Back To Top

 ಅಧಿಕಾರಕ್ಕೆ ಬರುತ್ತಿದ್ದಂತೆ ಮಹತ್ವದ ನಿರ್ಣಯಗಳಿಗೆ ಟ್ರಂಪ್ ಸಹಿ
January 22, 2025

ಅಧಿಕಾರಕ್ಕೆ ಬರುತ್ತಿದ್ದಂತೆ ಮಹತ್ವದ ನಿರ್ಣಯಗಳಿಗೆ ಟ್ರಂಪ್ ಸಹಿ

ನೂತನ ಅಮೆರಿಕ ಎಂಬ ಪರಿಕಲ್ಪನೆಯನ್ನು ಕೈಗೆತ್ತಿಕೊಂಡಿರುವ ಟ್ರಂಪ್‌, ಹತ್ತು ಹಲವು ಮಹತ್ವ ಆದೇಶಗಳಿಗೆ ತಮ್ಮ ಎರಡನೇ ಆಡಳಿತಾವಧಿಯ ಮೊದಲ ದಿನವೇ ಸಹಿ ಮಾಡಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ 47ನೇ ಅ‍ಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿರುವ ಬೆನ್ನಲ್ಲೇ ಹಲವು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದಾರೆ. ನೂತನ ಅಮೆರಿಕ ಎಂಬ ಪರಿಕಲ್ಪನೆಯನ್ನು ಕೈಗೆತ್ತಿಕೊಂಡಿರುವ ಟ್ರಂಪ್‌, ವಲಸಿಗರ ಮೇಲಿನ ನಿರ್ಬಂಧ, ಕ್ಯಾಪಿಟಲ್‌ ಹಿಲ್‌ ದಂಗೆಕೋರರಿಗೆ ಕ್ಷಮಾದಾನ, ಮರಣದಂಡಣೆಗೆ ಸಂಬಂಧಿತ ವಿಚಾರಗಳು ಸೇರಿದಂತೆ ಹತ್ತು ಹಲವು ಮಹತ್ವ ಆದೇಶಗಳಿಗೆ ತಮ್ಮ ಎರಡನೇ ಆಡಳಿತಾವಧಿಯ ಮೊದಲ ದಿನವೇ ಸಹಿ ಮಾಡಿದ್ದಾರೆ. ಹಾಗಿದ್ದರೆ ಮೊದಲ ದಿನವೇ ಟ್ರಂಪ್‌ ಘೋಷಣೆಗಳೇನು? ಇಲ್ಲಿದೆ ಸವಿಸ್ತಾರವಾದ ವರದಿ.
ದಾಖಲೆ ಇಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದಾಗಿ ಅವರು ಹೇಳಿದ್ದಾರೆ. ಪನಾಮ ಕಾಲುವೆಯನ್ನು ಅಮೆರಿಕ ವಾಪಸ್ ಪಡೆಯುತ್ತದೆ ಮತ್ತು ಮೆಕ್ಸಿಕೊ ಕೊಲ್ಲಿಯನ್ನು ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್‌ಒ) ಅಮೆರಿಕವನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳುವ ಕಾರ್ಯನಿರ್ವಾಹಕ ಆದೇಶಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳಿಸುವ ಮೂಲಕ ಅಮೆರಿಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇನ್ನು ಕ್ಷಮಾದಾನದ ವಿಚಾರಕ್ಕೆ ಬಂದರೆ, 2021ರ ಜ.06ರಂದು ಅಮೆರಿಕಾ ರಾಜಧಾನಿ ಮೇಲೆ ನಡೆಸಿದ ದಾಳಿಯ(ಕ್ಯಾಪಿಟಲ್‌ ಹಿಲ್‌ ದಂಗೆಕೋರರು) ಸೂತ್ರಧಾರರಿಗ ನೀಡಲಾಗಿರುವ ಶಿಕ್ಷೆಯಿಂದ ಅವರಿಗೆ ವಿನಾಯಿತಿ ನೀಡಿ ಅವರಿಗೆ ಕ್ಷಮಾದಾನ ನೀಡುವ ವಿಚಾರಕ್ಕೆ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ
ಆರ್ಥಿಕತೆ ವಿಚಾರವನ್ನು ಗಮನದಲ್ಲಿರಿಸಿಕೊಂಡು, ಬಿಡೇನ್ ಆಡಳಿತ ಜಾರಿಗೆ ತಂದಿದ್ದ ಎಲೆಕ್ಟ್ರಿಕ್ ವಾಹನ ಕಡ್ಡಾಯ ನೀತಿಗೆ ಅಂತ್ಯ ಹಾಡಿದ್ದಾರೆ. ಮರಣದಂಡನೆಯನ್ನು ಜಾರಿಗೊಳಿಸಲು ಎಲ್ಲಾ ರಾಜ್ಯಗಳು ಸಾಕಷ್ಟು ಮಾರಕ ಇಂಜೆಕ್ಷನ್ ಔಷಧಿಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಮತ್ತು ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಟಾರ್ನಿ ಜನರಲ್‌ಗೆ ನಿರ್ದೇಶಿಸುವ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ.

Prev Post

ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮ : ರಾಜ್ಯಪಾಲರಿಂದ ಉದ್ಘಾಟನೆ

Next Post

ಟ್ರಂಪ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ವಿವೇಕ್ ರಾಮಸ್ವಾಮಿ ರಾಜೀನಾಮೆ!

post-bars

Leave a Comment

Related post