– ಮನೀಷಾ ಮದುವೆಗದ್ದೆ

ಯಥೇಚ್ಛವಾಗಿ ಕೊರೋನ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಕೇಂದ್ರ ಸರಕಾರ ಹಾಗೂ ಆರೋಗ್ಯ ಕಲ್ಯಾಣ ಇಲಾಖೆಯವರು ಮಾಸ್ಕ್ ಧರಿಸುವ ಆದೇಶ ಹೊರಡಿಸಿದ್ದು, ಜನಸಾಮಾನ್ಯರು ಈ ಕುರಿತು ವಿಶೇಷವಾಗಿ ಗಮನ ಕೊಟ್ಟು ಆದೇಶವನ್ನು ಪಾಲಿಸುತ್ತಿರುವರು.

ಮಾಸ್ಕ್ ನ ಉಪಯೋಗ ನಮಗೆ ತಿಳಿದಂತೆ ಸೋಂಕು ಹರಡುವಿಕೆಯನ್ನು ಬಾಯಿ ಹಾಗೂ ಮೂಗಿನ ರಂಧ್ರಗಳಿಂದ ತಡೆಗಟ್ಟುವುದು ಹಾಗೆಯೇ ಸೋಂಕಿತರಿಂದ ನಮ್ಮನ್ನು ಕಾಪಾಡಿಕೊಂಡು ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳುವುದು.

ಆದರೆ, ಆರೋಗ್ಯ ಸೇವಾ ವಿಭಾಗದ ಮುಖ್ಯ ನಿರ್ದೇಶಕ ಡಾ.ರಾಜೀವ್ ಗರ್ಗ್ ಅವರ ಮಾಹಿತಿಯ ಪ್ರಕಾರ N-95 ಮಾಸ್ಕ್ ಗಳು ಕೊರೋನ ಸೋಂಕು ತಡೆಗಟ್ಟುವಿಕೆಗೆ ಸೂಕ್ತವಲ್ಲ. ಕಾರಣ, N-95 ಮಾಸ್ಕ್ ನಲ್ಲಿ ಹೊಂದಿದ ಗಾಳಿ ಕವಾಟು, ನಮ್ಮ ಉಚ್ಷ್ವಾಸವನ್ನು (ಒಳ ತೆಗೆದುಕೊಳ್ಳುವ ಉಸಿರು) ಶುದ್ಧಗೊಳಿಸುತ್ತದೆ. ಆದರೆ ನಿಶ್ವಾಸವನ್ನು( ಹೊರ ಬಿಡುವ ಉಸಿರು) ಶುದ್ಧಗೊಳಿಸಲಾರದು. ಹಾಗಾಗಿ N-95 ಮಾಸ್ಕ್ ಸೋಂಕಿತ ವ್ಯಕ್ತಿ ಧರಿಸಿದರೆ ಅವರಿಂದ ಸುತ್ತ ಮುತ್ತಲಿನ ಜನಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಅಧಿಕ. ಮಾತ್ರವಲ್ಲದೆ, ಫೈಬರ್ ಕವಾಟು ಹೊಂದಿದ ಈ ಮಾಸ್ಕ್ ಉಸಿರಿನ ಉಷ್ಣತೆ ಹೆಚ್ಚಿಸಿ ತಲೆನೋವು, ತಲೆಚಕ್ರದಂತಹ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.

ನಮ್ಮಲ್ಲಿ ಹಲವು ಜನರು N-95 ಮಾಸ್ಕ್ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಭಾವಿಸಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆಯೆ ನಮ್ಮ ಆನ್ ಲೈನ್ ಶಾಪಿಂಗ್ ಗಳಾದ amazon, flipkart ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಾದ ಮಾಸ್ಕ್ N-95 ಮಾಸ್ಕ್. ಆದರೆ ಇದು ಉಪಯೋಗಿಸಲು ಸೂಕ್ತವಲ್ಲ.

ಇದರ ಕುರಿತಾಗಿ ಡಾ.ಗಿರಿಧರ ಕಜೆಯವರ ಹೇಳಿಕೆ, N-95 ಮಾಸ್ಕ್ ನ ಬದಲಾಗಿ ಹತ್ತಿಯ ಮಾಸ್ಕ್ ಬಳಸುವುದು ಅಥವಾ ತಮ್ಮ ಕರವಸ್ತ್ರವನ್ನು ಉಪಯೋಗಿಸುವುದು. ಒಂದು ಬಾರಿ ಬಳಸಿದ ಮಾಸ್ಕ್ ಅನ್ನು ಬಿಸಿನೀರಿಗೆ ಸ್ವಲ್ಪ ಉಪ್ಪು ಸೇರಿಸಿ ತೊಳೆದು ಶುಚಿಗೊಳಿಸುವುದು. ಹಾಗೆಯ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಪ್ರತ್ಯೇಕ ಮಾಸ್ಕ್ ಇಟ್ಟುಕೊಳ್ಳುವುದು. ಹಾಗೆಯೆ ಮೂಗು ಬಾಯಿಯ ರಂಧ್ರಗಳನ್ನು ಮುಚ್ಚುವಂತೆ ಬಳಸುವುದು.

N-95 ಮಾಸ್ಕ್ ಧರಿಸಿದ ಯಾರಾದರೂ ವ್ಯಕ್ತಿಗಳು ನಿಮ್ಮಲ್ಲಿದ್ದರೆ ಅಥವಾ ಈ ಮಾಸ್ಕ್ ಧರಿಸಿದವರು ನಿಮಗೆ ಕಂಡುಬಂದಲ್ಲಿ ದಯವಿಟ್ಟು ಈ ಮಾಹಿತಿ ತಿಳಿಸಿಕೊಡಿ.

“ನಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ”

Leave a Reply

Your email address will not be published.