ಮಂಗಳೂರು: ಮಂಗಳೂರಿನ ಹೃದಯ ಭಾಗದಲ್ಲಿರುವ ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆಯಿಂದ ಸಾವಿರಾರು ವಲಸೆ ಕಾರ್ಮಿಕರು ಜಮಾಯಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಮಂಗಳೂರಿನಿಂದ ವಿಶೇಷ ರೈಲುಗಳಿವೆ ಎಂದು ನಂಬಿ ಬಂದ ಹಲವಾರು ಕಾರ್ಮಿಕರು. ಮೂಲತಃ ಉತ್ತರ ಪ್ರದೇಶ , ಮಧ್ಯಪ್ರದೇಶ ಹಾಗು ಇನ್ನಿತರೆ ರಾಜ್ಯಗಳಿಂದ ಬಂದ ಜನರು ಈ ತಪ್ಪು ಸಂದೇಶವನ್ನು ನಂಬಿ ಜಿಲ್ಲೆಯ ಮೂಲೆ ಮೂಲೆಗಳಿಂದ ಜನರು ಬಂದು ಜಮಾವಣೆಗೊಂಡಿದ್ದರು.

ಪುತ್ತೂರು ,ಸುಳ್ಯ ಹಾಗು ಇನ್ನಿತರೆ ತಾಲೂಕಿನಿಂದ ನಡೆದುಕೊಂಡೇ ಬಂದು ಮಂಗಳೂರಿಗೆ ತಲುಪಿದ ಜನರಿಗೆ ರೈಲ್ವೆ ಅಧಿಕಾರಿಗಳು ತಿಳಿ ಹೇಳಿದ್ದಾರೆ. ಇನ್ನೂ ಹಲವಾರು ಜನರು ಬಂದು ಸೇರಬಹುದು ಎನ್ನುವ ನಿರೀಕ್ಷೆ ಇದ್ದು. ಸಾವಿರಾರು ಜನರು ಜಮಾಯಿಸಿದ್ದಾರೆ.

ಒಟ್ಟಿನಲ್ಲಿ ತಪ್ಪು ಸಂದೇಶಗಳು ತಂದ ಆಪತ್ತು ಅಷ್ಟಿಷ್ಟಲ್ಲ.

Leave a Reply

Your email address will not be published.