ರಚನೆ
ರಿತೇಶ್ ನೂಜಿಬೈಲು

ಬದಲಾಗುತ್ತಾ ಭಾರತದ ಭವಿಷ್ಯ? ಹಲವು ಬಾರಿ ನಾನಾ ನ್ಯೂಸ್ ಚಾನೆಲ್ ಗಳಲ್ಲಿ ಈ ಹೇಳಿಕೆಗಳನ್ನ ಕೇಳಿದ್ದರೂ ನಾವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇತ್ತೀಚೆಗಿನ ಜಿಯೋದ ಬೆಳವಣಿಗೆ ಹಾಗೂ ಅದರಲ್ಲಿ ವಿದೇಶಿ ಕಂಪನಿಗಳು ಹೂಡುತ್ತಿರುವ ದೊಡ್ಡ ಮೊತ್ತಗಳು ಈ ಮಾತನ್ನ ಪುಷ್ಟೀಕರಿಸಿದೆ.

RELIANCE JIO ಸ್ಥಾಪನೆ

ಅಂದು 15 ಫೆಬ್ರವರಿ 2007, ರಿಲಯನ್ಸ್ ಜಿಯೋ ಇನ್ಫೋಕೋಮ್ ಲಿಮಿಟೆಡ್ ಎಂಬ ಕಂಪನಿ ಸ್ಥಾಪನೆಯ ರೆಜಿಸ್ಟ್ರೇಶನ್ ಗುಜರಾತ್ ನಲ್ಲಿ ನಡೆದಿತ್ತು. ಮುಂದೆ ಜೂನ್ 2010 ರಂದು ಇನ್ಫೋಟೆಲ್ ಬ್ರಾಡ್ ಬಾಂಡ್ ಸರ್ವೀಸಸ್ ಕಂಪನಿಯ 95% ಶೇರುಗಳನ್ನ ₹4,800 ಕೋಟಿಗಳನ್ನ ಕೊಟ್ಟು ಪಡೆದುಕೊಂಡು ಹದ್ದಿನ ಕಣ್ಣನ್ನ ಇಟ್ಟು ಭಾರತೀಯ ಟೆಲಿಕಾಂ ಉದ್ಯಮವನ್ನ ಅತ್ಯಂತ ಸಮೀಪದಿಂದ ನೋಡಿತು.ನಿಮಗೆ ಈ ವಿಷಯ ಗೊತ್ತಿರಲಿ, 2010ರಲ್ಲಿ ನಡೆದ 4ಜಿ ತರಂಗಗಳ ಹರಾಜು ಪ್ರಕ್ರಿಯೆಯಲ್ಲಿ ಇದೇ ಇನ್ಫೋಟೆಲ್ ಕಂಪನಿ ಭಾಗವಹಿಸಿ ಭಾರತದ 22 ಕಡೆಗಳ ತರಂಗಗಳನ್ನ ಪಡೆದುಕೊಂಡಿತ್ತು.

ಮುಕೇಶ್ ಅಂಬಾನಿ ಒಡೆತನದ ಈ ಕಂಪನಿ ತನ್ನ ಸಹೋದರ ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಶನ್ ನ ಅವನತಿಯನ್ನ ಅತ್ಯಂತ ಸಮೀಪದಿಂದ ನೋಡಿಕೊಂಡು ಮುಂದೆ ತಾನು ಹೋಗೋ ಹಾದಿ ಹೇಗಿರಬೇಕೆಂದು ಯೋಚಸಿ ಅದಕ್ಕೆ ತಕ್ಕಂತೆ ಸ್ಕೆಚ್ಚುಗಳನ್ನ ಹಾಕತೊಡಗಿತು. ಅಂತೆಯೇ ಭಾರಿ ಸದ್ದು ಮಾಡಿಕೊಂಡು ಸೆಪ್ಟೆಂಬರ್ 2016ರಲ್ಲಿ ತನ್ನ 4ಜಿ ಬ್ರಾಡ್ಬ್ಯಾಂಡ್ ಸೇವೆಯನ್ನ ದೇಶಕ್ಕೆ ಪರಿಚಯಿಸಿದ ನಂತರ ನಡೆದದ್ದೆಲ್ಲಾ ಇತಿಹಾಸ.
ಫ್ರೀ ಆಗಿ ಸಿಮ್ ಕೊಟ್ಟು ದಿನಕ್ಕೆ 1ಜಿಬಿ ಡಾಟಾ ಕೊಟ್ಟ ಜಿಯೋ ನ ಮುಂದೆ ದೈತ್ಯ ಕಂಪನಿಗಳು ಮಕಾಡೆ ಮಲಗಿದವು. 2017ರಲ್ಲಿ ಸಾಮ್ ಸಂಗ್ ಜೊತೆಗೂಡಿ 4ಜಿ ಯ ಮುಂದಿನ ಭಾಗವಾಗಿ 5ಜಿ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದವು. ಅವರ ಲೈಫ್ ಮೊಬೈಲ್ ಗಳು ಲೈಫ್ ಇಲ್ಲದೆ ಮಕಾಡೆ ಮಲಗಿದರೂ ಜಿಯೋ ಮಾತ್ರ ಭರ್ಜರಿ ಬೇಟೆ ಮಾಡತೊಡಗಿತು.
ಈಗ ಇವರು ಡಿಜಿಟಲ್ಗೆ ಸಂಬಂಧಿಸಿದ ಜಿಯೋ ಫೈಬರ್, ಜಿಯೋ tv ಹಾಗೂ ವೈಫೈ ಹೀಗೆ ಹಲವಾರುಗಳನ್ನ ಬಿಡುಗಡೆಗೊಳಿಸಿತು. ಕೇವಲ 4ಜಿ ಸಿಮ್ ಗಳನ್ನ ಬಿಟ್ಟ ಕಾರಣ ನಮ್ಮಲ್ಲಿ ಹಲವರು 4ಜಿ ಮೊಬೈಲ್ ಗಳನ್ನ ಖರೀದಿಸಿದರು ಎಂದರೆ ನಂಬಲೇಬೇಕು.

ಇದೆಲ್ಲದರ ಹೊರತು ಈ ಲಕ್ಡೌನ್ ಸಮಯದಲ್ಲಿ ಹಲವಾರು ಕಂಪೆನಿಗಳು ಸಾಲದ ಸುಳಿಗೆ ಸಿಲುಕಿದರೂ ಜಿಯೋ ಮಾತ್ರ ವಿದೇಶಿ ಶೇರುಗಳನ್ನ ಆಕರ್ಷಿಸಿ ತನ್ನ ಬ್ರಾಂಡ್ ಗೆ ಇನ್ನಿಲ್ಲದ ಬಂಡವಾಳಗಳನ್ನ ಬರಮಾಡಿಕೊಂಡಿತು.

Facebook ಬಂಡವಾಳ

ಸುಮಾರು ₹43,000 ಕೋಟಿ ರೂಪಾಯಿಯ ಆಸುಪಾಸು Facebook ಬಂಡವಾಳ ಹೂಡಿ ಜಿಯೋ ನ 9.99% ಷೇರುಗಳನ್ನ ಖರೀದಿಸಿತು. ಇದರ ಹಿಂದೆ ಮುಕೇಶ್ ಅಂಬಾನಿಯ ಮಹಾತ್ವಾಕಾಂಕ್ಷಿ ಜಿಯೋ ಮಾರ್ಟ್ ಅನ್ನ ವಾಟ್ಸಪ್ಪ್ ಮೂಲಕ ಪರಿಚಯಿಸುವ ಯೋಜನೆಯ ಹಿಂದೆ ಮಾರ್ಕ್ ಝುಕರ್ ಬರ್ಗ್ ಹಾಗೂ ಸಂಗಡಿಗರ ಪ್ರಯತ್ನವಿದೆ ಅನ್ನೋದನ್ನ ಹಲವಾರು ಬಲವಾಗಿ ನಂಬುತ್ತಾರೆ.

ಹಲವಾರು ಕಂಪನಿಗಳ ಜೊತೆಜೊತೆಗೆ #intel ಇಂಟೆಲ್ ಕ್ಯಾಪಿಟಲ್ ₹1,894.50 ಕೋಟಿ, ₹730 ಕೋಟಿಯನ್ನ ಕ್ವಾಲ್ಕಮ್ ನಂತ ದೈತ್ಯ ಕಂಪನಿಗಳು ಕೊಟ್ಟು ಷೇರುಗಳನ್ನ ಖರೀದಿಸಿದರು.

ಗೂಗಲ್ ಖರೀದಿ

ಇತ್ತೀಚೆಗೆ ಜಿಯೋ ಕಂಪೆನಿಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಕೂಡ ₹33,737 ಸಾವಿರ ಕೋಟಿಯನ್ನ ಹೂಡಿಕೆ ಮಾಡಿ 7.73% ಶೇರುಗಳನ್ನ ಖರೀದಿಸಿದೆ. ಇದೆಲ್ಲದರ ನಡುವೆ ಭಾರತದಲ್ಲಿ ಯಾರದೇ ಸಹಾಯವಿಲ್ಲದೇ ತಳಮಟ್ಟದಿಂದ #5ಜಿ ಯನ್ನ ಅಭಿವೃದ್ಧಿಪಡಿಸಿದೆ ಎಂದು ಸ್ವತಃ ಜಿಯೋ ಹೇಳಿದೆ. 5ಜಿ ಅಭಿವೃದ್ಧಿ ಪಡಿಸುವುದು , ಅದೂ ಭಾರತದಲ್ಲಿ ಎಂದರೆ ನಿಜಕ್ಕೂ ಹೆಮ್ಮೆ ಪಡುವಂತದ್ದು.

ಫ್ಯೂಚರ್ ಭಾರತ

ಇದೆಲ್ಲಾ ನೋಡಿದರೆ ಖಂಡಿತ ಮುಂದಿನ ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಜಾಸ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರಿಂದ ಹಲವಾರು ಉದ್ಯೋಗ ಸೃಷ್ಟಿಯಾಗಿ ಬಹುತೇಕರಿಗೆ ವರವಾಗಬಹುದು. ಇದು ವಿದೇಶಿ ಕಂಪನಿಯ ಚೀನಾ ವ್ಯಾಮೋಹವು ಕಡಿಮೆಯಾಗಿ ಭಾರತದ ಕಡೆಗೆ ವಾಲುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಮುಂದಿನ ದಿನಗಳಲ್ಲಿ ಜಿಯೋ ಹೆಸರಿನಲ್ಲಿ ಸೂಪರ್ ಮಾರ್ಕೆಟ್ಗಳು, ಗೂಗಲ್ ಜೊತೆಗೂಡಿ ಆಂಡ್ರಾಯ್ಡ್ ಫೋನೆಗಳು ಖಂಡಿತಾ ಬರುವುದಿದೆ. ಇದು ಜಿಯೋ ಹಾಗೂ ಭಾರತಕ್ಕೆ ಅದರಲ್ಲೂ ಆತ್ಮ ನಿರ್ಭರ ಭಾರತಕ್ಕೆ ಸಹಕಾರಿಯಾಗುವುದಲ್ಲಿ ಯಾವುದೇ ಸಂಶಯವಿಲ್ಲ.

Leave a Reply

Your email address will not be published.