Back To Top

 ಕೆಂಪು ಗುಲಾಬಿಗಳನ್ನು ನೀಡಿ ಪ್ರೀತಿ ನಿವೇದಿಸಿಕೊಂಡಾಗ….
February 11, 2025

ಕೆಂಪು ಗುಲಾಬಿಗಳನ್ನು ನೀಡಿ ಪ್ರೀತಿ ನಿವೇದಿಸಿಕೊಂಡಾಗ….

ಫೆಬ್ರವರಿ 7ರಂದು ರೋಸ್ ಡೇ ಗೆ ಚಾಲನೆ ನೀಡುವ ಮೂಲಕ ವಾರದ ಆಚರಣೆ ಆರಂಭಗೊಳ್ಳುತ್ತದೆ. ಫೆಬ್ರವರಿ 7ರಂದು ಪ್ರೇಮಿ ಅಥವಾ ಪ್ರಿಯತಮೆಗೆ ಗುಲಾಬಿ ಹೂ ನೀಡಿ ಪ್ರೀತಿ ನಿವೇದಿಸಿಕೊಳ್ಳುವುದು ಆಗಿದೆ ಅಲ್ಲದೇ, ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ ಅಥವಾ ನಾವು ಇಷ್ಟ ಪಡುವ ವ್ಯಕ್ತಿಗಳಿಗೆ ರೋಸ್ ಡೇ ದಿನ ಗುಲಾಬಿ ನೀಡುವುದು ಇತ್ತೀಚಿನ ಫ್ಯಾಷನ್ ಕೂಡ ಆಗಿದೆ.
ಗುಲಾಬಿ ಹೂವನ್ನು ಪ್ರೇಮಿಗಳು ಪರಸ್ಪರ ವಿನಿಮಯ ಮಾಡಿಕೊಂಡು ತಮ್ಮ ಉತ್ಕೃಟ ಪ್ರೀತಿಗೆ ಹೂವಿನ ಸಾಕ್ಷಿಯಾಗಿ ಪೋಟೋ ತೆಗೆಸಿಕೊಳ್ಳುವುದು ಈಗಿನ ಪ್ರೇಮಿಗಳ ಸಾಮಾನ್ಯ ಅಭ್ಯಾಸವಾಗಿದೆ.
ಈ ದಿನಗಳಲ್ಲಿ ಸ್ಥಳೀಯ ಪಾರ್ಕ್, ಕೆಫೆ, ಪ್ರವಾಸಿ ತಾಣಗಳೆಲ್ಲ ಪ್ರೇಮಿಗಳದ್ದೇ ಕಲರವ.
ಗುಲಾಬಿ ಹೂ ಪ್ರೀತಿಯ ಸಂಕೇತ ಆದ್ದರಿಂದ ಪ್ರೇಮಿಯನ್ನು ಹೂ ನೀಡುವ ಮೂಲಕ ಸಂತೋಷ ಪಡಿಸಲಾಗುತ್ತದೆ.
ರೋಸ್ ಡೇ ಗೆ ಕೆಂಪು ಗುಲಾಬಿ ಹೂವಿಗೆ ಬಹುವಾದ ಬೇಡಿಕೆ ಇರುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗುಲಾಬಿ ಹೂವಿನ ಮೂಲಕ ಪರಸ್ಪರ ಪ್ರೀತಿ, ಶುಭಾಶಯಗಳ ವಿನಿಮಯಕ್ಕೆ ವಿಶೇಷ ಸ್ಥಾನ ಇದ್ದು ರೋಮನ್ ಪುರಾಣದಲ್ಲಿ ಗುಲಾಬಿ ಹೂಗಳು ಪ್ರೀತಿ ಮತ್ತು ಉತ್ಸಾಹದ ಸಂಕೇತ ಎಂದು ಹೇಳಲಾಗಿದೆ.
ಪ್ರಾಚೀನ ಗ್ರೀಸ್ ನಲ್ಲಿ ಅಫ್ರೋಡೈಟ್ ಅನ್ನು ಗುಲಾಬಿ ದೇವತೆ ಎಂದು ಕರೆಯಲಾಗುತ್ತಿತ್ತು.
ಯುವ ಪ್ರೇಮಿಗಳಿಗೆ ಕೆಂಪು ಗುಲಾಬಿ ಹೂಗಳು ಪ್ರೀತಿಯನ್ನು ನಿವೇದಿಸಲು ಬೇಗನೇ ಆಕರ್ಷಿಸುವ ಬಣ್ಣವಾಗಿದೆ ಎಂದು ಹೇಳಲಾಗುತ್ತದೆ.
ಯಾವ ಬಣ್ಣದ ಗುಲಾಬಿ ನೀಡಿದರೆ?:
ಪಿಂಕ್ ಗುಲಾಬಿ: ಪ್ರೀತಿ ಮತ್ತು ಮೆಚ್ಚುಗೆ ಸಂಕೇತ.
ನೇರಳೆ ಗುಲಾಬಿ: ಮೊದಲ ನೋಟದ ಸೆಳೆತವಾಗಿದೆ.
ಹಳದಿ ಗುಲಾಬಿ: ಸ್ನೇಹದ ಸಂಕೇತವಾಗಿದೆ.
ಕೆಂಪು ಗುಲಾಬಿ: ಗಾಢವಾದ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ.
ಕಿತ್ತಳೆ ಬಣ್ಣದ ಗುಲಾಬಿ: ಉತ್ಸಾಹ ಮತ್ತು ಶಕ್ತಿಶಾಲಿಯ ಸಂಕೇತವಾಗಿದೆ.
ಬಿಳಿ ಗುಲಾಬಿ: ಮುಗ್ದತೆ ಮತ್ತು ಶುದ್ಧತೆ ಸಂಕೇತವಾಗಿದೆ.
ಗುಲಾಬಿ ದಿನ ಪ್ರೇಮಿಗಳಿಗಷ್ಟೇ ಸೀಮಿತವೇ ಖಂಡಿತಾ ಅಲ್ಲ. ನೀವು ಅತಿ ಹೆಚ್ಚು ಪ್ರೀತಿಸುವ ನಿಮ್ಮ ಹೆತ್ತವರು, ಸಹೋದರರಿಗೂ, ಗೆಳೆಯರಿಗೂ ಹೂಗಳನ್ನು ನೀಡಿ ಪ್ರೀತಿ ಬಾಂಧವ್ಯ ವೃದ್ಧಿಸಿಕೊಳ್ಳಬಹುದು.

ಶರಣ್ಯ ಕೋಲ್ಚಾರ್

Prev Post

ಬೆಂಗಳೂರು ಏರ್‌ಪೋರ್ಟ್‌ ವಿಮಾನ ಹಾರಾಟದಲ್ಲಿ ವ್ಯತ್ಯಯ

Next Post

ಪ್ರೀತಿಪಾತ್ರರಿಗೆ ಚಾಕಲೇಟ್ ನೀಡಿ ಸಿಹಿ ಸಂಬಂಧ ವೃದ್ಧಿಸಿ….

post-bars

Leave a Comment

Related post