ಡಾಲಿ ಧನಂಜಯ ಮದುವೆ ಕಾಗದ ಎಷ್ಟು ಸಿಂಪಲ್ ಆಗಿದೆ ನೀವೇ ನೋಡಿ
“ಬಡವರ ಮಕ್ಳು ಬೆಳೀಬೇಕು ಕಣ್ರೀ” ಅನ್ನುತ್ತಾ ಬೆಳ್ಳಿ ಪರದೆಯಲ್ಲಿ ಹಲವು ಏಳು ಬೀಳುಗಳ ನಂತರ ನಾಯಕ ನಟನಾಗಿ ನಂತರ ನಿರ್ಮಾಪಕನಾಗಿ ಬೆಳೆದ ನಟ ನಮ್ಮ ಸ್ಯಾಂಡಲ್ವುಡ್ ನಟ ರಾಕ್ಷಸ ಡಾಲಿ ಧನಂಜಯ ಇನ್ನು ಮುಂದೆ ಬ್ಯಾಚುಲರ್ ಅಲ್ಲ ಅನ್ನೋ ವಿಷಯ ಎಲ್ಲರಿಗೂ ತಿಳಿದಿದೆ.
ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ರವರನ್ನು ಮುಂದಿನ ಫೆಬ್ರವರಿ ತಿಂಗಳ ೧೬ನೇ ತಾರೀಕಿನಂದು ಮೈಸೂರಿನಲ್ಲಿ ಮದುವೆ ಆಗಲಿರುವರು ಅಂತ ತಿಳಿದು ಬಂದಿದೆ. ಅತ್ಯಂತ ಸರಳವಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡ ಡಾಕ್ಟರ್ – ಆಕ್ಟರ್ ಜೋಡಿ ಈಗ ಸಪ್ತಪದಿ ತುಳಿಯುತ್ತಿರುವುದು ಬಹಳ ಅವರ ಅಭಿಮಾನಿಗಲ್ಲಿ ಸಂತಸ ತಂದಿದೆ.
ಅತ್ಯಂತ ಸರಳವಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡ ಡಾಲಿ ಅವರು ತಮ್ಮ ಸರಳ ಆಮಂತ್ರಣ ಪತ್ರದಿಂದ ಕೂಡ ಗಮನ ಸೆಳೆದಿದ್ದಾರೆ. ಅತ್ಯಂತ ಸುಂದರ ಸರಳ ಜೊತೆಗೆ ವಿನೂತನವಾದ ಆಮಂತ್ರಣ ಪಾತ್ರದಲ್ಲಿ ಬರೆದ ಸಾಲುಗಳು ಹೀಗಿವೆ,
ಪ್ರೀತಿಯ ಬಂಧು ಮಿತ್ರರೇ,
ನಿಮ್ಮ ಪ್ರೀತಿಯ ಧನಂಜಯ ಹಾಗು ಧನ್ಯತ ಮಾಡುವ ನಮಸ್ಕಾರಗಳು.
ನಾವು ಖುಶಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪಾತ್ರ ಬರೆಯುತ್ತಿದ್ದೇವೆ. ತಾವು ಎಲ್ಲಾದರೂ, ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ಆಶೀರ್ವಾದ ಮಾಡಬೇಕು.
ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ನೀವು ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ.
ಮತ್ತೆಲ್ಲಾ ಕ್ಷೇಮವಷ್ಟೇ
ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ
ಧನಂಜಯ-ಧನ್ಯತ


ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ನಡೆಯಲಿರುವ ಸಮಾರಂಭಕ್ಕೆ ಆಮಂತ್ರಣ ಪಾತ್ರವನ್ನು ನೀಡಲು ಡಾಲಿ ಸಮಯವನ್ನು ಮೀಸಲಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಲವಾರು ಸಿನಿಮಾ ನಟರು, ರಾಜಕೀಯ ಧುರೀಣರು ಈ ಶುಭ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಿನಲ್ಲಿ ಈ ವರ್ಷದ ಮೊದಲನೇ ತಿಂಗಳು ಈ ಕಾರ್ಯಕ್ರಮ ನಡೆಯುತ್ತಿದೆ.