ಹೈಲೈಟ್ಸ್‌:

  • ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಸವಾಲು ಸ್ವೀಕರಿಸಲು ಸಿದ್ದರಿದ್ದೇವೆಂದ ಆರ್‌ ಅಶ್ವಿನ್‌.
  • ಜೂನ್ 18 ರಿಂದ 22ರವರೆಗೆ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ.
  • ಸದ್ಯ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಸೌತಾಮ್ಟನ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದೆ.

ಹೊಸದಿಲ್ಲಿ: ಮುಂಬರುವ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ವೃತ್ತಿಪರ ನ್ಯೂಜಿಲೆಂಡ್‌ ತಂಡದಿಂದ ಕಠಿಣ ಸವಾಲು ಎದುರಿಸುವ ನಿರೀಕ್ಷೆ ಇದೆ ಎಂದು ಹೇಳಿದ ಭಾರತ ತಂಡದ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌, ಇಂಗ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಕಿವೀಸ್‌ಗೆ ಫೈನಲ್‌ ಪಂದ್ಯಕ್ಕೆ ಲಾಭದಾಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸದ್ಯ ನ್ಯೂಜಿಲೆಂಡ್‌ ತಂಡ ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ತೊಡಗಿದೆ. ಮತ್ತೊಂದೆಡೆ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಕ್ವಾರಂಟೈನ್‌ ಮುಗಿಸಿಕೊಂಡು ಮಹತ್ವದ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದೆ. ಉಭಯ ತಂಡಗಳ ನಡುವಿನ ಡಬ್ಯುಟಿಸಿ ಫೈಣಲ್‌ ಪಂದ್ಯ ಜೂನ್‌ 18 ರಿಂದ 22ರ ವರೆಗೆ ಸೌತಾಮ್ಟನ್‌ನಲ್ಲಿ ನಡೆಯಲಿದೆ.

ಇಲ್ಲಿನ ಪರಿಸ್ಥಿತಿಗಳಿಗೆ ಬೇಗ ಹೊಂದಿಕೊಂಡು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಗೆಲ್ಲುವ ಉತ್ತಮ ಅವಕಾಶವನ್ನು ಪಡೆದುಕೊಳ್ಳುತ್ತೇವೆಂದು ಸಂದರ್ಶನದಲ್ಲಿ ಅಶ್ವಿನ್‌ ಹೇಳಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದೆ.

ಹೀಗಾದರೆ WTC ಫೈನಲ್‌ನಲ್ಲಿ ಜಡೇಜಾ ಆಡೋದು ಡೌಟು ಎಂದ ಮಾಜಿ ಸೆಲೆಕ್ಟರ್‌!

“ನಾನು ಬಹಳ ಯೋಜಿತ ಎಂದು ನಿರೀಕ್ಷಿಸುತ್ತೇನೆ ಹಾಗೂ ನಮ್ಮ ಬಳಿಗೆ ನ್ಯೂಜಿಲೆಂಡ್ ತಂಡ ಬರಲು ಶಕ್ತಿಯುತವಾಗಿದೆ. ಇಂಗ್ಲೆಂಡ್‌ ವಿರುದ್ಧ ಅವರು ಆಡುವ ಎರಡು ಟೆಸ್ಟ್‌ ಪಂದ್ಯಗಳು ಖಂಡಿತಾ ಕಿವೀಸ್‌ಗೆ ಲಾಭದಾಯಕವಾಗಿದೆ. ಹಾಗಾಗಿ, ನಾವು ಬಹುಬೇಗ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು,” ಎಂದು ಅಶ್ವಿನ್‌ ತಿಳಿಸಿದರು.

“ನಾವು ಇಷ್ಟು ವರ್ಷಗಳಿಂದ ತಟಸ್ಥ ಸ್ಥಳದಲ್ಲಿ ಟೆಸ್ಟ್ ಕ್ರಿಕೆಟ್‌ ಆಡಿರಲಿಲ್ಲ. ಹಾಗಾಗಿ, ಇದು ನಿಜಕ್ಕೂ ತೀವ್ರ ಕುತೂಹಲವನ್ನು ಕೆರಳಿಸಿದೆ. ಟೆಸ್ಟ್ ಕ್ರಿಕೆಟ್ ನಮ್ಮಲ್ಲಿರುವ ಕ್ರೀಡೆಯ ಅಂತಿಮ ಸ್ವರೂಪವಾಗಿದೆ. ಕ್ರಿಕೆಟಿಗರ ಸಾಮರ್ಥ್ಯ, ಮಾನಸಿಕ ಸಾಮರ್ಥ್ಯ ಹಾಗೂ ಎಲ್ಲವನ್ನು ಪರೀಕ್ಷೆ ಮಾಡಲು ಇದು ಅತ್ಯುತ್ತಮ ಸ್ವರೂಪವಾಗಿದೆ. ಟೆಸ್ಟ್ ಕ್ರಿಕೆಟ್‌ನ ಕೆಲ ಅತ್ಯುತ್ತಮ ಸಂದರ್ಭಗಳನ್ನು ಕಣ್ತುಂಬಿಸಿಕೊಳ್ಳಲು ಕ್ರಿಕೆಟಿಗರು ಈ ರೀತಿಯ ವೇದಿಕೆಯನ್ನು ದೀರ್ಘಕಾಲದಿಂದ ಬಯಸಿದ್ದರು. ಹಾಗಾಗಿ, ಫೈನಲ್‌ ಕಾದಾಟಕ್ಕಾಗಿ ಎದುರು ನೋಡುತ್ತಿದ್ದೇನೆ,” ಎಂದು ಹೇಳಿದರು.

ಇಂಗ್ಲೆಂಡ್‌ನಲ್ಲಿ ಪರಿಸ್ಥಿತಿಗಳು ರಾಜನಿದ್ದಂತೆ ಹಾಗೂ ಚೆಂಡಿನ ಪರಿಸ್ಥಿತಿ ಕೂಡ ಇಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದು ಅಶ್ವಿನ್‌ ಅವರ ಅಭಿಪ್ರಾಯ.

“ನೀವು ಅಂಗಳಕ್ಕೆ ಹೊದಿಕೆ ಹಾಕುವ ಅಗತ್ಯವಿಲ್ಲ ಅಥವಾ ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ನೀವು ಮೋಡಗಳಿಗೆ ಹೊದಿಕೆಯಾಗುವ ಅಗತ್ಯವಿದೆ ಎಂದು ನಾನು ಕೆಲವೊಮ್ಮೆ ತಮಾಷೆಯಾಗಿ ಹೇಳಿದ್ದೇನೆ. ಚೆಂಡಿನ ಪರಿಸ್ಥಿತಿ ಹಾಗೂ ಪಂದ್ಯದ ಸನ್ನಿವೇಶ ಬಹಳ ಮುಖ್ಯ. ಎದ್ದು ಕಾಣುವ ಒಂದು ಅಂಶವೆಂದರೆ ಟೆಸ್ಟ್ ಕ್ರಿಕೆಟ್‌ನ ತಿಳುವಳಿಕೆಯು ಜನಸಮೂಹವು ಇಲ್ಲಿಗೆ ಬರುತ್ತದೆ,” ಎಂದು ಅಶ್ವಿನ್‌ ತಿಳಿಸಿದರು.

ಡಬ್ಲ್ಯುಟಿಸಿ ಫೈನಲ್‌ಗೆ ಇಶಾಂತ್‌ ಬದಲು ಈತನಿಗೆ ಚಾನ್ಸ್‌ ಕೊಡಿ ಎಂದ ಭಜ್ಜಿ!Source link

Leave a Reply

Your email address will not be published.