ಹೈಲೈಟ್ಸ್‌:

  • ಪೈಲಟ್ ಬೆಂಬಲಿಗರ ಬೇಡಿಕೆಗೆ ಕ್ಯಾರೇ ಎನ್ನದ ಹೈಕಮಾಂಡ್
  • ಮತ್ತೆ ಬಂಡಾಯದ ಬಾವುಟ ಹಾರಿಸಿದ ಸಚಿನ್ ಪೈಲಟ್ ಬೆಂಬಲಿಗರು
  • ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಗೆಹ್ಲೋಟ್‌ ತಂತ್ರ

ಜೈಪುರ (ರಾಜಸ್ಥಾನ): ಉತ್ತರ ಪ್ರದೇಶದಲ್ಲಿ ಯುವ ಮುಖಂಡ ಜಿತಿನ್‌ ಪ್ರಸಾದ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲಿಯೇ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟಿಸಿದೆ. ತಮ್ಮ ಬೇಡಿಕೆಗಳ ಕುರಿತು ಹೈಕಮಾಂಡ್‌ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಬೆಂಬಲಿಗ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

ಸಚಿನ್‌ ಪೈಲಟ್‌ ನಾಯಕತ್ವದಲ್ಲಿ ಅವರ ಬೆಂಬಲಿಗ ಶಾಸಕರು ಕಳೆದ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಆಡಳಿತದ ವಿರುದ್ಧ ಬಹಿರಂಗ ಸಮರ ಸಾರಿದ್ದರು. ಬರೋಬ್ಬರಿ ಒಂದು ತಿಂಗಳ ಕಾಲ ನಡೆದ ರಾಜಕೀಯ ನಾಟಕದ ಬಳಿಕ ಪೈಲಟ್‌ ಮನವೊಲಿಸುವಲ್ಲಿ ಯಶಸ್ವಿಯಾದ ಗಾಂಧಿ ಕುಟುಂಬವು, ಅತೃಪ್ತರ ಸಮಸ್ಯೆಗಳನ್ನು ಬಗೆಹರಿಸಲು ಮೂವರು ಸದಸ್ಯರ ಸಮಿತಿ ರಚಿಸುವ ಭರವಸೆ ನೀಡಿತ್ತು.

‘ಸಮಿತಿ ರಚಿಸಿ ವರ್ಷವೇನೋ ಕಳೆದಿದೆ. ಆದರೆ ಯಾವ ಸಮಸ್ಯೆಯೂ ಇತ್ಯರ್ಥವಾಗಿಲ್ಲ’ ಎಂದು ಪೈಲಟ್‌ ಬೆಂಬಲಿಗ ಶಾಸಕರು ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಪೈಲಟ್‌ರನ್ನು ಏಕಾಂಗಿಯಾಗಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಪೈಲಟ್‌ ಬೆಂಬಲಿಗ ಶಾಸಕರನ್ನು ಮಾತನಾಡಿಸುತ್ತಿರುವ ಅವರು, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರ ಆಯ್ಕೆ ಮಾಡಿ, ಸಚಿನ್ ಪೈಲಟ್‌ರನ್ನು‌ ರಾಜಸ್ಥಾನ ಸಿಎಂ ಮಾಡಿ: ರಾಹುಲ್‌ಗೆ ಬಿಜೆಪಿ ತಿರುಗೇಟು
ಬಿಜೆಪಿ ಸೇರಲ್ಲ: ಉತ್ತರ ಪ್ರದೇಶ ಬಿಜೆಪಿ ಹಿರಿಯ ನಾಯಕಿ ರೀಟಾ ಬಹುಗುಣ ಜೋಶಿ ಅವರು, ‘ನಾನು ಸಚಿನ್‌ ಜತೆ ಮಾತನಾಡಿರುವೆ. ಅವರು ಶೀಘ್ರವೇ ಬಿಜೆಪಿ ಸೇರಲಿದ್ದಾರೆ’ ಎಂದಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪೈಲಟ್‌, ‘ಬಹುಶಃ ಅವರು ಸಚಿನ್‌ ತೆಂಡುಲ್ಕರ್‌ ಜತೆ ಮಾತನಾಡಿರಬಹುದು. ನನ್ನೊಂದಿಗೆ ಮಾತನಾಡುವ ಧೈರ್ಯ ಅವರಿಗಿಲ್ಲ. ನಾನಂತೂ ಕಾಂಗ್ರೆಸ್‌ ತೊರೆಯಲ್ಲ’ ಎಂದು ಹೇಳಿದ್ದಾರೆ. ಜಿತಿನ್‌ ಪ್ರಸಾದ್‌ ಬಿಜೆಪಿ ಸೇರಿದ ಬಳಿಕ ಎಚ್ಚೆತ್ತ ಪ್ರಿಯಾಂಕಾ ವಾದ್ರಾ ಅವರು ಸಚಿನ್‌ ಪೈಲಟ್‌ಗೆ ದೂರವಾಣಿ ಕರೆ ಮಾಡಿ ಶೀಘ್ರವೇ ಎಲ್ಲವನ್ನೂ ಸರಿಪಡಿಸುವ ಭರವಸೆ ನೀಡಿದ್ದಾರೆ.

ಸಿಂಧಿಯಾ ಬಗ್ಗೆ ಅನುಕಂಪ ತೋರಿದ ರಾಹುಲ್‌ಗೆ ‘ಸಚಿನ್ ಪೈಲಟ್’ ತಿರುಗುಬಾಣ..!Source link

Leave a Reply

Your email address will not be published.