Back To Top

 ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ
January 20, 2025

ಆನ್‌ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡು ಲಾಡ್ಜ್ ನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ

ಬೇಲೂರು : ಆನ್‌ಲೈನ್ ಗೇಮ್ ನಿಂದ ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಪುಷ್ಪಗಿರಿ ಲಾಡ್ಜ್ ನಲ್ಲಿ ನಡೆದಿದೆ.

23 ವರ್ಷದ ರಾಕೇಶ್ ಗೌಡ ಎಂಬ ಯುವಕ ನೇಣಿಗೆ ಶರಣಾಗಿರುವ ಯುವಕ. ಮೃತ ರಾಕೇಶ್ ಗೌಡ ತಾಲ್ಲೂಕಿನ ಚೋಕನಹಳ್ಳಿ ಗ್ರಾಮದವನಾಗಿದ್ದು, ಇವನು ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಹಲವಾರು ತಿಂಗಳಿಂದ ಆನ್‌ಲೈನ್ ಗೇಮ್ ನಲ್ಲಿ ರಾಕೇಶ್ ಗೌಡ ಮಗ್ನನಾಗಿದ್ದ. ರಮ್ಮಿ ಆನ್‌ಲೈನ್ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ನಿನ್ನೆ ಮದ್ಯಹ್ನ 2 ಗಂಟೆ ಸುಮಾರಿಗೆ ಚೋಕನಹಳ್ಳಿ ಯಿಂದ ಬೇಲೂರು ಪುಷ್ಪಗಿರಿ ಲಾಡ್ಜ್ ಗೆ ಬಂದಿದ್ದಾನೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಡೆತ್ ನೋಟ್ ನಲ್ಲಿ ಅವರ ತಾಯಿಗೆ ಕ್ಷಮೆ ಕೇಳಿ, ರಮ್ಮಿ ಆನ್‌ಲೈನ್ ಗೇಮ್ ಬ್ಯಾನ್ ಮಾಡಬೇಕು ಯಾರು ಆನ್ ನೈನ್ ಗೇಮ್ ಹಾಡಬೇಡಿ, ಆನ್‌ಲೈನ್ ಗೇಮ್ ಬ್ಯಾನ್ ಮಾಡುವಂತೆ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದು, ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ನನ್ನ ಅಂತಿಮ ದರ್ಶನಕ್ಕೆ ಬರಬೇಕು ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೆನ್ನೆ ಸಂಜೆಯಾದರು ರೂಮ್ ನಿಂದ ಯುವಕ ಹೊರಬಂದಿಲ್ಲ. ಲಾಡ್ಜ್ ನವರಿಗೆ ಅನುಮಾನ ಬಂದು ಪೊಲೀಸ್ ಗೆ ಮಾಹಿತಿ ತಿಳಿಸಿದ್ದಾರೆ. ಪೋಲೀಸ್ ಮತ್ತು ಸ್ಥಳಿಯರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Prev Post

ರಾಸಲೀಲೆ..ಪ್ರಕರಣ : ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು ಮಂಜೂರು.

Next Post

ಖೋ ಖೋ ವಿಶ್ವಕಪ್ ನಲ್ಲಿ ಮಿಂಚಿದ ಮೈಸೂರಿನ ಕ್ರೀಡಾಪಟು ಬಿ. ಚೈತ್ರಾ!! ತವರಲ್ಲಿ…

post-bars

Leave a Comment

Related post