ಹೊಸಪೇಟೆಯಲ್ಲಿ ಧ್ವಜಾರೋಹಣ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದ ಬೃಹತ್ ರಾಷ್ಟ್ರ ಧ್ವಜ!!?ಬಾಗಲಕೋಟೆಯಲ್ಲಿ ವೇದಿಕೆಯತ್ತ ನುಗ್ಗಿದ ಕಾಡುಕೋಣ !
ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿನ ಬೃಹತ್ ಧ್ವಜಸ್ತಂಭದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ವೇಳೆ ಬೃಹತ್ ರಾಷ್ಟ್ರ ಧ್ವಜದ ಹಗ್ಗ ತುಂಡಾಗಿ ಜಾರಿದ ಘಟನೆ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು ಧ್ವಜವನ್ನು ಮೇಲೆತ್ತಿ ಸುರಕ್ಷಿತವಾಗಿ ಇರಿಸಿದರು. ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಬೃಹತ್ ಧ್ವಜಸ್ತಂಭಕ್ಕೆ ಏರುತ್ತಿದ್ದ ಬೃಹತ್ ಧ್ವಜ ಕುಸಿದು ಬಿದ್ದ ಘಟನೆ ಮೊದಲ ಬಾರಿ ಗಣರಾಜ್ಯೋತ್ಸವ ನಡೆಯುತ್ತಿದ್ದ ವೇಳೆಯೇ ನಡೆದಿದೆ.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಧ್ವಜ ಕುಸಿದು ಬಿದ್ದ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದರು.
ಧ್ವಜಾರೋಹಣ ವೇಳೆ ಕಾಡುಕೋಣ ಎಂಟ್ರಿ
ಬಾಗಲಕೋಟೆಯಲ್ಲಿ ಧ್ವಜಾರೋಹಣ ವೇಳೆ ಕಾಡುಕೋಣವೊಂದು ಎಂಟ್ರಿ ಕೊಟ್ಟಿದೆ. ಬಾಗಲಕೋಟೆ ಬಿಟಿಡಿಎ ಸರಕಾರಿ ಶಾಲಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೆಲಕ್ಷಣ ಮಕ್ಕಳು ಹಾಗೂ ಸಿಬ್ಬಂದಿ ಭಯದಲ್ಲಿ ತತ್ತರಿಸುವಂತಾಯಿತು. ಶಾಲಾ ಮೈದಾನ ಪ್ರವೇಶಕ್ಕೂ ಮುನ್ನ ಸ್ಥಳೀಯರು ಧಾವಿಸಿ ಹೊರ ಓಡಿಸಿದರು.