ಹೈಲೈಟ್ಸ್‌:

  • ಆಗಸ್ಟ್‌ 4 ರಿಂದ ಆರಂಭವಾಗುವ ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿರುವ ಭಾರತ-ಇಂಗ್ಲೆಂಡ್‌.
  • ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ: ಪಾರ್ಥಿವ್‌ ಪಟೇಲ್‌
  • ಸದ್ಯ ಕೌಂಟಿ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯ ಆಡುತ್ತಿರುವ ಟೀಮ್‌ ಇಂಡಿಯಾ.

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡ ಎಂದು ಮಾಜಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಮ್‌ ಇಂಡಿಯಾ ವೇಗದ ಬೌಲಿಂಗ್‌ ವಿಭಾಗದಲ್ಲಿ ವಿಭಿನ್ನ ತರಹದ ಆಯ್ಕೆಗಳಿವೆ. ಈ ಹಿನ್ನೆಲೆಯಲ್ಲಿ ಭಾರತ ತಂಡಕ್ಕೆ ಟೆಸ್ಟ್‌ ಸರಣಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಭಾರತ ಸೋಲು ಅನುಭವಿಸಿದೆ ನಿಜ. ಆದರೆ, ಇಂಗ್ಲೆಂಡ್‌ ಸರಣಿಗೆ ಕೊಹ್ಲಿ ಪಡೆ ಅತ್ಯುತ್ತಮ ತಯಾರಿ ನಡೆಸಿದೆ ಎಂದು ಹೇಳಿದರು.

‘ದಿ ಕರ್ಟ್ಲಿ ಅಂಡ್‌ ಕರಿಷ್ಮಾ ಶೋ’ನಲ್ಲಿ ಮಾತನಾಡಿದ ಪಾರ್ಥಿವ್‌ ಪಟೇಲ್‌, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಲು ಕಾರಣಗಳನ್ನು ವಿವರಿಸಿದ್ದಾರೆ.

IND vs ENG: ರಿಷಭ್ ಪಂತ್ ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಂದ ಪಾರ್ಥಿವ್ ಪಟೇಲ್!

“ಮುಂದಿನ ಟೆಸ್ಟ್‌ ಸರಣಿಯಲ್ಲಿ ಗೆಲುವು ಸಾಧಿಸಲು ಭಾರತ ತಂಡಕ್ಕೆ ಉತ್ತಮ ಅವಕಾಶವಿದೆ. ಏಕೆಂದರೆ, ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯಕ್ಕಿಂತಲೂ ಈ ಸರಣಿಗೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಕ್ಕಿದೆ, ಕಳೆದ ಪ್ರವಾಸಕ್ಕಿಂತಲೂ ಈ ಬಾರಿ ಟೀಮ್‌ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ, ವೇಗದ ಬೌಲಿಂಗ್‌ ವಿಭಾಗ ಕೂಡ ಅತ್ಯುತ್ತಮವಾಗಿದೆ. ಈ ಕಾರಣಗಳಿಂದಾಗಿ ಭಾರತ ಟೆಸ್ಟ್ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದೆ,” ಎಂದು ಪಾರ್ಥಿವ್‌ ಪಟೇಲ್‌ ತಿಳಿಸಿದರು.

ಶ್ರೀಲಂಕಾ ವಿರುದ್ಧ 3ನೇ ಪಂದ್ಯಕ್ಕೆ ಭಾರತ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ?

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಬಗ್ಗೆ ವೆಸ್ಟ್ ಇಂಡೀಸ್‌ ದಿಗ್ಗಜ ಕರ್ಟ್ಲಿ ಅಂಬ್ರೋಸ್‌ ಕೂಡ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಚಾಂಪಿಯನ್‌ಷಿಪ್‌ ಸೋತಿರುವ ಭಾರತ ತಂಡಕ್ಕೆ ಬೇಸರವಾಗಿರುವುದು ನಿಜ. ಆದರೆ, ಇಂಗ್ಲೆಂಡ್ ವಿರುದ್ಧ ಕೊಹ್ಲಿ ಪಡೆ ಪುಟಿದೇಳಲಿದೆ. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಟೀಮ್‌ ಇಂಡಿಯಾ ಆಡಿದ್ದೇ ಆದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಗಿಲ್‌ ಬಳಿಕ ಭಾರತದ ವೇಗಿ ಅವೇಶ್ ಖಾನ್‌ ಕೂಡ ಇಂಗ್ಲೆಂಡ್‌ ಪ್ರವಾಸದಿಂದ ಔಟ್‌!

“ಈ ಸರಣಿಯು ತೀವ್ರ ಕುತೂಹಲ ಕೆರಳಿಸಿದೆ ಎಂದು ನಾನು ನಂಬುತ್ತೇನೆ. ನ್ಯೂಜಿಲೆಂಡ್‌ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಸೋತಿರುವ ವಿರಾಟ್‌ ಕೊಹ್ಲಿ ಅಂಡ್‌ ಬಾಯ್ಸ್‌ಗೆ ತಮ್ಮ ಸಾಮರ್ಥ್ಯವನ್ನುಸಾಬೀತುಪಡಿಸಲು ಇದು ಸಕಾಲ. ಇದರಲ್ಲಿ ಗೆಲ್ಲುವ ತಂಡವನ್ನು ಆರಿಸುವುದು ಕಠಿಣ. ಆದರೆ, ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ತೋರಿದರೆ, ಗೆಲ್ಲುವ ಸಾಧ್ಯತೆ ಇರುತ್ತದೆ,” ಎಂದು ಅಂಬ್ರೋಸ್‌ ತಿಳಿಸಿದರು.

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟ, ಆರ್ಚರ್‌ಗೆ ಇಲ್ಲ ಸ್ಥಾನ!Source link

Leave a Reply

Your email address will not be published.