ಹೈಲೈಟ್ಸ್‌:

  • ಇಬ್ಬರ ಕೈ ಹಿಡಿದ ರಾಹುಲ್‌ ಗಾಂಧಿ
  • ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಮಾಡಿದ ಮನವಿ ಏನು?
  • ಭಿನ್ನಮತ ಮರೆತು ಜೊತೆಯಾಗಿ ಕೆಲಸ ಮಾಡಿ ಎಂದ ರಾಹುಲ್!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಇದೆ. ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಉಳಿದಿರುವಾಗಲೇ ಮುಖ್ಯಮಂತ್ರಿ ಪಟ್ಟಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಇಬ್ಬರು ಮುಖಂಡರ ನಡುವೆ ನಡೆಯುತ್ತಿರುವ ಆಂತರಿಕ ಸಂಘರ್ಷ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಬುಲಾವಿನ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ಗೆ ರಾಹುಲ್ ಗಾಂಧಿ ಒಂದು ಸಂದೇಶ ಕೊಟ್ಟಿದ್ದಾರೆ.

ಇಬ್ಬರ ಕೈ ಹಿಡಿದ ರಾಹುಲ್ ಗಾಂಧಿ

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ರಾಜ್ಯ ಕಾಂಗ್ರೆಸ್‌ ಪ್ರಭಾವಿ ನಾಯಕರು. ನಮ್ಮದೇ ಆದ ವರ್ಚಸ್ಸನ್ನು ಇಬ್ಬರು ನಾಯಕರು ಹೊಂದಿದ್ದಾರೆ. ಆದರೆ ಇಬ್ಬರ ನಾಯಕರ ನಡುವಿನ ಶೀತಲ ಸಮರ ಹಾಗೂ ಆಪ್ತರ ಹೇಳಿಕೆಗಳು ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿತ್ತು. ಇದು ತಾರಕಕ್ಕೇರಿದ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಇಬ್ಬರಿಗೂ ಬುಲಾವು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆಗೆ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ.

ನಾಯಕತ್ವ ಬದಲಾವಣೆ ಗೊಂದಲ: ಬಿಜೆಪಿ ಹೈಕಮಾಂಡಿಗೆ ನೇರಾನೇರ ಸೆಡ್ಡುಹೊಡೆದ ಲಿಂಗಾಯತ ಮಠಾಧಿಪತಿಗಳು!

ರಾಜ್ಯದ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ನೀವಿಬ್ಬರು ಜೊತೆಯಾಗಿ ಹೆಜ್ಜೆ ಇಡಬೇಕು ಎಂದು ಮನವಿ ಮಾಡಿದ್ದಾರೆ. ಯಾವುದೇ ಗೊಂದಲಗಳು ಇಲ್ಲದೆ ಇಬ್ಬರು ಜೊತೆಗೂಡಿ ಕೆಲಸ ಮಾಡಿದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ. ಯಾವುದೇ ಹೇಳಿಕೆಗಳನ್ನು ಬಹಿರಂಗವಾಗಿ ನೀಡದಂತೆ ನಿಮ್ಮ ಆಪ್ತರಿಗೂ ಸೂಚನೆ ಕೊಡಬೇಕು ಎಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದಕ್ಕೆ ಪೂರಕ ಎಂಬಂತೆ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತನ್ನ ಅಕ್ಕ ಪಕ್ಕ ನಿಲ್ಲಿಸಿ ಇಬ್ಬರ ಕೈಯನ್ನು ಹಿಡಿದುಕೊಂಡಿರುವ ಫೋಟೋವನ್ನು ಸಿದ್ದರಾಮಯ್ಯ ಕೂಡಾ ಹಂಚಿಕೊಂಡಿದ್ದಾರೆ. ಹೀಗೆ ಸಾಂಕೇತಿಕವಾಗಿ ಇಬ್ಬರ ಕೈಯನ್ನು ಹಿಡಿಯುವ ಮೂಲಕ ಹೈಕಮಾಂಡ್‌ಗೆ ಇಬ್ಬರು ನಾಯಕರು ಮುಖ್ಯ ಹಾಗೂ ನೀವಿಬ್ಬರು ಜೊತೆಗೂಡಿ ಕೆಲಸ ಮಾಡಬೇಕು ಎಂಬ ಸಂದೇಶ ನೀಡಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.Source link

Leave a Reply

Your email address will not be published.