2025 ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟ ಬದಲಾಯಿಸುವ ರಾಶಿಚಕ್ರಗಳು ವಾರಭವಿಷ್ಯ ಏನು ಹೇಳುತ್ತವೆ ಗೊತ್ತಾ!
ಮೇಷರಾಶಿ
ಮೇಷ ರಾಶಿಯವರಿಗೆ ಈ ವರ್ಷ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಉತ್ತಮವಾಗಿದೆ. ಕೆಲಸವಿಲ್ಲದ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಂಭವ ಇದೆ. ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಉತ್ತಮ ದಿನಗಳು ಬರಲಿದೆ. ವೈವಾಹಿಕ ಸಂಬಂಧಗಳು ಸಾಕಾರಗೊಳ್ಳುವ ಸಂಭವ ಇದೆ. ಅಪರಿಚಿತರ ಸಲಹೆ ಮೇರೆಗೆ ನಿರ್ಧಾರ ಕೈಗೊಳ್ಳಬೇಡಿ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ.
ವೃಷಭರಾಶಿ
ವೃಷಭ ರಾಶಿಯವರಿಗೆ ವರ್ಷವಿಡೀ ಅತಿಯಾದ ಸಮಸ್ಯೆಗಳೇನು ಇರುವುದಿಲ್ಲ. ಸಾಧಾರಣ ಹಣಕಾಸು ಇರಲಿದೆ. ಯಾವುದೇ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು. ಹಣ ನಿಧಾನವಾಗಿ ಬಂದರೆ ಹೆಚ್ಚು ಬಾಳಿಕೆ ಮತ್ತು ನಂಪಾದನೆಗೆ ತಾಳ್ಮೆ ಮುಖ್ಯವಾಗಿದೆ. ಕಚೇರಿಯಲ್ಲಿ ಎಲ್ಲರೊಂದಿಗೂ ಸಮಾಧಾನದಿಂದಿರಿ. ಗಲಾಟೆಗಳಿಂದ ದೂರವಿರಿ. ಕೋಪ ನಿಯಂತ್ರಣದಲ್ಲಿದ್ದರೆ ಉತ್ತಮ.
ಮಿಥುನರಾಶಿ
ಈ ವರ್ಷ ನಿಮಗೆ ಅತ್ಯುತ್ತಮ ವರ್ಷ ವಿವಿಧ ಅವಕಾಶಗಳು ನಿಮ್ಮ ಮನೆ ಬಾಗಿಲನ್ನು ತಟ್ಟುತ್ತದೆ. ನೀವು ಸಿಗುವ ಅವಕಾಶ ಬಳಸಿಕೊಂಡರೆ ಖಂಡಿತ ವಿಜಯ ಸಾಧಿಸುತ್ತೀರಾ. ಕಠಿಣ ಪರಿಶ್ರಮವನ್ನು ಮಾತ್ರ ಹೂಡಿಕೆ ಮಾಡಿ. ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿ. ಹಣಕಾಸಿನ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸಬಹುದು. ಸಂಬಂಧಗಳಲ್ಲಿ ವಾದ-ವಿವಾದ ಸಂಭವವಿದೆ.
ಕರ್ಕರಾಶಿ
ಕರ್ಕ ರಾಶಿಯವರಿಗೆ ಹೊಸ ವರ್ಷವಾಗಲಿದೆ. ಎಲ್ಲಾ ಚಿಂತೆ ದೂರವಾಗಲಿದೆ. ಯಾಕೆಂದರೆ ಅಷ್ಟಮಾ ಶನಿಗಳು ಪೂಣಗೊಳ್ಳುವ ಕಾಲ. ನೀವು ಇಲ್ಲಿಯವರೆಗೂ ಅನುಭವಿಸುತ್ತಿರುವ ಎಲ್ಲಾ ಸಮಸ್ಯೆ ದೂರವಾಗಲಿದೆ, ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ಆರೋಗ್ಯ ಸಮಸ್ಯೆ ದೂರವಾಗಲಿದೆ. ಹಣಕಾಸಿನ ಪರಿಸ್ಥಿತಿಯು ಮೇಲುಗೈ ಸಾಧಿಸುತ್ತದೆ. ಆದಾಯ ಹೆಚ್ಚಲಿದೆ.
ಸಿಂಹರಾಶಿ
ಸಿಂಹ ರಾಶಿಯವರಿಗೆ ಈ ವರ್ಷ ಅನಿರೀಕ್ಷಿತ ಯಶಸ್ಸು. ಸಣ್ಣಪುಟ್ಟ ಸಮಸ್ಯೆಗಳು ಬಂದು ಹೋದರೂ ಅದನ್ನು ಎದುರಿಸಲು ದಾರಿ ಇದೆ. ಆತ್ಮವಿಶ್ವಾಸ ಕುಂದದಿರಲಿ. ಆರೋಗ್ಯ ಕಾಳಜಿ ಅಗತ್ಯ. ವ್ಯಾಪಾರದಲ್ಲಿ ಹೂಡಿಕೆ ಮಾಡುವಾಗ ಎಚ್ಚರ ಅಗತ್ಯ. ಸಾಲ ತೆಗೆದುಕೊಳ್ಳುವಾಗ ಎಚ್ಚರವಹಿಸಿ. ಸಂಬಂಧಗಳೊಂದಿಗೆ ಹೊಂದಾಣಿಕೆ ಅಗತ್ಯ.
ಕನ್ಯಾರಾಶಿ
ಕನ್ಯಾ ರಾಶಿ ಅದೃಷ್ಟ ತರುವ ವರ್ಷ. ನಿಮ್ಮ ಜೀವನದಲ್ಲಿ ಅದ್ಬುತವಾದ ಯಶಸ್ಸು ಇದೆ. ಕಾಯುವ ತಾಳ್ಮೆ ಮತ್ತು ಸರಿಯಾದ ಗುರಿ , ಪರಿಶ್ರಮ ಇದ್ದರೆ ಗೆಲುವು ಸುಲಭ. ನೀವು ತಲೆಬಾಗಿದ ಸ್ಥಳದಲ್ಲಿ ತಲೆ ಎತ್ತಿ ಮುನ್ನಡೆಯುವಿರಿ. ನಿಮ್ಮ ಗೌರವ, ಸ್ಥಾನಮಾನ ಹೆಚ್ಚಲಿದೆ, ದೂರದ ಪ್ರಯಾಣದಲ್ಲಿ ಎಚ್ಚರ ಅಗತ್ಯ. ವಾಹನ ಓಡಿಸುವಾಗ ಹುಷಾರಾಗಿರಿ.
ತುಲಾರಾಶಿ
ತುಲಾ ರಾಶಿಯವರಿಗೆ ಈ ವರ್ಷ ಸಂತೋಷದಿಂದ ಕೂಡಿರುತ್ತದೆ. ಜೀವನದಲ್ಲಿ ಸಮೃದ್ಧ ಬೆಳವಣಿಗೆ ಕಂಡುಬರುತ್ತದೆ. ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ನೀವು ಸಾಲದ ಹೊರೆಯಿಂದ ಹೊರ ಬರುತ್ತೀರಿ. ಆದಾಯಕ್ಕೆ ತೊಂದರೆ ಆಗುವುದಿಲ್ಲ. ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ.
ವೃಶ್ಚಿಕರಾಶಿ
ಈ ವರ್ಷ ವೃಶ್ಚಿಕ ರಾಶಿಯವರಿಗೆ ಎಲ್ಲಾ ಅನಗತ್ಯ ಉದ್ವಿಗ್ನತೆಗಳು ನಿವಾರಣೆಯಾಗುತ್ತದೆ, ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ನೀವು ಆಹ್ಲಾದಕರ ವಾತಾವರಣವನ್ನು ಆನಂದಿಸುವಿರಿ. ಧೀಘ ಕಾಲದ ಕಷ್ಟ ಪರಿಹಾರವಾಗಲಿದೆ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ̤ ಹೊಸ ಕಾರು ಖರೀದಿ, ಹೊಸ ನಿವೇಶನ ಖರೀದಿ ಯೋಗವಿದೆ. ಕಠಿಣ ಪರೀಕ್ಷೆ ನಂತರ ಯಶಸ್ಸು ಖಂಡಿತಾ.
ಧನುರಾಶಿ
ಧನು ರಾಶಿಯವರಿಗೆ ತಾಳ್ಮೆ ಮತ್ತು ಶಾಂತತೆಯ ಅಗತ್ಯವಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಆದಾಯ ಹೆಚ್ಚಲಿದೆ. ಹೊಸ ಆಸ್ತಿಯನ್ನು ಖರೀದಿಸುವಿರಿ. ಆದರೆ ಎಲ್ಲಾ ವಿಷಯಗಳು ತೊಂದರೆಯಲ್ಲಿ ಕೊನೆಗೊಳ್ಳುತ್ತದೆ. ಪೂವಗ್ರಹಗಳನ್ನು ಕಡಿಮೆ ಮಾಡಬೇಕು. ಮೇಲಾಧಿಕಾರಿಗಳಿಗೆ ಗೌರವ ನೀಡಬೇಕು. ಮತ್ತು ಹಿರಿಯರ ಸಲಹೆಗೆ ಗೌರವ ನೀಡಿ. ವ್ಯಾಪಾರ ಮತ್ತು ವೃತ್ತಿಯಲ್ಲಿ ಅತಿಯಾದ ನಿರೀಕ್ಷೆ ಬೇಡ.
ಮಕರರಾಶಿ
ಮಕರ ರಾಶಿಯವರಿಗೆ ಉತ್ತಮ ವರ್ಷ ಕಾಲ ಕಳೆದಂತೆ ಕೆಲವು ಸಮಸ್ಯೆ ಮತ್ತು ನಿರಾಸೆ ತಲೆದೋರಬಹುದು, ಒಳ್ಳೆಯ ಕೆಲಸ ಸಿಕ್ಕರೆ ಕಠಿಣ ಪರಿಶ್ರಮದಿಂದ ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ಕಲಿಕೆಯಲ್ಲಿ ಸೋಮಾರಿತನ ಸಲ್ಲದು. ಹೂಡಿಕೆಯಲ್ಲಿ ಜಾಗರೂಕರಾಗಿರಿ. ಮೂರನೇ ವ್ಯಕಿಯೊಡನೆ ವ್ಯವಹಾರದಲ್ಲಿ ಜಾಗರೂಕರಾಗಿರಿ, ಸಣ್ಣ ಅಸಡ್ಡೆಗಳು ನಿಮ್ಮ ಸಂತೋಷವನ್ನು ಹಾಳುಮಾಡಬಹುದು.
ಕುಂಭರಾಶಿ
ಕುಂಭ ರಾಶಿಯವರಿಗೆ ಇದು ಏರಿಳಿತ ವರ್ಷ. ತಲೆದೋರಿದ ನಾನಾ ಕಷ್ಟಗಳು ಕ್ರ ಮೇಣ ಕಡಿಮೆಯಾಗುತ್ತದೆ, ಕೆಲಸ ಮಾಡುವ ಸ್ಥಳದಲ್ಲಿ ಸಮಸ್ಯೆಗಳು ತಲೆದೋರುತ್ತದೆ. ಎದೆಗುಂದದೆ ಸಾದ್ಯವಾದಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿ̧ಸಿ ವೇಗಕ್ಕಿಂತ ವಿವೇಚನೆಯಿಂದ ವರ್ತಿಸಿ ಆರೋಗ್ಯದ ಕಡೆ ಗಮನ ನೀಡಿ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿವಹಿಸಿ.
ಮೀನಾರಾಶಿ
ಈ ರಾಶಿಯವರು ಬಹಳಷ್ಟು ಹೊಸ ಅನುಭವ ಪಡೆಯುತ್ತಾರೆ. ನೀವು ಕೆಲವೊಂದು ಸಮಸ್ಯೆ ಎದುರಿಸಲೇ ಬೇಕಾದ ಸಂದರ್ಭ ಬರಬಹುದು. ಜೀವನ ಏನೆಂಬುದು ಅನುಭದಿಂದ ಕಲಿಯುವಿರಿ. ಸಮಯ ಬಂದಾಗ ದೇವರು ನಿಮ್ಮ ಕೆಲಸಕ್ಕೆ ಪ್ರತಿಫಲ ನೀಡುತ್ತಾನೆ, ವಿದೇಶಿ ಪ್ರವಾಸ ಸಂಭವ ಇರುತ್ತದೆ, ಮನಸ್ಸು ದಾರಿ ತಪ್ಪಲು ಬಿಡಬೇಡಿ, ಕೆಟ್ಟ ಅಭ್ಯಾಸಗಳಿಂದ ದೂರವಿರಿ.