Back To Top

 ಸಾಮಾಜಿಕ ಜಾಲತಾಣ ಬಳಕೆಗೆ ಪೋಷಕರ ಅನುಮತಿ ಕಡ್ಡಾಯ
January 5, 2025

ಸಾಮಾಜಿಕ ಜಾಲತಾಣ ಬಳಕೆಗೆ ಪೋಷಕರ ಅನುಮತಿ ಕಡ್ಡಾಯ

ನವದಿಲ್ಲಿ:18 ವರ್ಷಕ್ಕಿಂತ ಕೆಳಗಿನ ಮಕ್ಕಳು ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ಬಳಸಲು ಮತ್ತು ಖಾತೆ ತೆರೆಯಲು ಕೇಂದ್ರ ಸರಕಾರದ ನೀತಿಯ ಪ್ರಕಾರ ಪೋಷಕರ ಅನುಮತಿ ಕಡ್ಡಾಯ ಎಂದು ತೀರ್ಮಾನಿಸಿದೆ.
2023ರಲ್ಲಿ ಪ್ರಸ್ಥಾಪವಾಗಿದ್ದ ಈ ವಿಚಾರಕ್ಕೆ ಕೇಂದ್ರ ಸರಕಾರ ಸಂಸತ್ತಿನ ಅನುಮತಿ ಪಡೆದುಕೊಂಡಿದ್ದು ಡಿಜಿಟಲ್‌ ಖಾಸಗಿ ಮಾಹಿತಿ ರಕ್ಷಣಾ ಕಾಯ್ದೆಗೆ ಕೆಲವೊಂದು ತಿದ್ದುಪಡಿ ಮಾಡಿದೆ, ಅಲ್ಲದೆ ಹೊಸ ಕರಡು ವರದಿಯನ್ನು ಶುಕ್ರವಾರ ಅಂದರೆ ಜ.4ರಂದು ಬಿಡುಗಡೆ ಮಾಡಿದೆ.
ಇನ್ನು ಈ ವಿಚಾರದ ಬಗ್ಗೆ ಪೋಷಕರ ಅಭಿಪ್ರಾಯ ಕೇಳಲು ಮತ್ತು ನಿಧಾರ ತಿಳಿಸಲು ಫೆ.18ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದೆ, ಪೋಷಕರ ಅಭಿಪ್ರಾಯ ಆಲಿಸಿ ಅಂತಿಮ ವರದಿ ಬಿಡುಗಡೆಗೆ ಸರಕಾರ ಮುಂದಾಗಿದೆ.
ವರದಿ ಸಕಾರಾತ್ಮಕವಾಗಿದ್ದರೆ ಮಕ್ಕಳು ಸಾಮಾಜಿಕ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ ಮತ್ತು ಅಪರಾಧ ಸಂಭವಿಸಿದರೆ ಪೋಷಕರು ಹೊಣೆಯಾಗುತ್ತಾರೆ. ಅದರೊಂದಿಗೆ ಖಾಸಗಿ ಮಾಹಿತಿ ರಕ್ಷಣೆ ಮತ್ತು ಅಳಿಸಿ ಹಾಕುವ ಜವಾಬ್ದಾರಿ ಮತ್ತು ಅಧಿಕಾರ ಬಳಕೆದಾರನಿಗೆ ಇರಲಿದೆ.
ಕರಡು ನಿಯಮದ ಪ್ರಕಾರ ಮಕ್ಕಳ ವೈಯಕ್ತಿಕ ದತ್ತಾಂಶ ದಾಖಲಿಸುವ ಮೊದಲು ಅಪ್ರಾಪ್ತರು ಪೋಷಕರ ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಸಾಮಾಜಿಕ ಜಾಲತಾಣ ವೇದಿಕೆ ಖಚಿತಪಡಿಸಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ನಿಜವಾದ ಪೋಷಕರೇ ಹಾಗೂ ವಯಸ್ಕರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ.
ಮೆಟಾ, ಗೂಗಲ್‌ನಂತಹ ಬೃಹತ್‌ ಕಂಪನಿಗಳು ಕಾಯಿದೆಯಲ್ಲಿನ ಮಕ್ಕಳ ನಿಯಮವನ್ನು ಬದಲಾಯಿಸಿ 18 ವರುಷದ ಬದಲಿಗೆ 14 ವರುಷಕ್ಕೆ ಸೀಮಿತಗೊಳಿಸಬೇಕು ಎಂದು ಬೇಡಿಕೆ ಇಟ್ಟಿವೆ ಎಂದು ಹೇಳಲಾಗಿದೆ.
ಪ್ರಸ್ತಾವಿಕ ನಿಯಮ ಮತ್ತು ಡಿಜಿಟಲ್‌ ವೈಯಕ್ತಿಕ ದತ್ತಾಂಶ ದಾಖಲಿಸುವ ರಕ್ಷಣಾ ಕಾಯ್ದೆ ನಿಯಮಗಳ ಜಾರಿಗೆ 2023ರಲ್ಲಿ ರಾಷ್ಟ್ರಪತಿ ಒಪ್ಪಿಗೆ ಪಡೆದಿದ್ದರೂ ಕೂಡ ಅದರ ಜಾರಿಗೆ ನಿಯಮ ರೂಪಿಸಲಾಗಿದೆ.
ಡೇಟಾ ಸಂರಕ್ಷಣೆ ಕಾಯದೆಯ ವೈಯಕ್ತಿಕ ಗೌಪ್ಯತೆಯನ್ನು ಬಲಪಡಿಸುವುದಿಲ್ಲ ಮತ್ತು ವ್ಯಕ್ತಿಗಳ ಡೇಟಾ ದುಬಳಕೆ ಮಾಡಿಕೊಳ್ಳುವ ಇತರ ಸಂಸ್ಥೆಗಳ ಮೇಲೆ ಹೊಣೆಗಾರಿಕೆ ಹೊರಿಸಲು ವಿಫಲವಾಗಿದೆ ಮತ್ತು ಕೈಂ ಸಂಬಂಧಿ ಪ್ರಕರಣಗಳು ಹೆಚ್ಚಾಗುವ ಸಂಭವ ಇದೆ ಎಂದು ವಿಮರ್ಶಕರು ಕಳವಳ ವ್ಯಕ್ತಪಡಿಸಿದ್ದಾರೆ.

Prev Post

ನಿಮ್ಮ ಮುಖ ಲಕ ಲಕ ಹೊಳೆಯಬೇಕಾ?

Next Post

ಒಳ ನುಸುಳುಕೋರ ತಡೆಗೆ BSF ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ: ಮಮತಾ ಬ್ಯಾನರ್ಜಿ

post-bars

Leave a Comment

Related post