Back To Top

 BBK 11: ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ್ರಾ ಉಗ್ರಂ ಮಂಜು?
January 22, 2025

BBK 11: ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ್ರಾ ಉಗ್ರಂ ಮಂಜು?

ಬಿಗ್ ಬಾಸ್ ಕನ್ನಡ: ಸೀಸನ್ 11 ರ ಮುಕ್ತಾಯಕ್ಕೆ ಇನ್ನೇನು ಕಲವು ದಿನಗಳಷ್ಟೆ ಬಾಕಿಯಿದೆ. ಫಿನಾಲೆ ವೀಕ್ ಪ್ರಾರಂಭವಾಗಿದ್ದು, ಮುಂದಿನ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಈ ಬಾರಿಯ ಸೀಸನ್​ನಲ್ಲಿಒಂದು ವಾರದ ನಡುಕ ಸ್ಪಧಿಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದು ಬಿಬಿಕೆ 11 ಮುಗಿಯುವ ಹೊತ್ತಿಗೆ ಸ್ಪರ್ಧಿಗಳ ಮಧ್ಯೆ ಬೆಂಕಿ ಹತ್ತಿಕೊಂಡಿದೆ. ಗೆಲ್ಲುವ ಭರದಲ್ಲಿ ಕೋಪ, ಪರಾಕಷ್ಠೆ ಎದ್ದು ಕಾಣುತ್ತಿದೆ.
ಪದೇ ಪದೇ ಹಳೆಯ ವಿಚಾರಗಳನ್ನೇ ಎತ್ತಿಕೊಂಡು ಮತ್ತೆ ದ್ವೇಷ ಬೆಳಸಿಕೊಳ್ಳುತ್ತಿದ್ದಾರಾ ಸ್ಪರ್ಧಿಗಳು ಅಂತ ಅನುಮಾನ ಮೂಡಿದೆ. ಜೊತೆಗೆ ಪ್ರಾಪರ್ಟಿ ಬಗ್ಗೆ ಜಾಗರೂಕರಾಗಿರಿ ಎಂದು ಬಿಗ್ ಬಾಸ್ ಸಾವಿರ ಸಲ ಹೇಳಿದರೂ ಸ್ಪರ್ಧಿಗಳು ಅದರ ಕಡೆ ಗಮನವೇ ಕೊಡುತ್ತಿಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ಟಾಸ್ಕ್.
ಬಿಗ್ ಬಾಸ್ ಒಂದು ಚಟುವಟಿಕೆಯಲ್ಲಿ ಮನದಲ್ಲಿ ಹುದುಗಿರುವ ಕೋಪ-ಬೇಸರ-ಹತಾಶೆಯನ್ನು ಮಡಿಕೆ ಒಡೆಯುತ್ತ ಮನದೊಳಗಿನ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ನಿಮಗೆ, ಯಾರ ಮೇಲೆ ಕೋಪ ಇದೆಯೋ ಅವರ ಫೋಟೋವನ್ನು ಗೊಂಬೆ ತಲೆಯಾಗಿರುವ ಮಡಿಕೆಗೆ ಅಂಟಿಸಿ, ಕೋಲಿನಿಂದ ಹೊಡೆಯಬೇಕು ಎಂದು ಟಾಸ್ಕ್​ ಕೊಡಲಾಗಿದೆ.
ಈ ಟಾಸ್ಕ್​ನಲ್ಲಿ ಉಗ್ರಂ ಮಂಜು ರುದ್ರವತಾರ ತಾಳಿದ್ದಾರೆ. ಇದರಲ್ಲಿ ಮಂಜು ಅವರು ರಜತ್ ಹಾಗೂ ಭವ್ಯಾ ಗೌಡ ಹೆಸರು ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಮಂಜು ಅವರು ಭವ್ಯಾ ಮೇಲಿನ ಕೋಪಕ್ಕೆ ಅಲ್ಲಿರುವ ಪ್ರಾಪರ್ಟಿಯನ್ನು ಪುಡಿ.. ಪುಡಿ.. ಮಾಡಿದ್ದಾರೆ. ಡ್ರಮ್ ಅನ್ನು ಕಾಲಿನಲ್ಲಿ ಒದ್ದಿದ್ದಾರೆ. ಭವ್ಯಾ ಬಗ್ಗೆ ಮಾತನಾಡಿದ ಮಂಜು, ಮೊದಲಿಗೆ ಅಣ್ಣ ಅಂತೀಯ.. ಅಮೇಲೆ ಮಂಜು ಅವ್ರೇ ಅಂತೀಯಾ.. ಹನುಮಂತುಗೆ ಹೊಡಿತೀಯ.. ತ್ರಿವಿಕ್ರಮ್ ಸ್ಟೇಟ್ಮೆಂಟ್ ಕೊಟ್ರು ಅಲ್ವ ನನ್ನಿಂದಲೇ ಇಲ್ಲಿ ತನಕ ಬಂದಿದ್ದಿ ಅಂತ ಇಂಡಿವ್ಯೂಜುವಲ್ ಆಡ್ತಾ ಇಲ್ವೆ.. ಯಾರಿಗೋ ಸಿಗಬೇಕಾದ ಕ್ಯಾಪ್ಟನ್ಸಿ.. ಮೋಸ ಮಾಡ್ಕೊಂಡು ಕ್ಯಾಪ್ಟನ್ ಆದ್ನಾ ಎಂದು ಮಾತನಾಡಿದ್ದಾರೆ.
ಅತ್ತ ಭವ್ಯಾ ಕೂಡ ನಾನೇನಾದ್ರೂ ಅಗ್ರಿಮೆಂಟ್ ಮಾಡಿದ್ನಾ ಮಂಜಣ್ಣ ಅಂತ ಕರೀತೀನಿ ಅಂತ. ಮೊದಲು ನಿಮ್ಮಲ್ಲಿ ಎಷ್ಟು ತೂತು ಇದೆ ಅಂತ ನೋಡಿಕೊಳ್ಳಿ, ನಿಮ್ಮ ಗೌತಮಿ ವಿಚಾರಕ್ಕೆ ನಾನು ಬಂದಿದ್ದೀನಾ, ಅರ್ಹತೆ ಇಲ್ಲ ನಿಮಗೆ ನನ್ನ ಬಗ್ಗೆ ಮಾತಾಡೋಕೆ ಗೇಟ್ ಲಾಸ್ಟ್ ಅಂತ ಸಿಟ್ಟಿಗೆದ್ದಿದ್ದಾರೆ. ಭವ್ಯಾ ಮೇಲಿನ ಕೋಪಕ್ಕೆ ಮಂಜು ಅವರು ಬಿಗ್ ​ಬಾಸ್​ ಪ್ರಾಪರ್ಟಿಗಳು ಪುಡಿ ಪುಡಿಯಾಗಿವೆ.

Prev Post

ಟ್ರಂಪ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ವಿವೇಕ್ ರಾಮಸ್ವಾಮಿ ರಾಜೀನಾಮೆ!

Next Post

ಒಡಿಶಾ- ಛತ್ತೀಸ್‌ಗಡ ಗಡಿಯಲ್ಲಿ ಭದ್ರತಾ ಸಿಬ್ಬಂದಿಗಳಿಂದ 12 ನಕ್ಸಲರ ಎನ್‌ಕೌಂಟರ್‌

post-bars

Leave a Comment

Related post