ಹೈಲೈಟ್ಸ್‌:

  • ರಿಷಭ್‌ ಪಂತ್‌ ಭಾರತೀಯ ಕ್ರಿಕೆಟ್‌ ಭವಿಷ್ಯ ಎಂದ ಮಾಜಿ ಆಟಗಾರ ಪಾರ್ಥಿವ್‌ ಪಟೇಲ್‌.
  • ಕೌಂಟಿ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಆಡುತ್ತಿರುವ ಭಾರತ.
  • ಕೋವಿಡ್‌-19 ನಿಂದ ಚೇತರಿಸಿಕೊಂಡ ರಿಷಭ್‌ ಪಂತ್‌ ಟೀಮ್‌ ಇಂಡಿಯಾಗೆ ಸೇರ್ಪಡೆ.

ಹೊಸದಿಲ್ಲಿ: ತಮ್ಮ ವೃತ್ತಿ ಜೀವನದ ಅತ್ಯಲ್ಪ ಅವಧಿಯಲ್ಲಿಯೇ ಸಾಧನೆ ಮಾಡಿರುವ ಯುವ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಂದು ಟೀಮ್‌ ಇಂಡಿಯಾ ಮಾಜಿ ಆಟಗಾರ ಪಾರ್ಥಿವ್‌ ಪಟೇಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2018ರಲ್ಲಿ ಭಾರತ ತಂಡದೊಂದಿಗೆ ಪಾರ್ಥಿವ್‌ ಪಟೇಲ್‌ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ವೇಳೆ ರಿಷಭ್‌ ಪಂತ್‌ ಅವರನ್ನು ಬಹಳಾ ಹತ್ತಿರದಿಂದ ಗಮನಿಸಿದ್ದಾರೆ. ವಿಕೆಟ್‌ ಕೀಪಿಂಗ್‌ ಕೌಶಲದಲ್ಲಿ ಗಮನಾರ್ಹ ಸುಧಾರಣೆ ಕಂಡಿರುವುದು ಯುವ ಆಟಗಾರನಲ್ಲಿ ಎದ್ದು ಕಾಣುವ ಪ್ರಮುಖ ಸಂಗತಿಯಾಗಿದೆ. ಅಂದಹಾಗೆ ರಿಷಭ್‌ ಪಂತ್‌ ಭಾರತ ತಂಡಕ್ಕೆ ಮೂರೂ ಸ್ವರೂಪದಲ್ಲಿ ಅತ್ಯಂತ ಪ್ರಮುಖ ಆಟಗಾರ ಎಂದಿದ್ದಾರೆ.

‘ದಿ ಕರ್ಟ್ಲಿ ಅಂಡ್‌ ಕರಿಷ್ಮಾ ಶೋ’ನಲ್ಲಿ ಮಾತನಾಡಿದ ಪಾರ್ಥಿವ್‌ ಪಟೇಲ್‌, ವಿಕೆಟ್‌ ಕೀಪಿಂಗ್‌ನಲ್ಲಿ ರಿಷಭ್‌ ಪಂತ್‌ ಸುಧಾರಣೆಯಾಗಿರುವ ಬಗ್ಗೆ ಚರ್ಚೆ ನಡೆಸಿದರು. ವೃದ್ದಿಮಾನ್‌ ಸಹಾ ಅವರನ್ನು ತವರು ಟೆಸ್ಟ್‌ ಸರಣಿಗಳಿಗೆ ತಯಾರು ಮಾಡಲಾಗಿತ್ತು. ಆದರೆ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಪಂತ್‌ ವಿಕೆಟ್‌ ಕೀಪಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು ಎಂದರು.

‘ನನ್ನ ಕ್ರಿಕೆಟ್‌ ವೃತ್ತಿ ಜೀವನ ಹಾಳು ಮಾಡಿದ್ದೇ ಡಿವಿಲಿಯರ್ಸ್!’ : ಥಮಿ ತ್ಸೊಲೆಕಿಲೆ ಗಂಭೀರ ಆರೋಪ!

“ರಿಷಭ್‌ ಪಂತ್‌ ಭಾರತೀಯ ಕ್ರಿಕೆಟ್‌ನ ಭವಿಷ್ಯ. ಈತನಿಗೆ ಭಯವೇ ಇಲ್ಲ. ಈ ಅಂಶದಿಂದ ಈತ ನನಗೆ ತುಂಬಾ ಇಷ್ಟ. ನಾನು 2018ರ ಪ್ರವಾಸದಲ್ಲಿ ಸ್ಟ್ಯಾಂಡ್‌ ಬೈ ವಿಕೆಟ್‌ ಕೀಪರ್‌ ಆಗಿದ್ದ ವೇಳೆ, ರಿಷಭ್‌ ಪಂತ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿದ್ದರು. ಈ ವೇಳೆ ಅವರಲ್ಲಿ ಸಾರ್ವಕಾಲಿಕ ಅತ್ಯುತ್ತಮ ವಿಕೆಟ್‌ ಕೀಪರ್‌ ಆಗುವ ಲಕ್ಷಣಗಳು ಎದ್ದು ಕಾಣುತ್ತಿದ್ದವು. ವಿಕೆಟ್‌ ಕೀಪಿಂಗ್‌ನಲ್ಲಿ ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ತವರು ಪರಿಸ್ಥಿತಿಗಳಲ್ಲಿ ಅವರು ಅತ್ಯುತ್ತಮವಾಗಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನಿರ್ವಹಿಸಿದ್ದರು,” ಎಂದು ಪಟೇಲ್‌ ಗುಣಗಾಣ ಮಾಡಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿಯೂ ರಿಷಭ್‌ ಪಂತ್‌ ತಂಡದಲ್ಲಿ ಉತ್ತಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕಳೆದ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಸಿಡ್ನಿ ಹಾಗೂ ಬ್ರಿಸ್ಬೇನ್‌ ಪಂದ್ಯಗಳಲ್ಲಿ ಅವರು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದರು. ಅಲ್ಲದೆ, ಇಂಗ್ಲೆಂಡ್‌ ವಿರುದ್ಧ ತವರು ಟೆಸ್ಟ್‌ ಸರಣಿ ಕೂಡ ಪಂತ್‌ ಪಾಲಿಗೆ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್‌ ತಂಡದಲ್ಲಿ ಅಸಾಧಾರಣ ಸಂಯೋಜನೆಯನ್ನು ತಂದಿದೆ.

ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಯಶಸ್ವಿಯಾಗಲು ಪ್ರಮುಖ ಕಾರಣ ತಿಳಿಸಿದ ರಾಜಾ!

ಹಲವು ಬಾರಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರುವ ಮೂಲಕ ರಿಷಭ್‌ ಪಂತ್‌ ತಮ್ಮ ಸಾಮರ್ಥ್ಯ ಏನೆಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ ಎಂದು ಇದೇ ವೇಳೆ ಪಾರ್ಥಿವ್‌ ಪಟೇಲ್‌ ತಿಳಿಸಿದರು.

“ಅವರು ಬ್ಯಾಟಿಂಗ್‌ ವೇಳೆ ಇನ್ನಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಈ ಅಂಶದಿಂದಾಗಿ ಅವರನ್ನು ಒಬ್ಬ ಅತ್ಯುತ್ತಮ ಕ್ರಿಕೆಟಿಗ ಎಂದು ನಾವು ಹೇಳಬಹುದಾಗಿದೆ,” ಎಂದು ಪಾರ್ಥಿವ್‌ ಪಟೇಲ್‌ ಸೈನ್‌ ಔಟ್‌ ಆದರು.

ದ್ವಿತೀಯ ಒಡಿಐ ಸೋಲಿನ ಬೆನ್ನಲ್ಲೇ ಶ್ರೀಲಂಕಾ ಕೋಚ್‌-ಕ್ಯಾಪ್ಟನ್‌ ಕಿತ್ತಾಟ!

ಟೀಮ್‌ ಇಂಡಿಯಾ ಸೇರ್ಪಡೆಯಾದ ಪಂತ್‌: ರಜೆ ಅವಧಿಯಲ್ಲಿ ಕೋವಿಡ್‌-19 ಸೋಂಕು ತಗುಲಿಸಿಕೊಂಡಿದ್ದ ರಿಷಭ್‌ ಪಂತ್‌ ತಮ್ಮ ಸ್ನೇಹಿತರ ಮನೆಯಲ್ಲಿ ಇಷ್ಟು ದಿನಗಳ ಕಾಲ ಐಸೋಲೇಷನ್‌ಗೆ ಒಳಗಾಗಿದ್ದರು. ಕಳೆದ ಸೋಮವಾರ ಅವರ ಕೊರೊನಾ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು(ಜುಲೈ 22) ಬರ್ಹ್ಯಾಮ್‌ನಲ್ಲಿ ಟೀಮ್‌ ಇಂಡಿಯಾಗೆ ಸೇರ್ಪಡೆಯಾಗಿದ್ದಾರೆಂದು ಬಿಸಿಸಿಐ ಟ್ವೀಟ್‌ ಮಾಡಿದೆ.

ಸದ್ಯ ಭಾರತ ತಂಡ, ಕೌಂಟಿ ಚಾಂಪಿಯನ್‌ಷಿಪ್‌ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಕಾದಾಟ ನಡೆಸುತ್ತಿದೆ. ಇದಾದ ಬಳಿಕ ಟೀಮ್‌ ಇಂಡಿಯಾ ಕೆಲ ಇಂಟರ್‌ ಸ್ಕ್ವಾಡ್‌ ಪಂದ್ಯಗಳನ್ನು ಆಡಲಿದ್ದು, ಆಗಸ್ಟ್‌ 4 ರಿಂದ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿದೆ.

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ, ಆರ್ಚರ್‌ಗೆ ಇಲ್ಲ ಸ್ಥಾನ!Source link

Leave a Reply

Your email address will not be published.