ಹೈಲೈಟ್ಸ್‌:

  • ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ನಡೆಯಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್.
  • ಜೂನ್ 18-22ರವರೆಗೆ ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
  • ಗೆಲ್ಲುವ ಮತ್ತು ಸೋಲುವ ತಂಡಗಳಿಗೆ ಭಾರಿ ಬಹುಮಾನ ಘೋಷಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್.

ಹೊಸದಿಲ್ಲಿ: ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ನಡೆಯಲಿರುವ ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಬರೋಬ್ಬರಿ 1.6 ಮಿಲಿಯನ್‌ ಡಾಲರ್‌ (ಅಂದಾಜು 11.7 ಕೋಟಿ ರೂ.) ಬಹುಮಾನ ಮೊತ್ತ ಸಿಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸೋಮವಾರ ಘೋಷಿಸಿದೆ.

ಜೂನ್‌ 18ರಿಂದ 22ರವರೆಗೆ ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಇಲ್ಲಿ ಸೋಲುವ ತಂಡಕ್ಕೂ 5.85 ಕೋಟಿ ರೂ.ಗಳ ಭಾರಿ ಮೊತ್ತ ಸಿಗಲಿದೆ. ಇನ್ನು ಮೂರನೇ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ಮತ್ತು ನಾಲ್ಕನೇ ಸ್ಥಾನ ಪಡೆದ ಇಂಗ್ಲೆಂಡ್‌ ತಂಡಗಳಿಗೆ ಕ್ರಮವಾಗಿ 3.29 ಕೋಟಿ ರೂ ಮತ್ತು 2.56 ಕೋಟಿ ರೂ. ಲಭ್ಯವಾಗಲಿದೆ.

ಐದನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ 1.46 ಕೋಟಿ ರೂ. ಸಿಕ್ಕರೆ, ನಂತರದ ಸ್ಥಾನಗಳಲ್ಲಿರುವ ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳಿಗೆ ತಲಾ 73.18 ಲಕ್ಷ ರೂ. ಸಿಗಲಿದೆ.

WTC ಫೈನಲ್‌ಗೂ ಮೊದಲೇ ಟೀಮ್ ಇಂಡಿಯಾದ ನಂ.1 ಪಟ್ಟ ಕಸಿದ ಕಿವೀಸ್‌!

“ಒಂದು ವೇಳೆ ಫೈನಲ್‌ ಪಂದ್ಯ ಡ್ರಾ ಫಲಿತಾಂಶ ಕಂಡರೆ ಅಥವಾ ಟೈ ಫಲಿತಾಂಶ ಹೊರಬಿದ್ದರೆ, ಪ್ರಥಮ ಮತ್ತು ದ್ವಿತೀಯ ಸ್ಥಾನಕ್ಕೆ ಇರುವ ಬಹುಮಾನ ಮೊತ್ತವನ್ನು ಒಟ್ಟಾಗಿ ಹಂಚಿಕೊಳ್ಳಲಿವೆ. ಜೊತೆಗೆ ಜಂಟಿ ಚಾಂಪಿಯನ್ಸ್‌ ಎನಿಸಿಕೊಳ್ಳಲಿವೆ,” ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ವರ್ಷದ ಅಂತ್ಯಕ್ಕೆ ಐಸಿಸಿ ಟೆಸ್ಟ್‌ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡಕ್ಕೆ ಟೆಸ್ಟ್‌ ಮೇಸ್‌ (ಗದೆ) ನೀಡಲಾಗುತ್ತಿತ್ತು. ಈಗ ಇದನ್ನೇ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಗೆಲ್ಲುವ ತಂಡಕ್ಕೆ ಕೊಡಲಾಗುವುದು.

“ಇಂಗ್ಲೆಂಡ್‌ನ ಐಶಾರಾಮಿ ಸರಕು ಉತ್ಪನ್ನ ಸಂಸ್ಥೆಯಾದ ಥಾಮಸ್ ಲೈಟ್‌ ಟೆಸ್ಟ್ ಚಾಂಪಿಯನ್‌ಷಿಪ್‌ ಮೇಸ್‌ (ಗದೆ) ವಿನ್ಯಾಸ ಮಾಡಿದೆ. ಟೆಸ್ಟ್‌ ಕ್ರಿಕೆಟ್‌ನ ಜಾಗತಿಕ ಸ್ವರೂಪವನ್ನು ಪ್ರತಿಬಿಂಬಿಸುವಂಥದ್ದಾಗಿದೆ,” ಎಂದು ಐಸಿಸಿ ಹೇಳಿದೆ.

ಕಿವೀಸ್‌ಗೆ ಮೇಲುಗೈ ಇದೆ, ಆದರೆ ನಮಗೆ ಆತಂಕವಿಲ್ಲ: ಪೂಜಾರ ವಿಶ್ವಾಸ!

ಬಹುಮಾನ ಮೊತ್ತದ ವಿವರ (ಅಂದಾಜು)
ಚಾಂಪಿಯನ್ಸ್‌: 11.7 ಕೋಟಿ ರೂ.
ರನ್ನರ್ಸ್‌ಅಪ್: 5.85 ಕೋಟಿ ರೂ.
ಮೂರನೇ ಸ್ಥಾನ: 3.29 ಕೋಟಿ ರೂ.
ನಾಲ್ಕನೇ ಸ್ಥಾನ: 2.56 ಕೋಟಿ ರೂ.
ಐದನೇ ಸ್ಥಾನ: 1.46 ಕೋಟಿ ರೂ.
ನಂತರದ ಸ್ಥಾನಗಳಿಗೆ: 73.18 ಲಕ್ಷ ರೂ.Source link

Leave a Reply

Your email address will not be published.