ನನ್ನ ಪ್ರಿಯ ವ್ಯಕ್ತಿಗಳು ಮುದ್ದಾಗಿದ್ದೂ ತನ್ನೆಲ್ಲಾ ಪ್ರೀತಿಯ ಭಾವಗಳನ್ನು ಟೆಡ್ಡಿಯ ಜೊತೆ ಹಂಚಿಕೊಳ್ಳುತ್ತಾರೆ.
ಫೆಬ್ರವರಿ ತಿಂಗಳು ಪ್ರೇಮ ಪಕ್ಷಿಗಳಿಗೆ ಬಹಳ ವಿಶೇಷವಾದ ತಿಂಗಳು ಅಂತಾನೇ ಹೇಳಬಹುದು. ಈ ತಿಂಗಳನ್ನು ಪ್ರೀತಿಯ ತಿಂಗಳು ಎಂದೂ ಕರೆಯುತ್ತಾರೆ. ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಸಂಗಾತಿ, ಸ್ನೇಹಿತ ಅಥವಾ ವಿಶೇಷ ವ್ಯಕ್ತಿಗೆ ಟೆಡ್ಡಿ ಬೇರ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತಾರೆ.
ಟೆಡ್ಡಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಎಂಬುದನ್ನು ತಿಳಿಯೋಣ.
ಟೆಡ್ಡಿ ಬೇರ್ಗಳು ಪ್ರೀತಿ, ವಾತ್ಸಲ್ಯ ಮತ್ತು ಬಾಲ್ಯದ ಮುಗ್ಧತೆಯನ್ನು ಪ್ರತಿನಿಧಿಸುವಂತ ಒಂದು ಸಾಫ್ಟ್ ಟಾಯ್ ಅಂತಾನೇ ಹೇಳಬಹುದು. ಇದು ಒತ್ತಡವನ್ನು ಕಡಿಮೆ ಮಾಡಲು, ಸಂತೋಷವನ್ನು ಹೆಚ್ಚಿಸಲು ಮತ್ತು ಸಂಬಂಧಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ದಂಪತಿಗಳು ಮತ್ತು ಪ್ರೇಮಿಗಳು ಟೆಡ್ಡಿಯನ್ನು ಪ್ರೀತಿ ಮತ್ತು ಕಾಳಜಿಯ ಸಂಕೇತವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ವಿಶೇಷವಾಗಿ ಪ್ರೇಮಿಗಳು ಟೆಡ್ಡಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ನವೆಂಬರ್ 14, 1902 ರಂದು, ಅಮೆರಿಕದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್, ಮಿಸ್ಸಿಸ್ಸಿಪ್ಪಿಯ ಕಾಡಿಗೆ ಬೇಟೆಯಾಡಲು ಹೋಗಿದ್ದರು. ಅವರೊಂದಿಗೆ ಸಹಾಯಕ ಹೋಲ್ಟ್ ಕೊಲಿಯರ್ ಕೂಡಾ ಇದ್ರು. ಇಲ್ಲಿ ಕೊಲಿಯರ್ ಗಾಯಗೊಂಡ ಕರಡಿಯೊಂದನ್ನು ಹಿಡಿದು ಮರಕ್ಕೆ ಕಟ್ಟಿ, ನಂತರ ಅವರು ಕರಡಿಗೆ ಗುಂಡು ಹಾರಿಸಲು ರಾಷ್ಟ್ರಪತಿಗಳಿಂದ ಅನುಮತಿ ಕೋರಿದರು. ಆದರೆ ಗಾಯಗೊಂಡ ಕರಡಿಯನ್ನು ನೋಡಿದಾಗ ಅಧ್ಯಕ್ಷ ರೂಸ್ವೆಲ್ಟ್ ಅವರ ಹೃದಯ ಕರಗಿ, ಕರಡಿಯನ್ನು ಕೊಲ್ಲಲು ನಿರಾಕರಿಸಿದರು. ನಂತರ ನವೆಂಬರ್ 16 ರಂದು, ದಿ ವಾಷಿಂಗ್ಟನ್ ಪೋಸ್ಟ್ನ ವ್ಯಂಗ್ಯಚಿತ್ರಕಾರ ಕ್ಲಿಫರ್ಡ್ ಕೆ ಬೆರ್ರಿಮನ್ ಅವರು ನಡೆದ ಈ ಘಟನೆಯನ್ನು ಆಧರಿಸಿ ವ್ಯಂಗ್ಯಚಿತ್ರವನ್ನು ರಚಿಸಿದರು
ಆಟಿಕೆ ತಯಾರಿಕಾ ಉದ್ಯಮಿ ಮಾರಿಸ್ ಮಿಚ್ಟಮ್ ಪತ್ರಿಕೆಯಲ್ಲಿ ಈ ವ್ಯಂಗ್ಯ ಚಿತ್ರವನ್ನು ನೋಡಿ ಕರಡಿ ಮರಿಯ ಆಕಾರದ ಆಟಿಕೆ ಮಾಡುವ ಬಗ್ಗೆ ಯೋಚಿಸಿದರು. ಅವರು ಅದನ್ನು ತಮ್ಮ ಪತ್ನಿ ರೋಸ್ ಅವರೊಂದಿಗೆ ವಿನ್ಯಾಸಗೊಳಿಸಿದರು ಮತ್ತು ಆ ಆಟಿಕೆಗೆ ‘ಟೆಡ್ಡಿ ಬೇರ್ʼ ಎಂದು ಹೆಸರಿಟ್ಟರು. ಟೆಡ್ಡಿ ಎಂಬ ಹೆಸರು ಇಡಲು ಕಾರಣವೆಂದರೆ ಅಧ್ಯಕ್ಷ ರೂಸ್ವೆಲ್ಟ್ ಅವರ ಅಡ್ಡಹೆಸರು ಟೆಡ್ಡಿ, ಆ ಆಟಿಕೆಗೆ ಟೆಡ್ಡಿ ಎಂಬ ಹೆಸರಿಡುವ ಮೂಲಕ ಆಟಿಕೆಯನ್ನು ಅಧ್ಯಕ್ಷ ರೂಸ್ವೆಲ್ಟ್ ಅವರಿಗೆ ಸಮರ್ಪಿಸಿದರು. ನಂತರ ಅದು ಬಹಳ ಜನಪ್ರಿಯವಾಯಿತು. ಅದಲ್ಲದೆ ಟೆಡ್ಡಿ ಬೇರ್ ಪ್ರೀತಿಯ ಸಂಕೇತವಾಯಿತು ಮತ್ತು ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲು ಪ್ರಾರಂಭಿಸಲಾಯಿತು.
ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸಲು ಟೆಡ್ಡಿ ಡೇ ಆಚರಿಸಲಾಗುತ್ತದೆ. ಟೆಡ್ಡಿ ಡೇಯಂದು ದಂಪತಿಗಳು, ಪ್ರೇಮಿಗಳು ಕ್ಯೂಟ್ ಟೆಡ್ಡಿ ಬೇರ್ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ. ಬಹಳಷ್ಟು ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಗಳಲ್ಲಿ, ಗೂಗಲ್ ಗ್ಯಾಲರಿಗಳಲ್ಲಿ ಟೆಡ್ಡಿ ಬೇರ್ ಜೊತೆ ಪ್ರೇಮಿಗಳು ಪೊಟೋ ತೆಗೆಸಿಕೊಂಡು, ಅಪ್ಪಿಕೊಂಡು ಮುದ್ದಾಡುವುದು ನೋಡಬಹುದು.
ಮುದ್ದಾದ ಕರಡಿ ಅದರ ಮೈ ಮೆತ್ತಗೆ ಇರುವುದರಿಂದ ಜನ ಬೇಗ ಗೊಂಬೆಗಳತ್ತ ಆಕಷಿಸಲ್ಪಡುವುದು ಸಹಜವಾಗಿದೆ.