Back To Top

 ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾರ ಈ ಸುದ್ದಿಯು ಕೇವಲ ಊಹಪೋಹವೆ?
January 4, 2025

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾರ ಈ ಸುದ್ದಿಯು ಕೇವಲ ಊಹಪೋಹವೆ?

ಮಾಜಿ ಆರ್‌ಸಿಬಿ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಚಹಾಲ್ ಇತ್ತೀಚಿಗೆ ಐಪಿಎಲ್ ೨೦೨೫ ರ ಆಕ್ಷನ್ ನಲ್ಲಿ ಭಾರಿ ೧೮ ಕೋಟಿ ಮೊತ್ತಕ್ಕೆ ಪಂಜಾಬ್ ತಂಡದವರು ಖರೀದಿಸಿದ್ದರು. ಧನಶ್ರೀ ವರ್ಮ ಕೂಡ ಹಲವಾರು ರಿಯಾಲಿಟಿ ಶೋಗಳಲ್ಲಿ ತಮ್ಮ ನೃತ್ಯ ಪ್ರಸ್ತುತ ಪಡಿಸುತ್ತಿದ್ದರು.

ಇತ್ತೀಚಿನ ಸುದ್ದಿಯ ಪ್ರಕಾರ, ಚಹಾಲ್ ಮತ್ತು ಧನಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಚಹಾಲ್ ತನ್ನ ಪ್ರೊಫೈಲ್‌ನಿಂದ ಧನಶ್ರೀ ಜೊತೆಗಿನ ಫೋಟೊಗಳನ್ನು ತೆಗೆದು ಹಾಕಿರುವುದು ಗಮನಿಸಬೇಕಾದ ಸಂಗತಿ. ಧನಶ್ರೀಯವರು ಚಹಾಲ್ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದರೂ ಚಹಾಲ್ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿರುವುದಿಲ್ಲ.

ಹಲವು ಮಾಧ್ಯಮಗಳು ಈ ದಂಪತಿಯು ವಿಚ್ಛೇದನದ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹತ್ತಿರದ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.
ವರುಷಗಳ ಹಿಂದೆ ಧನಶ್ರೀ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ‘ಚಹಾಲ್’ ಉಪನಾಮವನ್ನು ಕೈಬಿಟ್ಟಿದ್ದು ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದರೂ ನಂತರ ದಂಪತಿಗಳು ವದಂತಿಗೆ ಪೂರ್ಣ ವಿರಾಮವನ್ನ ಹಾಕಿದ್ದರು.

ಚಹಾಲ್ ದಂಪತಿಯ ಈ ಸುದ್ದಿಯು ಅಭಿಮಾನಿಗಳಲ್ಲಿ ಆಘಾತವನ್ನುಂಟುಮಾಡಿರುವಂತೂ ಸುಳ್ಳಲ್ಲಾ.

Prev Post

39ನೇ ರಾಜ್ಯ ಪತ್ರಕರ್ತರಸಮ್ಮೇಳನದಲ್ಲಿ ಛಾಯಾಚಿತ್ರ ಪ್ರದರ್ಶನ

Next Post

ಆದಿಯೋಗಿಯ ನೋಡುವ ಯೋಗ

post-bars

Leave a Comment

Related post