Back To Top

 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಹೋಗಲು ಕಾರಣವೇನು?
January 26, 2025

1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಹೋಗಲು ಕಾರಣವೇನು?

ಮುಂಬೈ: ಬಾಂದ್ರಾದಲ್ಲಿರುವ ಬಾಲಿವುಡ್‌ ನಟ ಸೈಫ್‌ ಆಲಿ ಖಾನ್‌ ಅವರ ಮನೆಗೆ ನುಗ್ಗಿದ ದರೋಡೆಕೋರನೊಬ್ಬ ಚೂರಿಯಿಂದ ಇರಿದು ಅವರನ್ನು ಗಾಯಗೊಳಿಸುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಗಾಯಗೊಂಡ ಅವರನ್ನು ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿರುವ ವಿಡೀಯೊ ವೈರಲ್‌ ಆಗಿದೆ.
ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಗಾಯಗೊಂಡ ಸೈಫ್‌ ಆಲಿ ಖಾನ್‌ ಅವರನ್ನು ಅವರ ಹಿರಿಯ ಪುತ್ರ ಇಬ್ರಾಹಿಂ ಆಟೋ ರಿಕ್ಷಾದಲ್ಲಿ ಮುಂಬೈ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ವಿಚಾರ ಇದೀಗ ಹೊರ ಬಿದ್ದಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಮನೆಯೊಳಗೆ ನುಗ್ಗಿದ ಅಪರಿಚಿತ ವ್ಯಕ್ತಿ ಸೈಫ್‌ಗೆ ಚೂರಿಯಿಂದ 6 ಬಾರಿ ಇರಿದಿದ್ದ. ಕಾರು ಲಭ್ಯವಿಲ್ಲದ ಕಾರಣ ಗಾಯಗೊಂಡು ರಕ್ತ ಸೋರಿಕೆಯಾಗುತ್ತಿದ್ದ ತಂದೆಯನ್ನು ಇಬ್ರಾಹಿಂ ಆಟೋದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತಕ್ಷಣ ಹೊರಡಲು ಕಾರು ಸಿದ್ಧವಾಗಿಲ್ಲದ ಕಾರಣ ಇಬ್ರಾಹಿಂ ಸಮಯ ವ್ಯರ್ಥ ಮಾಡಲು ಇಚ್ಛಿಸದೆ ಸುಮಾರು 2 ಕಿ.ಮೀ. ದೂರದ ಆಸ್ಪತ್ರೆಗೆ ಆಟೋದಲ್ಲೇ ತಂದೆಯನ್ನು ಕರೆದೊಯ್ದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆಸ್ಪತ್ರೆ ಬಳಿ ಸೈಫ್‌ ಆಲಿ ಖಾನ್‌ ಅವರ ಪತ್ನಿ ಕರೀನಾ ಕಪೂರ್‌ ಕೂಡ ಆಟೋದ ಬಳಿ ಕಂಡು ಬಂದಿರುವ ವಿಡಿಯೊ ವೈರಲ್‌ ಆಗಿದೆ. ಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಸೈಫ್ ಅಲಿ ಖಾನ್ ಆಸ್ತಿ 1,200 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿದ್ದು ಇತ್ತ ಕರೀನಾ ಕಪೂರ್ 485 ಕೋಟಿ ರೂ.ಗಳ ಒಡತಿ. ಜತೆಗೆ ಇವರ ಬಳಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದೆ. ಹೀಗಿದ್ದೂ ತುರ್ತು ಸಂದರ್ಭದಲ್ಲಿ ಆಟೋ ನೆರವಿಗೆ ಬಂದಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಸೈಫ್‌ ಆಲಿ ಖಾನ್‌ ಅವರಿಗೆ 6 ಕಡೆ ಗಾಯಗಳಾಗಿದ್ದು, ಸರ್ಜರಿ ನಡೆಸಲಾಗಿದೆ. ಸರ್ಜರಿ ವೇಳೆ ಸೈಫ್ ಅಲಿಖಾನ್ ದೇಹದಲ್ಲಿ ಚಾಕುವಿನ ಚೂರು ಪತ್ತೆಯಾಗಿದೆ. ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣದಲ್ಲಿ ಮನೆಯಲ್ಲಿ ಕೆಲಸದವರ ಮೇಲೆ ಅನುಮಾನ ಮೂಡಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ಆರಂಭಿಸಲಾಗಿದೆ.
ಸೂಕ್ತ ಭದ್ರತೆ ಇಲ್ಲದೆ ಈ ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ.

Prev Post

ಪ್ರಯಾಗರಾಜ್‌ನ ಮಹಾ ಕುಂಭಮೇಳದಲ್ಲಿ ‘ಹಿಂದೂ ಏಕತಾ ಪಾದಯಾತ್ರೆ’

Next Post

ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕನಿಂದ ಮಾರಣಾಂತಿಕ ಹಲ್ಲೆ: ಕೆಲಸಕ್ಕೆ ವಿಳಂಬವಾಗಿದ್ದೇ…

post-bars

Leave a Comment

Related post