Back To Top

 ಲೈಂಗಿಕ ಕಿರುಕುಳ ಆರೋಪ: ಅಪಪ್ರಚಾರ ದೂರು ದಾಖಲಿಸಿದ ರಾಮ್‌ಜೀ
February 3, 2025

ಲೈಂಗಿಕ ಕಿರುಕುಳ ಆರೋಪ: ಅಪಪ್ರಚಾರ ದೂರು ದಾಖಲಿಸಿದ ರಾಮ್‌ಜೀ

ಬೆಂಗಳೂರು: ಪುಟ್ಟಗೌರಿ ಮದುವೆ, ಗಿಣಿರಾಮದಂತಹ ಹಿಟ್‌ ಧಾರಾವಾಹಿಗಳನ್ನು ನೀಡಿದ್ದ ಕನ್ನಡ ಕಿರುತೆರೆಯ ನಿರ್ದೇಶಕ ಮತ್ತು ನಿರ್ಮಾಪಕ ಕೆಎಸ್ ರಾಮ್​ಜೀ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿದ್ದವು. ಇದೀಗ ನಿರ್ಮಾಪಕ ರಾಮ್​ಜೀ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಯುವನಟಿ ಒಬ್ಬರು ಯ್ಯುಟ್ಯೂಬ್‌ ಸಂದರ್ಶನದಲ್ಲಿ ರಾಮ್‌ಜೀ ಅವರ ಹೆಸರನ್ನು ಹೇಳದೆ ಲೈಗಿಂಕ ಕಿರುಕುಳದ ಆರೋಪ ಮಾಡಿದ್ದರು. ಸದ್ಯ ರಾಮ್‌ ಜೀ ವಿರುದ್ಧದ ಪೋಸ್ಟ್​ಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ‘ಎಕ್ಸ್​ಪೋಸಿಂಗ್ ಕೆಎಸ್ ರಾಮ್​ಜೀ’ ಹೆಸರಿನ ಪೇಜ್ ತೆರೆದು ರಾಮ್​ಜೀ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಲಾಗುತ್ತಿದೆ.

ಆ ಯುವತಿ ತನಗಾದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದು, ಕೆಲವು ಸುದ್ದಿ ವಾಹಿನಿಗಳ ಕದ ತಟ್ಟಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ ಆದರೆ, ಕೆ ಎಸ್‌ ರಾಮ್‌ಜಿ ನ್ಯಾಯಾಲಯದ ಮೊರೆ ಹೋಗಿ ಕಾರ್ಯಕ್ರಮ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ’ ಎಂಬ ಪೋಸ್ಟ್​ಗಳನ್ನು ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇದೀಗ ಕೆಎಸ್ ರಾಮ್​ಜೀ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ವಿರುದ್ಧ ಅಪಪ್ರಚಾರ ಮಾಡಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ. ತಾವು ಯಾವ ಯುವತಿಗೂ ಲೈಂಗಿಕ ಕಿರುಕುಳ ನೀಡಿಲ್ಲ, ಯಾವುದೇ ಅಪರಾಧ ಮಾಡಿಲ್ಲ ಎಂದು ರಾಮ್​ಜೀ ಹೇಳಿದ್ದಾರೆ. ಕನ್ನಡದ ಪ್ರಸಿದ್ಧ ನಿರ್ದೇಶಕ ನಿರ್ಮಾಪಕರ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಿರುವುದು ಕಿರುತೆರೆ ಲೋಕದಲ್ಲಿ ಆತಂಕ ಸೃಷ್ಟಿ ಮಾಡಿದೆ.

ಇದನ್ನು ಓದಿ:

https://infomindz.in/%e0%b2%ad%e0%b2%b0%e0%b2%a4-%e0%b2%ae%e0%b2%a4%e0%b2%a4-%e0%b2%87%e0%b2%97%e0%b2%b2%e0%b2%a1-%e0%b2%b9%e0%b2%a3%e0%b2%b9%e0%b2%a3/
Prev Post

8 ಬಜೆಟ್, 8 ಸೀರೆಗಳು, 8 ಮೈಲುಗಲ್ಲುಗಳು: ದಾಖಲೆ ಬರೆದ ಬಜೆಟ್‌

Next Post

ಸತತ ಏರಿಕೆ ಕಂಡಿದ್ದ ಚಿನ್ನದ ದರ ಯಥಾಸ್ಥಿತಿ

post-bars

Leave a Comment

Related post