8 ಬಜೆಟ್, 8 ಸೀರೆಗಳು, 8 ಮೈಲುಗಲ್ಲುಗಳು: ದಾಖಲೆ ಬರೆದ ಬಜೆಟ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಸತತ ಎಂಟು ಬಜೆಟ್ ಗಳನ್ನು ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟು ಬಜೆಟ್ ಗಳನ್ನು ಮಂಡಿಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಭಾರತದ ರಾಜತಾಂತ್ರಿಕ ಇತಿಹಾಸದಲ್ಲೇ ಸತತ ಅತೀ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರೆಂಬ ಹೆಗ್ಗಳಿಕೆಗೆ ಸಚಿವೆ ನಿರ್ಮಲಾ ಪಾತ್ರರಾಗಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಮಾತನಾಡುತ್ತಾ, ‘ಮಧ್ಯಮ ವರ್ಗದವರ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಈ ಬಜೆಟ್ ಹೊಂದಿದೆ’ ಎಂದು ಹೇಳಿದರು.

ಎಂಟು ವಿಧದ ಸೀರೆಗಳು!
ತನ್ನ ಐತಿಹಾಸಿಕ ಎಂಟನೇ ಬಜೆಟ್ ಮಂಡನೆಗೆ ಆಗಮಿಸಿದ ಸಚಿವೆ ನಿರ್ಮಲಾ ಅವರು ಮಧುಬನಿ ಸೀರೆಯಲ್ಲಿ ಕಂಗೊಳಿಸಿದರು. ಇದನ್ನು ಅವರಿಗೆ ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ 2021ರಲ್ಲಿ ಗಿಫ್ಟ್ ಆಗಿ ನೀಡಿದ್ದರು. ಮತ್ತು ಈ ಸೀರೆಯನ್ನು 2025-26ರ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಉಡುವಂತೆ ದುಲಾರಿ ಅವರು ಸಚಿವರನ್ನು ಕೇಳಿಕೊಂಡಿದ್ದರು. ಕ್ರೀಂ ಬಣ್ಣದ ಈ ಸೀರೆಯಲ್ಲಿ ಚಿನ್ನದ ಬಾರ್ಡರ್ ಇದ್ದು, ಇದಕ್ಕೆ ಮ್ಯಾಚ್ ಆಗುವಂತೆ ಅವರು ಕೆಂಪು ಕುಪ್ಪಸವನ್ನು ತೊಟ್ಟಿದ್ದರು.
2024ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು. ಇದರಲ್ಲಿ ಬ್ರೈಟ್ ಮೆಜೆಂಟಾ ಬಾರ್ಡರ್ ಇತ್ತು. ಈ ಸೀರೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯದ್ದಾಗಿದ್ದು, ಈ ಸೀರೆ ತನ್ನ ಸರಳ, ಆಕರ್ಷಕ ನೋಟಕ್ಕೆ ಮತ್ತು ಕ್ಲೀನ್ ಬಾರ್ಡರ್ ಹಾಗೂ ಪ್ಲೈನ್ ಡಿಸೈನ್ ಗೆ ಹೆಸರುವಾಸಿಯಾಗಿದೆ.
2024ರ ಕೇಂದ್ರ ಬಜೆಟ್ ನಲ್ಲಿ ಮೊಬೈಲ್ ಫೋನ್, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ ಹಾಗೂ ಮೂರು ಕ್ಯಾನ್ಸರ್ ಔಷಧಿಗಳಿಗೆ ರಿಯಾಯಿತಿಯಂತಹ ಪ್ರಮುಖ ಘೋಷಣೆಗಳನ್ನು ಮಾಡಲಾಗಿತ್ತು. ಇಥಿಯಂನಂತಹ 25 ಪ್ರಮುಖ ಖನಿಜಗಳ ಮೇಲಿನ ಕಸ್ಟಮ್ಸ್ ಡ್ಯೂಟಿ ರಿಯಾಯಿತಿ ನೀಡಲಾಗಿತ್ತು.
ಸಚಿವೆ ಸೀತಾರಾಮನ್ ಅವರು 2024ರ ಫೆ.01ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ನೀಲಿ ಬಣ್ಣದ ಕೈಮಗ್ಗದ ಟಸ್ಸರ್ ಸಿಲ್ಕ್ ಸೀರೆಯನ್ನು ಉಟ್ಟಿದ್ದರು. ಇದರಲ್ಲಿ ಕಾಂತಾ ಕರಕುಶಲವಿತ್ತು.
2023ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸೀತಾರಾಮನ್ ಅವರು ಗಾಢ ಕೆಂಪು ಬಣ್ಣದ ರೇಷ್ಮೆ ಸೀರೆಯನ್ನುಟ್ಟು ಗಮನ ಸೆಳೆದಿದ್ದರು. ಇದರಲ್ಲಿ ಕಪ್ಪು ಹಾಗೂ ಗೋಲ್ಡ್ ಟೆಂಪಲ್ ಬಾರ್ಡರ್ ಇತ್ತು. ಮತ್ತು ಈ ಬಾರ್ಡರ್ ನಲ್ಲಿ ರಥ, ನವಿಲು ಹಾಗೂ ಕಮಲಗಳ ಚಿತ್ತಾರವಿದ್ದು, ಇದು ಸಂಪ್ರದಾಯ, ಸಾಮರ್ಥ್ಯ ಹಾಗೂ ಸ್ಥಿರತೆಯನ್ನು ಪ್ರತಿಬಿಂಬಿಸುತ್ತಿತ್ತು.

ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ತೆಲಂಗಾಣ ರಾಜ್ಯದ ಪೊಚಂಪಳ್ಳಿ ಇಕಟ್ ಸೀರೆಯನ್ನುಟ್ಟು ಗಮನ ಸೆಳೆದಿದ್ದರು. ಈ ಸೀರೆ ಕೆಂಪು, ಕ್ರೀಂ ಹಾಗೂ ಹಸರು ಬಣ್ಣದ ಮಿಶ್ರಣವಾಗಿತ್ತು.
ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು, ಹಳದಿ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಇದಕ್ಕೆ ನೀಲಿ ಬಾರ್ಡರ್ ಇತ್ತು. ಪ್ರತೀ ಬಣ್ಣವೂ ವಿಶೇಷ ಅರ್ಥವನ್ನು ಒಳಗೊಂಡಿತ್ತು. ಹಳದಿ ಬೆಳವಣಿಗೆ, ಆಶಾವಾದ ಮತ್ತು ಹೊಸತನದ ಪ್ರಾರಂಭದ ಪ್ರತಿರೂಪವಾಗಿದ್ದರೆ, ನೀಲಿ ಸ್ಥಿರತೆ ಹಾಗೂ ಶಾಂತಿಯನ್ನು ಪ್ರತಿನಿಧಿಸುತ್ತಿತ್ತು. ಸವಾಲಿನ ಸಂದರ್ಭದಲ್ಲಿ ಬೆಳವಣಿಗೆ ಮತ್ತು ಸಶಕ್ತೀಕರಣದೆಡೆಗೆ ಸರಕಾರದ ಬದ್ಧತೆಯನ್ನು ಈ ಸೀರೆ ಪ್ರತಿಬಿಂಬಿಸುವಂತಿತ್ತು.
ಇದನ್ನು ಓದಿ: