ಹೈಲೈಟ್ಸ್‌:

  • ವಲಸೆ ಹೋದವರು ರಾಜಧಾನಿಯತ್ತ ದಾಂಗುಡಿ
  • ಹೊರಗಿನಿಂದ ಬಂದ ಎಲ್ಲರ ತಪಾಸಣೆ ನಡೆಯುತ್ತಿಲ್ಲ
  • ಮಾಹಿತಿ ಕಲೆ ಹಾಕುವ ಕೆಲಸವೂ ಆಗುತ್ತಿಲ್ಲ

ಬೆಂಗಳೂರು: ರಾಜಧಾನಿಯಲ್ಲಿ ಸೋಂಕು ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಆದರೆ, ಲಾಕ್‌ಡೌನ್‌ ಸಡಿಲಿಕೆ ಸೂಚನೆ ಬೆನ್ನಲ್ಲೇ ನಗರದತ್ತ ಮರು ವಲಸೆ ಶುರುವಾಗಿರುವುದು ಸೋಂಕು ಹೆಚ್ಚಳವಾಗುವ ಆತಂಕ ಮೂಡಿಸಿದೆ.

ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾದ ಬಳಿಕ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆಯೇ ನಗರ ತೊರೆದ ಲಕ್ಷಾಂತರ ಜನರು, ಗ್ರಾಮೀಣ ಭಾಗಕ್ಕೆ ವಲಸೆ ಹೋಗಿದ್ದರು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿದೆ. ರಾಜ್ಯದ ಶೇ. 80ರಷ್ಟು ಸೋಂಕಿನ ಪ್ರಮಾಣ ಇತರೆ ಜಿಲ್ಲೆಗಳಲ್ಲಿದೆ.

ಗ್ರಾಮೀಣ ಭಾಗದ ಬಹಳಷ್ಟು ಜನರಿಗೆ ಇನ್ನೂ ಲಸಿಕೆ ಹಾಕಿಲ್ಲ. ಇದರಲ್ಲಿ ರಾಜಧಾನಿಯಿಂದ ಹೋದವರೂ ಬಹಳಷ್ಟು ಜನರಿದ್ದಾರೆ. ಸೋಮವಾರದಿಂದ (ಜೂನ್‌ 14) ಲಾಕ್‌ಡೌನ್‌ ಸಡಿಲಗೊಳಿಸುವ ಕುರಿತು ಸರಕಾರ ಘೋಷಿಸುತ್ತಿದ್ದಂತೆಯೇ ರಾಜಧಾನಿಗೆ ಮರು ವಲಸೆ ಚುರುಕಾಗಿದೆ.

ಮರು ವಲಸೆಯಿಂದ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ರೈಲ್ವೆ ಹಾಗೂ ಬಸ್‌ ನಿಲ್ದಾಣಗಳಲ್ಲೇ ಕೋವಿಡ್‌ ಪರೀಕ್ಷೆಗೊಳಪಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆದರೆ, ಪರೀಕ್ಷೆ, ಮಾಹಿತಿ ಸಂಗ್ರಹ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಲಾಕ್‌ಡೌನ್‌ ಸಡಿಲಿಕೆ ಸೂಚನೆ ಬೆನ್ನಲ್ಲೇ ಸಾವಿರಾರು ಜನರು ಬೇರೆ ಜಿಲ್ಲೆಗಳಿಂದ ನಗರಕ್ಕೆ ವಾಪಸಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವುದು ಅಸಾಧ್ಯ.

ಇದಲ್ಲದೆ ಸೋಮವಾರದಿಂದ ಅಂತರ ಜಿಲ್ಲೆ ಪ್ರಯಾಣಕ್ಕೆ ನಿರ್ಬಂಧ ಇಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿರುವುದರಿಂದ ಭಾರಿ ಸಂಖ್ಯೆಯ ಜನರು ನಗರಕ್ಕೆ ಬರುತ್ತಿದ್ದಾರೆ. ಅವರೆಲ್ಲರನ್ನು ಪರೀಕ್ಷೆಗೊಳಪಡಿಸಲು ಅಗತ್ಯ ಸಿಬ್ಬಂದಿ, ವ್ಯವಸ್ಥೆಯನ್ನು ಸರಕಾರ ಇನ್ನೂ ಮಾಡಿಕೊಂಡಿಲ್ಲ.

ರಸ್ತೆ ಮಾರ್ಗದಲ್ಲಿ ಬರುವವರನ್ನು ಟೋಲ್‌ಗೇಟ್‌ಗಳಲ್ಲಿ ತಡೆದು ಪರೀಕ್ಷಿಸುವ ಸಾಧ್ಯತೆ ಇದೆಯಾದರೂ ಅದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣದಲ್ಲಿ ಪರೀಕ್ಷೆ ನಡೆಯುತ್ತಿದೆಯಾದರೂ ಕಡ್ಡಾಯ ಏನೂ ಇಲ್ಲ. ಹಲವರು ರೈಲು, ಬಸ್ಸಿನಿಂದ ಇಳಿದವರು ನೇರವಾಗಿ ನಗರ ಪ್ರವೇಶಿಸುತ್ತಿದ್ದಾರೆ.

ರಾಜ್ಯದಲ್ಲಿ ಸೆಮಿ ಲಾಕ್‌ಡೌನ್‌ ಘೋಷಣೆ: ಊರಿನತ್ತ ಹೆಜ್ಜೆ ಇಟ್ಟ ಬೆಂಗಳೂರಿನ ವಲಸೆ ಕಾರ್ಮಿಕರು!
ಬೆಂಗಳೂರು ನಗರಕ್ಕೆ ಹೆಚ್ಚಿನ ಜನರು ವಾಪಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣ, ಬಸ್‌ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಆ್ಯಂಟಿಜೆನ್‌ ಟೆಸ್ಟ್‌ಗಳನ್ನು ನಡೆಸಲಾಗುತ್ತದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ, ಇದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತದೆ ಎನ್ನುವುದು ಬಹಳ ಮುಖ್ಯ. ಗೃಹ ಸಚಿವರ ಹೇಳಿಕೆ ಗಂಭೀರವಾಗಿ ಪರಿಗಣಿಸಿದರೆ ಮಾತ್ರವೇ ಸೋಂಕು ತಹಬದಿಗೆ ಬರಲು ಸಾಧ್ಯ.

17 ಲಕ್ಷ ಜನರು ಮರು ವಲಸೆ..?

ಕೊರೊನಾ ಕೇಸ್‌ ಹೆಚ್ಚಾಗುತ್ತಿದ್ದಂತೆಯೇ ಬೆಂಗಳೂರಿನಿಂದ 17 ಲಕ್ಷಕ್ಕೂ ಹೆಚ್ಚು ವಲಸೆ ಹೋಗಿದ್ದರು ಎಂಬ ಮಾಹಿತಿಯಿದೆ. ಇದೀಗ ಬಹುತೇಕ ಎಲ್ಲರೂ ವಾಪಸ್‌ ಬರುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದಿದ್ದರೂ, ಸಿಕ್ಕ ಸಿಕ್ಕ ವಾಹನ, ಸ್ವಂತ ವಾಹನ ಹಾಗೂ ರೈಲುಗಳ ಮೂಲಕ ನಗರಕ್ಕೆ ದಾಂಗುಡಿಯಿಡುತ್ತಿದ್ದಾರೆ.

ಬೆಂಗಳೂರಲ್ಲಿ ಕೊರೊನಾ ಬಾನಗಡಿ.. ಬ್ಯಾಗು ಹಿಡಿ.. ಊರಿಗೆ ನಡಿ.. ವಲಸೆ ಕಾರ್ಮಿಕರ ಗಡಿಬಿಡಿ..
ಗಡಿಯಲ್ಲಿ ಹೆಚ್ಚಿದ ವಾಹನ ಸಂಚಾರ: ಬೆಂಗಳೂರು ನಗರ ಪ್ರವೇಶಿಸುವ ಹೆಬ್ಬಾಗಿಲು ಎಂದೇ ಹೇಳಲಾಗುವ ತುಮಕೂರು ರಸ್ತೆಯಲ್ಲಿ ಕಳೆದ ಕೆಲ ದಿನಗಳಿಂದ ಲಾಕ್‌ಡೌನ್‌ ಸಡಿಲಿಕೆ ಅವಧಿಯಲ್ಲಿ ವಾಹನಗಳ ದಟ್ಟಣೆ ಕಂಡು ಬಂದಿತ್ತು. ವಲಸೆ ಹೋಗಿದ್ದ ಹಲವರು ಸಿಕ್ಕ ಸಿಕ್ಕ ವಾಹನಗಳಲ್ಲಿ ಕುಟುಂಬ ಸಮೇತರಾಗಿ ನಗರಕ್ಕೆ ಮರಳುವ ದೃಶ್ಯ ಕಂಡು ಬಂದಿತ್ತು. ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಅತ್ತಿಬೆಲೆಯಲ್ಲೂ ದಟ್ಟಣೆ ಕಂಡು ಬಂದಿತ್ತು.

ಪರೀಕ್ಷೆ ಪ್ರಮಾಣ ಹೆಚ್ಚಳ ಅಗತ್ಯ: ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿನಿತ್ಯ 78-80 ಸಾವಿರ ಕೊರೊನಾ ಟೆಸ್ಟ್‌ ಮಾಡಲಾಗುತ್ತಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚು ಮಾಡಿದರೆ ಮಾತ್ರವೇ ಸೋಂಕನ್ನು ತಡೆಯಹುದು.
ಬೆಂಗಳೂರಿಗೆ ಮತ್ತೆ ಕೊರೊನಾತಂಕ..! ಗಂಟು ಮೂಟೆ ಸಹಿತ ರಾಜಧಾನಿಗೆ ಲಗ್ಗೆ ಇಡ್ತಿದ್ದಾರೆ ಜನ..!Source link

Leave a Reply

Your email address will not be published.